Sunday, 23rd June 2024

ಕೈ ಸಭೆಗೆ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌’ಗೆ ಆಹ್ವಾನ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್‌ ಬಹುಮತವನ್ನು ಪಡೆದುಕೊಂಡು, ಸದ್ಯ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗಾಗಿ ರೇಸ್‌ ಜೋರಾ ಗಿದೆ.

ಸದ್ಯ ರೇಸ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಸುರೇಶ್‌, ಡಾ.ಜಿ.ಪರಮೇಶ್ವರ್‌, ಮಲ್ಲಿಕಾರ್ಜುನ ಖರ್ಗೆ, ಎಂಬಿ ಪಾಟೀಲ್‌, ಕೆ.ಹೆಚ್ ಮುನಿಯಪ್ಪರವರು ಇದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ಕರೆದಿದ್ದು, ಸಭೆಯಲ್ಲಿ ಶಾಸಕಾಂಗ ನಾಯಕ ನನ್ನು ಆಯ್ಕೆ ಮಾಡಲಿದ್ದು, ಈ ಮೂಲಕ ರಾಜ್ಯಕ್ಕೆ ಹೊಸ ಸಿಎಂ ಘೋಷಣೆ ಮಾಡಲಿ ದ್ದಾರೆ.

ಈ ನಡುವೆ ಇಂದು ಸಭೆಗೆ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬಂದು ಸೋಲು ಕಂಡಿರುವ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರನ್ನು ಸಭೆಗೆ ಆಹ್ವಾನ ಮಾಡಲಿದ್ದು, ಪಾರ್ಟಿ ಮುಖ್ಯಸ್ಥರು ಅವರನ್ನು ಸಭೆಗೆ ಕರೆದಿದ್ದು, ಸಭೆಯಲ್ಲಿ ಅವರ ಸೋಲಿನ ಬಗ್ಗೆ ಕೂಡ ಚರ್ಚೆಯಾಗಲಿದೆ ಎನ್ನಲಾಗಿದೆ.

ಇದಲ್ಲದೇ ಜಗದೀಶ್‌ ಶೆಟ್ಟರ್‌ ಅವರನ್ನು ನೂತನ ಸರ್ಕಾರದಲ್ಲಿ ಸಚಿವರಾಗಿ ಸೇರಿಸಿ ಕೊಳ್ಳುವುದಕ್ಕೆ ಕೂಡ ಮುಂದಾಗಿದೆ.

ಹುಬ್ಬಳ್ಳಿ-ಕರ್ನಾಟಕ ಭಾಗದಲ್ಲಿ ಪ್ರಭಾವಿ ಲಿಂಗಾಯತನ ನಾಯಕನ ಅವಕಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಮುಂಬರುವ ಲೋಕ ಸಭಾ ಚುನಾವಣೆಗೂ ಕೂಡ ಕಾಂಗ್ರೆಸ್‌ ಅನ್ನು ಆ ಭಾಗದಲ್ಲಿ ಬೆಳಸಬೇಕಾಗಿರುವುದರಿಂದ ಲಿಂಗಾಯತ ಸಮುದಾಯದ ಜಗದೀಶ್‌ ಶೆಟ್ಟರ್ ಅವರನ್ನು ಸಚಿವರನ್ನಾಗಿ ಮಾಡಲಿದ್ದಾರೆ ಎನ್ನಲಾಗಿದೆ.

error: Content is protected !!