Sunday, 27th October 2024

ಬೇಡ ಜಂಗಮ ಸಮಾಜದಿಂದ ಮುಖ್ಯಮಂತ್ರಿಗಳಿಗೆ ಮನವಿ

ಬಸವನಬಾಗೇವಾಡಿ: ಸತ್ಯಾಗ್ರಹ ನಿರತ ಬೇಡಜಂಗಮರನ್ನು ಬಂಧಿಸಿರುವುದನ್ನು ಖಂಡಿಸಿ ಹಾಗೂ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಬೇಡ ಜಂಗಮ ಸಮಾಜದ ಬಂಧುಗಳು ಬುಧವಾರ ತಹಶೀಲ್ದಾರ ವಿಜಯಕುಮಾರ ಕಡಕೋಳ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ರಾಮಲಿಂಗಯ್ಯ ಸ್ವಾಮೀಜಿ, ಶಿವರುದ್ರಯ್ಯ ಹಿರೇಮಠ ಮಾತನಾಡಿ ರಾಜ್ಯದಲ್ಲಿ ಅತಿ ಹಿಂದುಳಿದ ಜಾತಿ ಗಳಲ್ಲಿ ಬೇಡ ಜಂಗಮ ಸಮಾಜವು ಒಂದು ಈ ನಿಟ್ಟಿನಲ್ಲಿ ಬೇಡ ಜಂಗಮರಿಗೆ ಸಂವಿದಾನ ಬದ್ದವಾಗಿ ದೊರೆಯಬೇಕಾದ ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನ ಸರಕಾರ ನೀಡಬೇಕು ನಾವು ಈಗಾಗಲೇ ಬೇಡ ಜಂಗಮರು ಎನ್ನಲು ಹಲವಾರು ದಾಖಲೆಗಳು ಸರಕಾರದ ಮುಂದಿವೆ. ಬೇಡ ಜಂಗಮರು ಯಾರ ಹಕ್ಕನ್ನು ಕಿತ್ತುಕೊಂಡಿಲ್ಲಾ ಮತ್ತು ಕಿತ್ತುಕೊಳ್ಳುತ್ತಿಲಾ ಆದರೆ ನಮಗೆ ಸಂವಿಧನಾತ್ಮಕ ವಾಗಿ ಸಿಗಬೇಕಾಗಿರುವ ಹಕ್ಕನ್ನು ಪಡೆದುಕೊಳ್ಳಲು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ ಕೂಡಲೇ ಸರ್ಕಾರ ನಮಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಬೇಕು ಇಲ್ಲಾದರೆ ರಾಜ್ಯದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುದು ಎಂದರು.

ಪ್ರತಿಭಟನೆಯಲ್ಲಿ ಬಸಯ್ಯ ಹಿರೇಮಠ, ಆದಯ್ಯ ಹಿರೇಮಠ, ಗುರಸಿದ್ದಯ್ಯ ಹಿರೇಮಠ, ಶ್ರೀಶೈಲ ಕರ್ಪೂರಮಠ, ಬಿ,ಎಮ್ ಗಣಾಚಾರಿ, ಶಿವಲಿಂಗಯ್ಯ ಕಾಳಹಸ್ತೇಶ್ವರಮಠ, ಅಮರಯ್ಯ ಹಿರೇಮಠ, ಈರಯ್ಯ ಚಿಕಮಠ, ಬ,ಎ ಹಿರೇಮಠ, ರಾಚಯ್ಯ ಹಿರೇಮಠ ಸೇರಿದಂತೆ ಮುಂತಾದವರು ಇದ್ದರು.