Sunday, 21st April 2024

ಜೆಡಿಎಸ್‌ ಪಕ್ಷಕ್ಕೆ ಅನಿಲ್ ಲಾಡ್ ಸೇರ್ಪಡೆ: ಬಳ್ಳಾರಿಯಿಂದ ಕಣಕ್ಕೆ

ಳ್ಳಾರಿ: ಕಾಂಗ್ರೆಸ್ ಟಿಕೆಟ್ ನೀಡದ ಕಾರಣ, ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವು ದಾಗಿ ತಿಳಿಸಿದ್ದ ಮಾಜಿ ಶಾಸಕ ಅನಿಲ್ ಲಾಡ್ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಅನಿಲ್ ಲಾಡ್, ಮಂಗಳವಾರ ತಡರಾತ್ರಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸಮ್ಮುಖ ದಲ್ಲಿ ಅನಿಲ್‌ ಲಾಡ್‌ ಪಕ್ಷಕ್ಕೆ ಸೇರ್ಪಡೆಗೊಂಡರು.

ಇನ್ನು ನಿನ್ನೆ ತಡರಾತ್ರಿಯೇ ಜೆಡಿಎಸ್‌ ಸೇರ್ಪಡೆಗೊಂಡಿರುವ ಅನಿಲ್ ಲಾಡ್‌ಗೆ ಜೆಡಿಎಸ್ ಬಳ್ಳಾರಿ ನಗರ ವಿಧಾನಸಬಾ ಕ್ಷೇತ್ರ ಟಿಕೆಟ್‌ ನೀಡಿದೆ. ಜೆಡಿಎಸ್ ಪಟ್ಟಿಯಲ್ಲಿ ಮುನ್ನಾಭಾಯಿ ಎನ್ನುವವರಿಗೆ ಬಳ್ಳಾರಿ ನಗರ ವಿಧಾನಸಬಾ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ನೀಡಿತ್ತು. ಆದರೆ ಮಾಜಿ ಶಾಸಕ ಅನಿಲ್ ಲಾಡ್‌ ದಿಢೀರ್‌ ಪಕ್ಷ ಸೇರ್ಪಡೆ ಕಾರಣ ಬಳ್ಳಾರಿಯ ಜೆಡಿಎಸ್‌ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ.

ಬಳ್ಳಾರಿ ನಗರದ ಟಿಕೆಟ್‌ ಅನ್ನು ಭರತ್ ರೆಡ್ಡಿಗೆ ನೀಡಿರುವ ಕಾಂಗ್ರೆಸ್‌ ನಾಯಕರ ಮೇಲೆ ತೀವ್ರ ಅಸಮಾಧಾನಗೊಂಡಿದ್ದ ಅನಿಲ್‌ಲಾಡ್‌, ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನ ಬಾಕಿ ಇರುವ ಸಂದರ್ಭದಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರ್ಪಡೆಗೊಂಡು, ತಾವು ಇಚ್ಛಿಸಿದ ಸ್ಥಳದಲ್ಲೇ ಸ್ಪರ್ಧೆ ಮಾಡುವ ಅವಕಾಶ ಪಡೆದಿದ್ದಾರೆ.

error: Content is protected !!