ತಿಪಟೂರು: ಶ್ರೀ ಕಲ್ಲೇಶ್ವರ ಸ್ವಾಮಿಯವರ ಆಶೀರ್ವಾದ ಪಡೆದು ಕ್ಷೇತ್ರದ ೨೩೨ ಬೂತ್ ಗಳು ಹಾಗೂ ಪ್ರತಿ ಹಳ್ಳಿಗಳಿಗೂ ತೆರಳಿ ಗ್ರಾಮದ ಸಮಸ್ಯೆಯನ್ನು ತಿಳಿದು ಭ್ರಷ್ಟ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಅರಿವು ಮೂಡಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಸಿ.ಬಿ. ಶಶಿಧರ್ ಹೇಳಿದರು
ತಿಪಟೂರಿನ ಕಲ್ಲೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಿಸಿ “ಕ್ಷೇತ್ರ ಸಂಚಾರ” ಎಂಬ ಕಾರ್ಯಕ್ರಮಕ್ಕೆ ನೂರಾರು ಕಾರ್ಯಕರ್ತ ರೊಂದಿಗೆ ಚಾಲನೆ ನೀಡಿ ಮಾತನಾಡುತ್ತಾ ಸುಳ್ಳು ಭರವಸೆ ನೀಡಿ ಅಧಿಕಾರ ಪಡೆದ ಸರ್ಕಾರ ಮಕ್ಕಳು ಕುಡಿಯುವ ಹಾಲು ಮೊಸರಿ ಗೂ ಜಿಎಸ್ಟಿ ತೆರಿಗೆ ವಿಧಿಸಿ ಪ್ರಪಂಚದಲ್ಲಿಯೇ ಖ್ಯಾತಿ ಪಡೆದ ಮೊದಲ ಬಿಜೆಪಿ ಸರ್ಕಾರದ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಮುಂದಿನ ದಿನಗಳಲ್ಲಿ ಪಂಚಭೂತಗಳ ಕೊಡುಗೆ ಗಾಳಿ, ನೀರು, ಸೂರ್ಯನ ಬೆಳಕಿಗೂ ಜಿಎಸ್ ಟಿ ತೆರಿಗೆ ಹಾಕುತ್ತಾರೆ.
ನಗರದ ರಸ್ತೆಗಳು ಗುಂಡಿ ಬಿದ್ದಿದ್ದು ಸುರಿಯುವ ಮಳೆಯಲ್ಲಿ ರಸ್ತೆಗೆ ಟಾರ್ ಹಾಕಿ ರಸ್ತೆ ಮುಚ್ಚುವ ತಿಪಟೂರಿನಲ್ಲಿ ಮಾತ್ರ ನೋಡಬಹುದು ಎಂದು ಗೇಲಿ ಮಾಡಿದರು.
ಕರ್ನಾಟಕದ ಹಿರಿಯ ಕಾಂಗ್ರೆಸ್ ಪಕ್ಷದ ಮುತ್ಸದಿ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಪಕ್ಷ ನೀಡಿರುವುದು ಉತ್ತಮ ಬೆಳವಣಿಗೆ ಎಂದರು.
ಈ ಸಮಯದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಉಮಾ ಮಹೇಶ್. ಶರತ್ ಕಲ್ಲೇಗೌಡನ ಪಾಳ್ಯ, ಮಂಜುನಾಥ್. ಶಂಕರಪ್ಪ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರಿದ್ದರು.