ಮಹಿಳೆ ಪರ ಧ್ವನಿ ಎತ್ತಿದ್ದಕ್ಕೆ ಕಾರು ಬೈಕ್ ಕಸಿದು ರೆಸಾರ್ಟ್ ಮಾಲೀಕರಿಂದ ಕಿರುಕುಳದ ಆರೋಪ
ಚಿಕ್ಕಬಳ್ಳಾಪುರ : ತಾಲೂಕಿನ ನಂದಿ ಬೆಟ್ಟದ ಬುಡದಲ್ಲಿರುವ ಮಡಕು ಹೊಸಹಳ್ಳಿ ಗ್ರಾಮದ ಸಮೀಪವಿರುವ ಎಸ್.ಅರ್.ಕೆ ಎಸ್ಟೇಟ್ ಅಂಡ್ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಹೊರರಾಜ್ಯದ ಮಯೂರಿ ಎಂಬ ಯುವತಿಗೆ ಆದ ಅನ್ಯಾಯ ಪ್ರಶಿಸಿದ ಕಾರಣಕ್ಕೆ ನನ್ನ ಮೇಲೆ ದ್ವೇಷ ಸಾಧಿಸಿದ ರೆಸಾರ್ಟ್ ಮಾಲಿಕರು ಯಾವುದೇ ನೋಟೀಸು ನೀಡದೆ ಕೆಲಸದಿಂದ ತೆಗೆದಿದ್ದಲ್ಲದೆ ಕಾರು ಬೈಕ್ ಕಿತ್ತುಕೊಂಡು ಕಿರುಕುಳ ನೀಡುತ್ತಿದ್ದಾರೆ.ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮವಹಿಸುತ್ತಿಲ್ಲ ಎಂದು ನೌಕರ ಸಂಜಯ್ ಗಂಭೀರ ಆರೋಪ ಮಾಡಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ತಾಲೂಕಿನ ನಂದಿ ಬೆಟ್ಟದ ತಪ್ಪಲಲ್ಲಿರುವ ಪ್ರತಿಷ್ಟಿತ ಎಸ್.ಅರ್.ಕೆ ಎಸ್ಟೇಟ್ ಅಂಡ್ ರೆಸಾರ್ಟ್ಗೆ ಬರುವವರೆಲ್ಲಾ ಶ್ರೀಮಂತ ಉಧ್ಯಮಿಗಳು,ಸಿನಿಮಾ ನಟರು, ರಾಜಕಾರಣಿಗಳೇ ಆಗಿದ್ದಾರೆ. ಇಲ್ಲಿ ಹೆಣ್ಣು ಮಕ್ಕಳನ್ನು ಉದ್ಯೋಗ ಕ್ಕೆಂದು ನೇಮಕ ಮಾಡಿಕೊಂಡು ಅವರನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಹೊರ ರಾಜ್ಯದ ಮಯೂರಿ ಎಂಬ ಯುವತಿ ಮಾಲಿಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಕಾಲಕ್ಕೆ ಸಹೋದ್ಯೋಗಳು ಅಲ್ಲಿಗೆ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಚಾರದಲ್ಲಿ ನ್ಯಾಯ ಕೇಳಲು ಹೋಗಿದ್ದರಿಂದ ನನ್ನು ಸೇರಿದಂತೆ ೭ ಮಂದಿಯನ್ನು ಏಕಾಏಕಿ ಕೆಲಸದಿಂದ ತೆಗೆದಿದ್ದಲ್ಲದೆ, ನನಗೆ ಕಿರುಕುಳ ನೀಡುತ್ತಿದ್ದಾರೆ. ಈಬಗ್ಗೆ ನಂದಿಗಿರಿಧಾಮ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಿಸಲು ಹೋದರೆ ಪೊಲೀಸರು ಕೂಡ ದೂರು ತೆಗೆದುಕೊಳ್ಳದೆ ಕಾಲಹರಣ ಮಾಡುವ ಮೂಲಕ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಇದರಿಂದ ಬೇಸತ್ತು ನಾನು ಕಾರ್ಮಿಕ ಇಲಾಖೆಯಲ್ಲಿ ದೂರು ದಾಖಲಿಸಿ ನ್ಯಾಯಕ್ಕಾಗಿ ಕಾದಿದ್ದೇನೆ ಎಂದು ದೂರಿದರು.
ಮಯೂರಿ ಎಂಬ ಯುವತಿ ಇವರ ಕಿರುಕುಳ ಸಹಿಸದೆ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಆಕೆಗೆ ದೂರು ನೀಡದಂತೆ ಬೆದರಿಸಿ ೨ಲಕ್ಷ ರೂಪಾಯಿ ಹಣ ನೀಡಿ ರಾತ್ರೋ ರಾತ್ರಿ ಆಕೆಯನ್ನು ಅಲ್ಲಿಂದ ಕಳಿಸಿಬಿಟ್ಟಿದ್ದಾರೆ.ಇದೇ ವಿಚಾರದ ಬಗ್ಗೆ ದೇವನಹಳ್ಳಿ ತಾಲೂಕಿನ ಪಾಂಡುರಂಗಪುರ ಗ್ರಾಮದ ವಾಸಿಯಾದ ಸಂಜಯ್ ಎಂಬ ನಾನು ಧನಿ ಎತ್ತಿದ್ದಕ್ಕೆ ಕೆಲದಿಂದ ತೆಗೆದು ಕಿರುಕುಳ ನೀಡುತ್ತಿದ್ದಾರೆ. ಮಾಧ್ಯಮದವರಾದರೂ ನಮಗೆ ನ್ಯಾಯಕೊಡಿ ಎಂದು ಸುದ್ದಿಗೋಷ್ಟಿಯಲ್ಲಿ ಅಂಗಲಾಚಿದರು.
ಎA.ಬಿ ರಾಮಾಂಜಿನಪ್ಪ, ನಂಜಪ್ಪ, ಸಂಜಯ್, ನರಸಿಂಹರಾಜು, ನರಸಿಂಹಮೂರ್ತಿ, ಅಂಜಿನೇಯರೆಡ್ಡಿ, ಮುನಿರಾಜು ಮತ್ತಿತರರು ಇದ್ದರು.