Wednesday, 27th November 2024

ಮಕ್ಕಳ ಬಿಸಿಯೂಟದಲ್ಲಿ ಹುಳ, ಅಡುಗೆ ಸಿಬ್ಬಂದಿ ವಜಾಕ್ಕೆ ಆಗ್ರಹ

ಆಳಂದ: ತಾಲ್ಲೂಕಿನ ಲಾಡಚಿಂಚೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಲ್ಲಿ ನಡೆಯುತ್ತಿರುವ ಬಿಸಿಯೂಟವನ್ನು ಸ್ವಚ್ಛತೆ ಇಲ್ಲದೇ ಕಳಪೆ ಮಟ್ಟದನ್ನು ಗಮನಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಗುರುವಾರ ಬೆಳಗ್ಗೆ 10 ಗಂಟೆಯಿಂದ 1 ಗಂಟೆಗೆ ವರೆಗೆ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡಿದ ಪ್ರಸಂಗ ನಡೆದಿದೆ.

ವಿಷಯ ತಿಳಿಯುತ್ತಲೇ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಶಿವಮ್ಮ ದೊಡ್ಡಮನಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೌಖಿಕ ಆದೇಶ ಮೇರೆಗೆ ಶಿಕ್ಷಣ ಸಂಯೋ ಜಕ ಪ್ರಕಾಶ ಕೋಟ್ರೆ ಬಿಐಇಆರ್‌ಟಿ ಬಾಬುಸಿಂಗ ರಾಠೋಡ, ಧುತ್ತರಗಾಂವ ಸಿಆರ್‌ಪಿ ರಮೇಶ ದೊಡ್ಡಮನಿ ಶಾಲೆಗೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿದರು.

ಶಾಲೆಯ ವಿದ್ಯಾರ್ಥಿಯನಿಯರಾದ ಐಶ್ವರ್ಯ, ಲಕ್ಷ್ಮಿ, ಕಾವೇರಿ, ಅಂಕಿತಾ, ಭಾಗ್ಯಶ್ರೀ, ಸೃಷ್ಠಿ ಸೇರಿದಂತೆ ಇನ್ನಿತರ ವಿದ್ಯಾರ್ಥಿ, ವಿದ್ಯಾರ್ಥಿಯನಿಯರು ಬಿಸಿಯೂಟದಲ್ಲಿ ನುಸಿಗಳು, ಹುಳಗಳು ಬರುತ್ತಿದ್ದು, ಸಾಂಬರದಲ್ಲಿ ಯಾವುದೇ ರೀತಿ ತರಕಾರಿ ಇರುವು ದಿಲ್ಲ, ರಾಷ್ಟ್ರೀಯ ಹಬ್ಬದಲ್ಲಿ ಸಿಹಿ ಅಂತು ಮೊದಲೇ ಕೊಡುವುದಿಲ್ಲ, ಅಡುಗೆ ಸಿಬ್ಬಂದಿಯವರಿಗೆ ಕೇಳಿದರೆ ನಮ್ಮನ್ನೇ ಏಕ ವಚನದಲ್ಲಿ ಗದ್ದರಿಸುತ್ತಾರೆ. ಕೂಡಲೇ ಇವರು ಎಲ್ಲರನ್ನೂ ವಜಾಗೊಳಿಸಿ ಎನ್.ಜಿ.ಓ ಮೂಲಕ ನಮಗೆ ಬಿಸಿಯೂಟ ಸರಬರಾಜು ಮಾಡಿಸಿ ಅಲ್ಲಿಯವರೆಗೂ ನಾವು ಊಟ ಮಾಡುವುದಿಲ್ಲ ಎಂದು ಪಟ್ಟು ಹಿಡಿದಾಗ ಪಾಲಕರು ಕೂಡಾ ವಿದ್ಯಾರ್ಥಿಗಳ ಬೇಡಿಕೆ ಸ್ಪಂದಿಸಿ , ಮೊದಲು ಇವರನ್ನು ವಜಾಗೊಳಿಸಿ ಎಂದು ಪಟ್ಟು ಹಿಡಿದರು.

ಪ್ರತಿಭಟನೆಯಲ್ಲಿ ಏರುಪೇರು ಕಂಡಾಗ ನರೋಣಾ ಪೊಲೀಸ ಠಾಣೆಯ ಸಿಬ್ಬಂದಿಯವರು ಭೇಟಿ ನೀಡಿ ಪಾಲಕರು, ವಿದ್ಯಾರ್ಥಿ ಗಳಿಗೆ ಸಮಸ್ಯೆ ಮನವರಿಕೆ ಮಾಡಿದರು ಸಹ ಒಪ್ಪಲಿಲ್ಲ. ಶಿವಮ್ಮ ದೊಡ್ಡಮನಿ ಅವರು ಮಕ್ಕಳ, ಪಾಲಕರ ಹೇಳಿಕೆ ಮೇರೆಗ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದೂ ಸಮಸ್ಯೆ ಸ್ಪಂದಿಸುವರಗೂ ಊಟ ನಿಲ್ಲಿಸಲಾಗುವುದು ಎಂದು ಹೇಳಿದಾಗ ಪ್ರತಿಭಟನೆ ಹಿಂಪಡೆದರು. ಶುಕ್ರವಾರ ಸಹ ಸಮಸ್ಯೆಗೆ ಸ್ಪಂದಿಸದೇ ಇರುವುದರಿಂದ ಮಕ್ಕಳಿಗೆ ಬಿಸಿಯೂಟ ದೊರೆಯಲಿಲ್ಲ.

ಗ್ರಾಮ ಪಂಚಾಯತ ಸದಸ್ಯ ಸಂಜು ಶಿಲ್ಡ, ಮುಖಂಡರಾದ ಶಿವಶಂಕರ ಗೌರ, ಶರಣಬಸಪ್ಪ ಹುಳಿ,ಪ್ರಶಾಂತ ಕೋರೆ, ರೋಷನಶಿಲ್ಡ, ಅಂಬಾರಾಯ ಶಿಲ್ಡ, ಸೇರಿದಂತೆ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿಯನಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿ ದರು.