Thursday, 28th November 2024

ಸ್ತನ ಕ್ಯಾನ್ಸರ್ ಬಗ್ಗೆ ಜನಜಾಗೃತಿ ಮೂಡಿಸುವುದು ಬಹಳ ಅವಶ್ಯವಾಗಿದೆ: ಡಾ.ಚಂದ್ರಶೇಖರ್

ತುಮಕೂರು: ಸಮಾಜದ ಜನರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಜನಜಾಗೃತಿ ಮೂಡಿಸುವುದು ಬಹಳ ಅವಶ್ಯವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಚಂದ್ರಶೇಖರ್ ಹೇಳಿದರು.

ಜೀವ ಎಂಆರ್‌ಐ ಸೆಂಟರ್‌ನಲ್ಲಿ ವಿಜಯ ಆಸ್ಪತ್ರೆ, ಜೀವ ಎಂಆರ್‌ಐ ಸೆಂಟರ್, ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ಒಕ್ಕಲಿ ಗರ ಸಂಘ, ಮಹಿಳಾ ವೈದ್ಯಕೀಯ ವಿಭಾಗ ಹಾಗೂ ರೋಟರಿ ತುಮಕೂರು ಪೂರ್ವ ವಿಭಾಗದ ಸಂಯುಕ್ತಾಶ್ರಯದಲ್ಲಿ ಏರ್ಪಡಿ ಸಿದ್ದ ಸ್ತನ ಕ್ಯಾನ್ಸರ್ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

40 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇರು ತ್ತದೆ. ಬಹುತೇಕ ಕ್ಯಾನ್ಸರ್ 3 ಮತ್ತು 4ನೇ ಹಂತದಲ್ಲಿ ಪತ್ತೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಇದನ್ನು ತಡೆಯುವ ಸಲುವಾಗಿ ಅಕ್ಟೋಬರ್ ತಿಂಗಳನ್ನು ಸ್ತನ

ಈ ತಿಂಗಳು ವಿಶ್ವ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಜನ ಸಾಮಾನ್ಯರಿಗೆ ಉಚಿತವಾಗಿ ಸ್ತನ ಕ್ಯಾನ್ಸರ್ ತಪಾಸಣೆಯನ್ನು ಜೀವ ಎಂಆರ್‌ಐ ಸೆಂಟರ್‌ನಲ್ಲಿ ನ. 31 ರ ವರೆಗೆ ಮಾಡಲಾಗುತ್ತದೆ. 40 ಮೇಲ್ಪಟ್ಟ ಸ್ತ್ರೀಯರಿಗೆ ಮ್ಯಾಮೋ ಗ್ರಫಿ ಹಾಗೂ 40 ವರ್ಷ ಕೆಳಗಿನ ಸ್ತ್ರೀಯರಿಗೆ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು ಎಂದು ಅವರು ಹೇಳಿದರು.

ಜೀವ ಎಂಆರ್‌ಐ ಸೆಂಟರ್‌ನ ನಿರ್ದೇಶಕರಾದ ಡಾ. ಟಿ.ಎಸ್. ವಿಜಯಕುಮಾರ್ ಮಾತನಾಡಿ, ಕ್ಯಾನ್ಸರ್ ಮನುಷ್ಯನಿಗೆ ಬಂದಿದೆ ಎಂಬುದು ಗೊತ್ತಾಗಬೇಕಾದರೆ ಸ್ಟೇಜ್ 3. ಸ್ಟೇಜ್ 4 ಆಗಬೇಕಾಗಿರುತ್ತದೆ. ಹಾಗಾಗಿ ಕ್ಯಾನ್ಸರ್‌ನ್ನು ಪತ್ತೆಹಚ್ಚಲು ಮ್ಯಾಮೊಗ್ರಫಿ ಯಂತ್ರ ತರಿಸಿದ್ದು, ಮೊದಲನೇ ಹಂತದಲ್ಲಿ ಪತ್ತೆಹಚ್ಚಲು ಮ್ಯಾಮೊಗ್ರಫಿ ಯಂತ್ರ ಸಹಕಾರಿಯಾಗಲಿದೆ. ಮೊದಲನೇ ಹಂತದಲ್ಲಿ ಕ್ಯಾನ್ಸರ್ ಪತ್ತೆಹಚ್ಚಿದರೆ ಗುಣಮುಖರಾಗುತ್ತಾರೆ. ದುರಾದೃಷ್ಟವಶಾತ್ ಕ್ಯಾನ್ಸರ್ ಲಕ್ಷಣ ಗೋಚರಿಸುವುದೇ 3 ಮತ್ತು 3ನೇ ಹಂತದಲ್ಲಿ ಎಂದರು.

ಸರ್ಕಲ್ ಇನ್ಸ್ಪೆಕ್ಟರ್ ಪಾರ್ವತಮ್ಮ ಮಾತನಾಡಿ, ಯಾವುದೇ ಲಕ್ಷಣ ಇಲ್ಲದೇ ಚಿಕಿತ್ಸೆಗೆ ಒಳಪಟ್ಟಾಗಲೇ ಕ್ಯಾನ್ಸರ್ 3 ಮತ್ತು 4ನೇ ಹಂತ ತಲುಪಿರುತ್ತದೆ. ಆಗ ಮಾತ್ರ ನಮಗೆ ಗೊತ್ತಾಗುತ್ತದೆ .ಬೇರೆ ಕಾಯಿಲೆಗಳಿಗೆ ಹೋಲಿಸಿದರೆ ಕ್ಯಾನ್ಸರ್ ಭಯಾನಕ ರೋಗ ಎಂಬ ಮನಸ್ಥಿತಿ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಚಿಕಿತ್ಸೆ ದೊರೆಯುತ್ತಿರುವುದರಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ. ಆದರೆ ರೋಗದ ಬಾಧೆ ಅನುಭವಿಸಬೇಕಾಗಿದೆ. ಆದ್ದರಿಂದ ರೋಗ ತಡೆಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ಗಳು ಅತ್ಯವಶ್ಯವಾಗಿವೆ ಎಂದರು.

ಈ ಸಂದರ್ಭದಲ್ಲಿ ಐಎಂಎ ಕಾರ್ಯದರ್ಶಿ ಡಾ. ಚೆಲುವೇಗೌಡ, ಡಾ. ಗಿರಿಜಾ, ಡಾ. ಸುರೇಶ್‌ಬಾಬು, ಭೈರವ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

*

ಕ್ಯಾನ್ಸರ್ ಶ್ರೀಮಂತರ ಕಾಯಿಲೆ. ಇದರ ಚಿಕಿತ್ಸೆ ದುಬಾರಿಯಾಗಿರುವುದರಿಂದ ಎಷ್ಟೋ ಮಂದಿ ಚಿಕಿತ್ಸೆ ಪಡೆಯಲಾಗದೇ ಸಾವನ್ನಪ್ಪುತ್ತಿದ್ದಾರೆ.

ಪಾರ್ವತಮ್ಮ, ಸರ್ಕಲ್ ಇನ್ಸ್ಪೆಕ್ಟರ್.