Crime News: ಸಿಟ್ಟಿನಲ್ಲಿ ಪ್ರೇಯಸಿಯನ್ನು ಕೊಂದು ಕುಡಿದ ಅಮಲಿನಲ್ಲಿ ಗೆಳೆಯನ ಎದುರು ಸತ್ಯ ಬಾಯಿಬಿಟ್ಟ ಹಂತಕ
ಸುಮಾರು ಮೂರು ವರ್ಷಗಳಿಂದ ಲಿವ್ ಇನ್ ಸಂಬಂಧದಲ್ಲಿದ್ದ (live-in partner) ಗೆಳತಿಯನ್ನು ಯುವಕ ಕೊಂದು (Murder Case) ಹಾಕಿರುವ ಘಟನೆ ಭೋಪಾಲ್ (Bhopal) ನಲ್ಲಿ ನಡೆದಿದೆ. ಬಳಿಕ ಯುವತಿಯ ಶವವನ್ನು ಬಚ್ಚಿಟ್ಟು, ಮದ್ಯದ ಅಮಲಿನಲ್ಲಿ ಗೆಳೆಯನ ಮುಂದೆ ಎಲ್ಲವನ್ನೂ ಹೇಳಿಕೊಂಡಿದ್ದಾನೆ. ತಮ್ಮಿಬ್ಬರ ಮಧ್ಯೆ ತೀವ್ರ ಜಗಳವಾಗಿದ್ದು, ನಾನು ಆಕೆಯನ್ನು ಕೊಂದೆ ಎಂದು ಗೆಳೆಯನ ಮುಂದೆ ಯುವಕ ಹೇಳಿಕೊಂಡಿದ್ದು, ಇದರಿಂದ ಗಾಬರಿಗೊಂಡ ಆತನ ಗೆಳಯ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.


ಭೋಪಾಲ್: ಸುಮಾರು ಮೂರು ವರ್ಷಗಳಿಂದ ಲಿವ್ ಇನ್ ಸಂಬಂಧದಲ್ಲಿದ್ದ (live-in partner) ಗೆಳತಿಯನ್ನು ಯುವಕ ಕೊಂದು (Murder Case) ಹಾಕಿರುವ ಘಟನೆ ಭೋಪಾಲ್ (Bhopal) ನಲ್ಲಿ ನಡೆದಿದೆ. ಬಳಿಕ ಯುವತಿಯ ಶವವನ್ನು ಬಚ್ಚಿಟ್ಟು, ಮದ್ಯದ ಅಮಲಿನಲ್ಲಿ ಗೆಳೆಯನ ಮುಂದೆ ಎಲ್ಲವನ್ನೂ ಹೇಳಿಕೊಂಡಿದ್ದಾನೆ. ತಮ್ಮಿಬ್ಬರ ಮಧ್ಯೆ ತೀವ್ರ ಜಗಳವಾಗಿದ್ದು, ಮಾತಿಗೆ ಮಾತು ಬೆಳೆದು ನಾನು ಆಕೆಯನ್ನು ಕೊಂದೆ ಎಂದು ಗೆಳೆಯನ ಮುಂದೆ ಯುವಕ ಹೇಳಿಕೊಂಡಿದ್ದು, ಇದರಿಂದ ಗಾಬರಿಗೊಂಡ ಆತನ ಗೆಳೆಯ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಯುವಕನನ್ನು ಪೊಲೀಸರು ಬಂಧಿಸಿದ್ದು, ಆತನ ಮನೆಯಿಂದ ಯುವತಿಯ ಕೊಳೆತ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದಾರೆ.
32 ವರ್ಷದ ಸಚಿನ್ ರಜಪೂತ್ ಮತ್ತು 29 ವರ್ಷದ ರಿತಿಕಾ ಸೇನ್ ಸುಮಾರು ಮೂರು ವರ್ಷಗಳಿಂದ ಲಿವ್ ಇನ್ ಸಂಬಂಧದಲ್ಲಿದ್ದರು. ಇವರಿಬ್ಬರ ಮಧ್ಯೆ ಜೂನ್ 27ರಂದು ರಾತ್ರಿ ತೀವ್ರ ವಾದ ವಿವಾದ ನಡೆದಿದೆ. ಈ ನಡುವೆ ತೀವ್ರ ಆಕ್ರೋಶಗೊಂಡಿದ್ದ ಸಚಿನ್ ವಾಗ್ವಾದದ ಸಂದರ್ಭದಲ್ಲಿ ರಿತಿಕಾಳ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಏನು ಮಾಡಬೇಕೆಂದು ತೋಚದೆ ಆಕೆಯ ದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ, ಹಗ್ಗದಿಂದ ಕಟ್ಟಿ, ಬಾಡಿಗೆ ಮನೆಯೊಳಗೆ ಬಚ್ಚಿಟ್ಟಿದ್ದಾನೆ.
ರಿತಿಕಾಳ ಕೊಲೆಯ ಬಳಿಕ ಸಚಿನ್ ತನ್ನ ಸ್ನೇಹಿತನನ್ನು ಭೇಟಿಯಾಗಿದ್ದು, ಇಬ್ಬರೂ ಒಟ್ಟಿಗೆ ಮದ್ಯ ಸೇವನೆ ಮಾಡಿದ್ದಾರೆ. ಈ ವೇಳೆ ಸಚಿನ್ ತಾನು ಮಾಡಿದ ತಪ್ಪನ್ನು ಗೆಳೆಯನ ಮುಂದೆ ಹೇಳಿಕೊಂಡಿದ್ದಾನೆ. ಮೊದಲಿಗೆ ಸಚಿನ್ ಗೆಳೆಯ ಆತ ಮದ್ಯದ ಅಮಲಿನಲ್ಲಿ ಏನೇನೋ ಹೇಳುತ್ತಿದ್ದಾನೆ ಎಂದು ಭಾವಿಸಿ ಅದನ್ನು ತಳ್ಳಿ ಹಾಕಿದ್ದಾನೆ. ಮರುದಿನ ಮತ್ತೆ ಸಚಿನ್ ತನ್ನ ಮಾತನ್ನು ಅದೇ ಮಾತನ್ನು ಹೇಳಿ ತಾನು ತಪ್ಪು ಮಾಡಿದ್ದೇನೆ ಎಂದಾಗ ಸ್ನೇಹಿತ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾನೆ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಇದನ್ನೂ ಓದಿ: Physical Abuse: ನಿದ್ದೆ ಬಂತೆಂದು ಹೈವೇಲಿ ಕಾರ್ ನಿಲ್ಸಿದ ಡ್ರೈವರ್; ನಡುರಾತ್ರಿ ಬಾಲಕಿ ಮೇಲೆ ನಡೀತು ಘನಘೋರ ಕೃತ್ಯ!
ಸಚಿನ್ ಗೆಳೆಯ ಹೇಳಿದ ಮಾಹಿತಿ ಆಧಾರದಲ್ಲಿ ಪೊಲೀಸರು ಸಚಿನ್ ರಜಪೂತ್ ನನ್ನು ಬಂಧಿಸಿ ಆತ ವಾಸವಿದ್ದ ಬಾಡಿಗೆ ಮನೆಯಲ್ಲಿದ್ದ ರಿತಿಕಾ ಸೇನ್ ಳ ಕೊಳೆತ ಶವವನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಸಚಿನ ವಿಚಾರಣೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದು, ಅಗತ್ಯ ಪುರಾವೆಗಳನ್ನು ಅವನ ಬಾಡಿಗೆ ಮನೆಯಿಂದ ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.