Sunday, 8th September 2024

ರಕ್ತಕ್ಕೆ ರಕ್ತವೇ ಪರ್ಯಾಯ – ರಕ್ತದಾನದಿಂದ ಜೀವ ಉಳಿಸಲು ಸಾಧ್ಯ: ಡಾ‌.ಕರುಂಬಯ್ಯ 

ಕುಶಾಲನಗರ: ವಿಶ್ವಜ್ಞಾನಿ ಅಂಬೇಡ್ಕರ್ ಟ್ರಸ್ಟ್ ಅಂಬೇಡ್ಕರ್‌ ಲಲಿತ ಕಲೆಗಳ ಟ್ರಸ್ಟ್ , ಅನಿಕೇತನ ಪದವಿಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ,ರಾಮನಗರ ಜಿಲ್ಲಾಸ್ಪತ್ರೆಯ ಮನೋವಿಜ್ಞಾನಿ ಗೋವಿಂದ ಸ್ವಾಮಿ ಚಾಲನೆ ನೀಡಿದರು.
ನಾನು ಅನೇಕ ವರ್ಷಗಳಿಂದ ಆಸ್ಪತ್ರೆಯಲ್ಲಿ ರೋಗಿಗಳ ಚಡಪಡಿಕೆಯನ್ನು ನೋಡಿದ್ದೇನೆ. ರಕ್ತಕ್ಕಾಗಿ ಪರಿತಪಿಸುವ ಅವರ ಪರದಾಟ ಮನಕಲಕುತ್ತದೆ‌. ಕೆಲವೊಮ್ಮೆ ಸರಿಯಾದ ಸಮಯಕ್ಕೆ ರಕ್ತ ಸಿಗದೆ ರೋಗಿಗಳು ಅಸು ನೀಗಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ರಕ್ತ ಸಿಕ್ಕಿದರೆ ರೋಗಿಯ ಪ್ರಾಣ ಉಳಿಸಲು ಸಾಧ್ಯವಾಗುತ್ತದೆ‌. ಅದಕ್ಕಾಗಿ ಇಂತಹ ರಕ್ತದಾನ ಶಿಬಿರಗಳು ನಡೆಯಬೇಕು ಎಂದು ಗೋವಿಂದ ಸ್ವಾಮಿ ಹೇಳಿದರು.
ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ಕರುಂಬಯ್ಯ ಮಾತನಾಡಿ, ಶಾಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶಾಲಾ ವಿದ್ಯಾರ್ಥಿಗಳಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ.
ರಕ್ತದಾನದ‌ ಬಗ್ಗೆ ಮೂಡನಂಬಿಕೆ ಬೇಡ. ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ರಕ್ತದಾನದಿಂದ ಹೃದಯಾಘಾತ ಆಗುವುದನ್ನು ತಡೆಗಟ್ಟಲು ಸಾಧ್ಯ‌. ನೀವು ನೀಡಿದ ರಕ್ತ ಇಪ್ಪತ್ತ ನಾಲ್ಕು ಗಂಟೆಯಲ್ಲಿ ದೇಹದಲ್ಲಿ ಮರು ಪೂರಣವಾಗುತ್ತದೆ. ಎಲ್ಲಾ ಆರೋಗ್ಯಯುತ ವ್ಯಕ್ತಿಗಳು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
ಕೊಡಗು ಚಿಕ್ಕ ಜಿಲ್ಲೆಯಾದರೂ ಪ್ರತಿ ತಿಂಗಳು
ಮುನ್ನೂರ ಐವತ್ತು ಯೂನಿಟ್ ನಷ್ಟು ರಕ್ತದ ಅವಶ್ಯಕತೆ ಇದೆ. ಇಷ್ಟು ರಕ್ತವನ್ನು ಸಂಗ್ರ ಹಿಸಲು ಸ್ವಯಂ‌ಪ್ರೇರಿತರಾಗಿ ರಕ್ತದಾ‌ನ ಶಿಬಿರ ಹಮ್ಮಿಕೊಳ್ಳಬೇಕು. ರಕ್ತಕ್ಕೆ ಪರ್ಯಾಯ ವಿಲ್ಲ. ರಕ್ತದಾನದ ಮೂಲಕ ರೋಗಿಯ ಪ್ರಾಣವನ್ನು ಕಾಪಾಡಬಹುದು ಎಂದು ಡಾ.ಕರುಂಬಯ್ಯ ಹೇಳಿದರು.
ಕುಶಾಲನಗರ ಸಂಯುಕ್ತ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಕರಾದ ಪರಮೇಶ್ವರಪ್ಪ ಮಾತನಾಡಿ ಶಾಲೆಗಳಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಯಾಕೆಂದರೆ ಮಕ್ಕಳಲ್ಲಿಯೂ ರಕ್ತದಾನದ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗಿದೆ ಎಂದರು.
ವಿಶ್ವಜ್ಞಾನಿ ಅಂಬೇಡ್ಕರ್ ಟ್ರಸ್ಟ್ ನ ಅಧ್ಯಕ್ಷ ಎಸ್ .ಜೆ.ಸತೀಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಮಹೇಂದ್ರ, ಮಹೇಶ್ ಕುಮಾರ್ ಟ್ರಸ್ಟ್ ನ ನಿರ್ದೇಶಕರಾದ ಲೋಕೇಶ್ ಕೊಂಡಾರಿ, ಮಹೇಶ್ ಪೊನ್ನಪ್ಪ ಕಾರ್ಯಕ್ರಮದಲ್ಲಿ ಹಾಜರಿದ್ದರು.

error: Content is protected !!