ಮೂಡಲಗಿ ಹಳ್ಳದಲ್ಲಿ ಪತ್ತೆಯಾದ 7 ಭ್ರೂಣಗಳ ಪೈಕಿ 6 ಗಂಡು ಭ್ರೂಣಗಳಾಗಿದ್ದು, ಒಂದು ಹೆಣ್ಣು ಭ್ರೂಣವಾಗಿದೆ. ಎಲ್ಲವೂ ಐದು ತಿಂಗಳಿನದ್ದಾಗಿದ್ದು, ಭ್ರೂಣಗಳ ಹತ್ಯೆಗೆ ಕಾರಣ ಮಾತ್ರ ನಿಗೂಢವಾಗಿದೆ. ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ನಡೆಸು ವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ನೀಡಿದ್ದಾರೆ.
ಆರೋಗ್ಯ ಸಚಿವ ಡಾ.ಸುಧಾಕರ್ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದ್ದಾರೆ. ಈ ನಡುವೆ ಬೆಳಗಾವಿ ಜಿಲ್ಲೆಯಾದ್ಯಂತ 185 ಸ್ಕ್ಯಾ ನಿಂಗ್ ಸೆಂಟರ್ ಗಳ ಮೇಲೆ ದಾಳಿ ನಡೆಸಲಾಗಿದೆ.
ಬೆಳಗಾವಿ ತಾಲೂಕಿನ 64, ಅಥಣಿ 24, ಸವದತ್ತಿ 8, ರಾಯಭಾಗ 8, ಚಿಕ್ಕೋಡಿ 18, ಖಾನಾಪುರ 8, ರಾಮದುರ್ಗ 6, ಗೋಕಾಕ್ 40, ಬೈಲಹೊಂಗಲ 6 ಹಾಗೂ ಹುಕ್ಕೇರಿ ಪಟ್ಟಣದಲ್ಲಿ 3 ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ದಾಳಿ ನಡೆಸಿದ್ದು, ಸರ್ಕಾರದ ಮಾರ್ಗ ಸೂಚಿ ಪಾಲನೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ.