Monday, 16th September 2024

ಬಸವ ಜಯಂತಿ ಅಂಗವಾಗಿ ವಿಶ್ವಗುರು ಬಸವೇಶ್ವರರ ಭಾವಚಿತ್ರ ಮೆರವಣಿಗೆ

ಮಾನ್ವಿ: ಪಟ್ಟಣದ ಬಸವ ವೃತ್ತದಲ್ಲಿ ಬಸವ ಜಯಂತಿ ಅಂಗವಾಗಿ ವಿಶ್ವಗುರು ಬಸವೇಶ್ವರರ ಭಾವಚಿತ್ರಕ್ಕೆ ಶಾಸಕ ರಾಜಾ ವೆಂಕಟಪ್ಪ ನಾಯಕ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ ರಂಜಾನ್ ಹಾಗೂ ಬಸವ ಜಯಂತಿ ಹಬ್ಬಗಳು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಾಗಿದ್ದು ಒಂದೇ ದಿನ ಬಂದಿರುವುದು ವಿಶೇಷವಾಗಿದೆ.

ಬಸವಣ್ಣನವರು ದಯೆಯೇ ಧರ್ಮದ ಮೂಲವಯ್ಯ ಎನ್ನುವುದನ್ನು ೧೨ನೇ ಶತಮಾನದಲ್ಲಿಯೇ ಭೊದಿಸಿ ದ್ದಾರೆ. ಅನುಭವ ಮಂಟಪ್ಪದ ಮೂಲಕ ಪ್ರತಿಯೋಬ್ಬ ಕಾಯಕ ಜೀವಿಗೂ ಸಮಾನತೆ ಯನ್ನು ಅತ್ಮ ಗೌರವ ವನ್ನು ತಂದುಕೊಟ್ಟಿದ್ದಾರೆ. ಮಹಮ್ಮದ್ ಫೈಗಂಬರರು ದಯೆಯು ಪ್ರತಿಯೊಬ್ಬರ ನಂಬಿಕೆಯ ಸಂಕೇತವಾಗಿದೆ ಎಂದು ಭೋದಿಸಿದ್ದಾರೆ.

ಇಬ್ಬರು ಮಹಾತ್ಮರ ಸಂದೇಶವು ಕೂಡ ಮಾನವ ಜನಾಂಗ ಶಾಂತಿ ಸೌಹಾರ್ಧತೆಯಿಂದ ಬಾಳಬೇಕು ಎನ್ನುವುದೆ ಆಗಿದೇ ತಾಲ್ಲೂಕಿನ ಕಲ್ಮಠ, ಚಿಕ್ಕಲಪರ್ವಿ, ಬಲ್ಲಟಗಿ, ತ್ರಯಾಂಬಕೇಶ್ವರ ಸೇರಿದಂತೆ ವಿವಿಧ ಮಠಗಳಲ್ಲಿ ಭಕ್ತರ ಅನುಕೂಲಕ್ಕಾಗಿ ತಲಾ ೫೦ಲಕ್ಷ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ,ಅಡವಿ ಅಮರೇಶ್ವರ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ೧೦ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಪ್ರತಿಯೊಬ್ಬರು ಮಹಾತ್ಮರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.

ತಹಸೀಲ್ದಾರ ಕಛೇರಿ ಆವರಣದಲ್ಲಿ ನಡೆದ ವೇದಿಕೆ ಕಾರ್ಯಾಕ್ರಮದಲ್ಲಿ ತಿಪ್ಪಣ್ಣ ಬಾಗಲವಾಡ ವಿಶೇಷ ಉಪನ್ಯಾಸನೀಡಿ ೧೨ನೇ ಶತಮಾನದಲ್ಲಿ ಬಸವಣ್ಣನವರು ವಚನ ಸಾಹಿತ್ಯ ಚಳುವಳಿ, ಆರ್ಥಿಕ, ಧಾರ್ಮಿಕ, ಸಾಮಾಜಿಕ, ಚಳುವಳಿಗಳ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಮೂಡಿಸಲು ಶ್ರಮಿಸಿದ್ದಾರೆೆ ಎಂದು ತಿಳಿಸಿದರು. ನ.ಯೋ.ಪ್ರ.ಅಧ್ಯಕ್ಷ ಶರಣಪ್ಪ ನಕ್ಕುಂದಿ ಮಾತನಾಡಿದರು.

ಪಟ್ಟಣದ ಬಸವ ವೃತ್ತದಿಂದ ತಹಸೀಲ್ದಾರ್ ವೃತ್ತದವರೆಗೆ ಬಸವಣ್ಣನವರ ಭಾವಚಿತ್ರ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಬಸವಣ್ಣನವರ ವಚನಗಳ ಒಡಪುಗಳನ್ನು ಹೇಳಲಾಯಿತು,ಬಸವ ಬಳಗಾದ ಮಹಿಳಾ ಸದಸ್ಯರ ನೃತ್ಯ ಗಮನ ಸೆಳೆಯಿತು. ಚೀಕಲಪರ್ವಿ ಶ್ರೀ ರುದ್ರಮುನಿಶ್ವರ ಮಠದ ಶ್ರೀ ಸದಾಶಿವ ಶ್ರೀಗಳು, ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಚಾರ್ಯ ಶ್ರೀಗಳು, ತಹಸೀಲ್ದಾರ್ ಚಂದ್ರಕಾAತ್ ಎಲ್.ಡಿ, ತಾ.ಪಂ.ಇ.ಒ. ಸ್ಟೇಲಾ ವಾರ್ಗೀಸ್, ಮಾಜಿ ಶಾಸಕ ಹಂಪಯ್ಯ ಸಾಹುಕಾರ್, ಮುಖಂಡರಾದ ರಾಜಾ ರಾಮಚಂದ್ರನಾಯಕ, ಜೆ.ಡಿ.ಎಸ್.ತಾ.ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ರವಿಭೋಸರಾಜ, ಬಸವಕೇಂದ್ರದ ಅಧ್ಯಕ್ಷರಾದ ಬಳಿಗಾರ ನಾಗರಾಜ, ಅ.ಖಿ.ಭಾ.ವೀ,ಮಹಾಸಭಾದ ತಾ.ಆಧ್ಯಕ್ಷ ಅರಣ ಚಂದಾ, ತಿಮ್ಮರೆಡ್ಡಿ ಭೋಗಾವತಿ, ಶ್ರೀಕಾಂತಗೂಳಿ, ಡಾ,ಬಸವಪ್ರಭುಪಾಟೀಲ್, ಪುರಸಭೆ ಸದಸ್ಯರಾದ ರೇವಣ ಸಿದ್ದಯ್ಯಸ್ವಾಮಿ, ಶರಣಪ್ಪ ಮೇದಾ, ಮುಖಂಡ ರಾದ ಸಬ್ಜಲಿಸಾಬ್, ಮಹ್ಮದ್ ಮುಜೀಬ್, ವಸಂತ ನಾಯಕ, ,ಖಲೀಲ್ ಖುರೇಷಿ, ಪಿ.ಐ.ಮಹದೇವಪ್ಪ ಪಂಚಮುಖಿ,ಅರಣ್ಯಧಿಕಾರಿ ರಾಜೇಶನಾಯಕ, ಪುರಸಭೆ ಮುಖ್ಯಧಿಕಾರಿ ಗಂಗಾಧರ,ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಗುಡಾಳ್. ಸೇರಿದಂತೆ ಇನ್ನಿತರರು ಇದ್ದರು.