ಗೌರಿಬಿದನೂರು : ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಹುಲ್ಲು ಕತ್ತರಿಸುವ ಯಂತ್ರಗಳಿಗೆ ಕಾರ್ಯ ನಿರ್ವಾಹಕ ಅಧಿಕಾರಿ ಜೆ ಕೆ ಹೊನ್ನಯ್ಯ ಚಾಲನೆ ನೀಡಿದರು.
ಈ ಕುರಿತು ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಮೂರು ನೂತನ ಬಗೆಯ ಹುಲ್ಲು ಕತ್ತರಿಸುವ ಯಂತ್ರಗಳನ್ನು ತರಿಸಲಾಗಿದ್ದು, ಈ ಬಗ್ಗೆ ಸಂಸ್ಥೆಯವರು, ಗ್ರಾಮದ ಜಲಗಾರಿಗೆ ತರಭೇತಿ ನೀಡಿ ಪ್ರಾತ್ಯಕ್ಷಿಕೆಯನ್ನು ತೋರಿಸಲಿದ್ದಾರೆ.
ಇದರಿಂದ ಗ್ರಾಮದ ಶಾಲೆ, ಸರ್ಕಾರಿ ಕಚೇರಿಗಳು, ಅಂಗನವಾಡಿಗಳ,ಹುಲ್ಲು ಹೆಚ್ಚಾಗಿ ಬೆಳೆದಿರುವುದನ್ನು ಕತ್ತರಿಸ ಬಹುದು ಮತ್ತು ಚರಂಡಿಗಳ ಬಳಿ ಹೆಚ್ಚಾಗಿ ಹುಲ್ಲು ಬೆಳೆಯುವುದರಿಂದ ನೀರು ಸರಾಗವಾಗಿ ಹೋಗದೆ ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟು, ರೋಗ ರೂಜಿನಗಳಿಗೆ ಅಹ್ವಾನ ನೀಡುತ್ತವೆ, ಆದ್ದರಿಂದ ಕಾಲ ಕಾಲಕ್ಕೆ ಹುಲ್ಲನ್ನು ಕತ್ತರಿಸಿ ಗ್ರಾಮೀಣ ಭಾಗದ ಜನರ ಆರೋಗ್ಯವನ್ನು ಕಾಪಾಡಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ, ಜಾಲಗಾರರು, ಮತ್ತು ಸಿಬ್ಬಂದಿ ಹಾಜರಿದ್ದರು.
ಇದನ್ನೂ ಓದಿ: chikkaballapur