Rajasthan Woman Murder: ಬೆಳ್ಳಿ ಕಾಲ್ಗೆಜ್ಜೆಗಾಗಿ ಮಹಿಳೆಯ ಗಂಟಲು ಕೊಯ್ದು, ಕಾಲು ಕತ್ತರಿಸಿದ ದುಷ್ಕರ್ಮಿಗಳು
Rajasthan Woman Murder: ಎರಡು ಕೆ.ಜಿ. ಮೌಲ್ಯದ ಬೆಳ್ಳಿಯ ಕಾಲ್ಗೆಜ್ಜೆಗಳಿಗಾಗಿ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಗಂಟಲು ಕೊಯ್ದ, ಎರಡೂ ಕಾಲುಗಳನ್ನು ಕತ್ತರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಕತ್ತರಿಸಿದ ದೇಹದ ಭಾಗಗಳು ಸಮೀಪದ ಕೊಳದಲ್ಲಿ ಪತ್ತೆಯಾಗಿವೆ. ಮಹಿಳೆಯ ಕಾಲಿನಲ್ಲಿ ಧರಿಸಿದ್ದ ಎರಡು ದಪ್ಪ ಬೆಳ್ಳಿಯ ಗೆಜ್ಜೆಗಳಿಗಾಗಿ ಈ ಕೊಲೆಗೆ ಕಾರಣವೆಂದು ಆರೋಪಿಸಲಾಗಿದೆ.


ಸವಾಯಿ ಮಾಧೋಪುರ: ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆ (Rajasthan Woman Murder) ಯಲ್ಲಿ ಭಾನುವಾರ ಬೆಳಗ್ಗೆ ಒಬ್ಬ ಮಹಿಳೆಯ ಶವ ಕೃಷಿ ಭೂಮಿಯಲ್ಲಿ ಪತ್ತೆಯಾಗಿದ್ದು. ಆಕೆಯ ಗಂಟಲು ಕೊಯ್ದ(Throat Slit), ಎರಡೂ ಕಾಲುಗಳನ್ನು ಕತ್ತರಿಸಿ (Ankles severed) ಭೀಕರವಾಗಿ ಕೊಲೆ (Woman Murder)ಮಾಡಲಾಗಿದೆ. ಕತ್ತರಿಸಿದ ದೇಹದ ಭಾಗಗಳು ಸಮೀಪದ ಕೊಳದಲ್ಲಿ ಪತ್ತೆಯಾಗಿವೆ. ಮಹಿಳೆಯ ಕಾಲಿನಲ್ಲಿ ಧರಿಸಿದ್ದ ಎರಡು ದಪ್ಪ ಬೆಳ್ಳಿಯ ಕಡಗಗಳೇ ಈ ಕೊಲೆಗೆ ಕಾರಣವೆಂದು ಆರೋಪಿಸಲಾಗಿದೆ. 50 ವರ್ಷದ ಮಹಿಳೆ ತನ್ನ ಕಾಲಿಗೆ 2 ಕೆಜಿ ತೂಕದ ಬೆಳ್ಳಿಯ ಕಡಗಗಳನ್ನು ಧರಿಸಿದ್ದಳು. ಆರೋಪಿಗಳು ಈ ಕಡಗಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ಉರ್ಮಿಳಾ ಮೀನಾ ಎಂಬಾಕೆ ಕಟ್ಟಿಗೆ ಕಡಿಯಲು ಕೃಷಿ ಭೂಮಿಗೆ ತೆರಳಿದ್ದಳು. ಬೆಳಗ್ಗೆ 11 ಗಂಟೆಯವರೆಗೂ ಆಕೆ ಮರಳದಿದ್ದಾಗ, ಕುಟುಂಬಸ್ಥರು ಆಕೆಯನ್ನು ಹುಡುಕಲು ಆರಂಭಿಸಿದರು. ಕೃಷಿ ಭೂಮಿಯಲ್ಲಿ ಆಕೆಯ ಶವ ಕಂಡುಬಂದಾಗ ಬಾಮನ್ವಾಸ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಈ ಸುದ್ದಿಯನ್ನು ಓದಿ:UP Murder Case: ಪ್ರಿಯಕರನ ಜೊತೆ ಸೇರಿ ಗಂಡನಿಗೇ ಚಟ್ಟ ಕಟ್ಟಿದ ಪತ್ನಿ..!; ಶವ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದ ಪಾತಕಿ
ಈ ಕೊಲೆ ಗ್ರಾಮದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಯಿತು. ಕುಪಿತಗೊಂಡ ಗ್ರಾಮಸ್ಥರು ಮಹಿಳೆಯ ಶವವನ್ನು ರಸ್ತೆಯ ಮೇಲಿಟ್ಟು ರಸ್ತೆ ತಡೆ ನಡೆಸಿದರು. 24 ಗಂಟೆಗಳ ಒಳಗೆ ಕೊಲೆಗಾರರನ್ನು ಬಂಧಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಪೊಲೀಸರು ಗ್ರಾಮಸ್ಥರನ್ನು ಮತ್ತು ಕುಟುಂಬಸ್ಥರನ್ನು ರಸ್ತೆ ತಡೆಯನ್ನು ತೆರವುಗೊಳಿಸಲು ಒಪ್ಪಿಸಲು ಪ್ರಯತ್ನಿಸಿದರಾದರೂ, ಗ್ರಾಮಸ್ಥರು ಪೊಲೀಸರ ಮಾತಿಗೆ ಜಗ್ಗಲಿಲ್ಲ.
ತನಿಖೆಗೆ ಕನಿಷ್ಠ ಮೂರು ದಿನಗಳ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, 24 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಬೇಕೆಂದು ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ. ಆರೋಪಿಗಳು ಬಂಧಿತರಾಗುವವರೆಗೂ ರಸ್ತೆಯಿಂದ ಕದಲುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.