ಚಿಕ್ಕನಾಯಕನಹಳ್ಳಿ : ೪೮ ವರ್ಷಗಳ ನಂತರ ನವಿಲೆ ಕೆರೆ ತುಂಬಿ ಕೋಡಿ ಬಿದ್ದಿದ್ದರಿಂದ ರೈತ ಸಂಘದ ನೇತೃತ್ವದಲ್ಲಿ ತುಂಬಿದ ಕೆರೆಗೆ ವಿಶೇಷ ಪೂಜೆ ಸಲ್ಲಿಸಿ ರೈತರು ಬಾಗಿನ ಅರ್ಪಿಸಿದರು.
ತುಂಬಿದ ಕೆರೆಗಳನ್ನು ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮನುಷ್ಯನ ಬದುಕಿನಲ್ಲಿ ಜೀವನಾಡಿಯಾಗಿರುವ ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸಿದರೆ ಮುಂದಿನ ದಿನಮಾನಗಳಲ್ಲಿಯೂ ಕೆರೆಗಳು ನೀರಿನಿಂದ ತುಂಬಿರಲಿ ಎಂಬ ಭಕ್ತಿ ಸಮರ್ಪಿಸಿ ದಂತಾಗಿದೆ ಎಂದು ರೈತರು ಅಭಿಪ್ರಾಯವ್ಯಕ್ತಪಡಿಸಿದರು.
ರೈತ ಸಂಘದ ಸಂಚಾಲಕ ರಾಮನಹಳ್ಳಿ ಕುಮಾರಯ್ಯ, ಶೆಟ್ಟಿಕೆರೆ ತೋಂಟರಾದ್ಯ, ಲಿಂಗಣ್ಣ, ಸಿದ್ದೇಗೌಡ್ರು, ಪ್ರಕಾಶ್, ಅಣೇಕಟ್ಟೆ ಶಿವಕುಮಾರ್, ಪ್ರಸನ್ನ, ಶೈಲಾ, ವಿಜಯಕುಮಾರಿ, ಸುಧಾ, ದಿವ್ಯ, ಆಶಾ, ಹೇಮಲತಾ, ಉಪಸ್ಥಿತರಿದ್ದರು.