Tuesday, 3rd December 2024

ಜನಸಾಮಾನ್ಯರ ಮನೆಬಾಗಿಲಿಗೆ ತಾಜಾ ಮೀನು: ಇತಿಹಾಸದಲ್ಲೇ ಪ್ರಥಮ

ಬೆಂಗಳೂರು: ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ನಿ.), ಕರ್ನಾಟಕ ಸರ್ಕಾರ ಮತ್ತು ಶೀಘ್ರ್ ಸೀಫುಡ್ಸ್ & ಲಾಜಿಸ್ಟಿಕ್ಸ್ ಪ್ರೈ. ಲಿ. ಸಂಸ್ಥೆಗಳು ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕ ಸಹಭಾಗಿತ್ವ ಯೋಜನೆಯಡಿ ಜನಸಾಮಾನ್ಯರ ಮನೆಬಾಗಿಲಿಗೆ ತಾಜಾ ಮೀನು ಮತ್ತು ಮೀನಿನ ಉತ್ಪನ್ನಗಳನ್ನು ಶೀಘ್ರವಾಗಿ ತಲುಪಿಸುವ ಯೋಜನೆ ಯನ್ನು ಹಮ್ಮಿಕೊಂಡಿದೆ.

ಯೋಜನೆಯ ಹಂತಗಳು:

1. ಕರ್ನಾಟಕ ರಾಜ್ಯದ ಕರಾವಳಿ ಭಾಗದ ಮಂಗಳೂರು ಮತ್ತು ಮಲ್ಪೆ ಮೀನುಗಾರಿಕಾ ಬಂದರುಗಳಿಂದ ವಿಮಾನದ ಮೂಲಕ ತಾಜಾ ಮೀನು ಮತ್ತು ಮೀನಿನ ಉತ್ಪನ್ನಗಳನ್ನು ಬೆಂಗಳೂರಿನ ಸರ್ಜಾಪುರದಲ್ಲಿರುವ ಉಗ್ರಾಣಕ್ಕೆ ತಲುಪಿಸುವುದು.

2. ಮೀನು ಮತ್ತು ಮೀನಿನ ಉತ್ಪನ್ನಗಳನ್ನು ಸಂಸ್ಕರಿಸಿ, ಪ್ಯಾಕೇಜಿಂಗ್ ಮೂಲಕ ಬೆಂಗಳೂರಿನಲ್ಲಿರುವ 243 ಚಿಲ್ಲರೆ ಮಳಿಗೆಗಳಿಗೆ ತಲುಪಿಸು ವುದು.

3. ಚಿಲ್ಲರೆ ಮಳಿಗೆಗಳ ಮುಖಾಂತರ ಜನಸಾಮಾನ್ಯರಿಗೆ ಮಾರಾಟ ಮಾಡುವುದು ಮತ್ತು ಆಪ್ ಮೂಲಕ ಖರೀದಿ ಮಾಡುವ ಗ್ರಾಹಕರ ಮನೆಬಾಗಿಲಿಗೆ ಉತ್ಪನ್ನಗಳನ್ನು ಪೂರೈಸುವುದು.

ಈ ಯೋಜನೆಯು ಜನಸಾಮಾನ್ಯರಿಗೆ ತಾಜಾ ಮತ್ತು ಆರೋಗ್ಯಕರ ಸಾಗರ ಆಹಾರ ಉತ್ಪನ್ನಗಳನ್ನು ಪೂರೈಸುತ್ತದೆ ಮತ್ತು ಮಹಿಳೆಯರಿಗೆ ಉತ್ತಮ ಉದ್ಯೋಗಾವಕಾಶ ಒದಗಿಸುವ ದೂರದೃಷ್ಟಿಯ ಯೋಜನೆ ಯಾಗಿದೆ.

ಈ ಯೋಜನೆಯು ಅತ್ಯಂತ ಶೀಘ್ರದಲ್ಲಿ ಬೆಂಗಳೂರಿನಾದ್ಯಂತ ಆರಂಭವಾಗಲಿದೆ ಮತ್ತು ಕರ್ನಾಟಕ ಉಳಿದ ಪ್ರದೇಶಗಳಿಗೂ ವಿಸ್ತರಿಸಲಿದೆ ಎಂದು ಸಂಸ್ಥೆಯ ಪಾಲುದಾರರಾದ ಸುಭೀಷ್ ವಾಸುದೇವ್ ಮತ್ತು ಪ್ರಿಯೇಶ್ ನಾಯ್ಕ್ ತಿಳಿಸಿದ್ದಾರೆ.