ಹೆಚ್.ಎನ್.ಚಂದ್ರಶೇಖರ್ ಆಗ್ರಹ ಅರುಣ್ ಕುಮಾರ್.ಎಸ್.ವಿ.
ಗೌರಿಬಿದನೂರು ನಗರದಲ್ಲಿ ನಡೆದ ಬಾಂಗ್ಲಾ ವಿರೋಧಿ ಪ್ರತಿಭಟನೆಯನ್ನು ಉದ್ದೇಶಿಸಿ ಹೇಳಿಕೆ
ಗೌರಿಬಿದನೂರು: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಭಾರತದಿಂದ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ರಾಜ್ಯ ಬಿಜೆಪಿ ವಕ್ತಾರರು ಹೆಚ್.ಎನ್. ಚಂದ್ರಶೇಖರ್ ಆಗ್ರಹಪಡಿಸಿದರು.
ನಗರದಲ್ಲಿ ಸೋಮವಾರ ಹಿಂದೂ ಜಾಗೃತಿ ಸಮಿತಿ ಹಾಗೂ ಹಿಂದೂಪರ ಸಂಘಟನೆಗಳಿಂದ ಏರ್ಪಡಿಸಿದ್ದ ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡನೆಯ ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಅರಾಚಕತೆ ಸೃಷ್ಟಿಯಾಗಿದ್ದು, ದೇಶ ಆರ್ಥಿಕವಾಗಿ ದಿವಾಳಿಯಾಗಿದೆ. ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ಸಾಕಷ್ಟು ರೀತಿಯಲ್ಲಿ ದೌರ್ಜನ್ಯ ದಬ್ಬಾಳಿಕೆ ಮಾಡು ತ್ತಿದ್ದಾರೆ. ಬಾಂಗ್ಲಾದೇಶದಲ್ಲಿರುವ ಮುಸ್ಲಿಮರು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಹಿಂದೂಗಳ ಮನೆ, ದೇವಾಲಯಗಳನ್ನು ನಾಶಗೊಳಿಸಲು ಮುಂದಾಗಿದ್ದಾರೆ. ಈ ನಡುವೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವAತೆ ಹಿಂದೂಗಳನ್ನು ಒತ್ತಾಯಿಸುತ್ತಿದ್ದಾರೆ. ಇಲ್ಲವಾದರೆ ದೇಶವನ್ನು ಬಿಟ್ಟುತೊಲಗಿ ಎಂದು ಹಿಂಸೆನೀಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ ಎಂದು ಪ್ರತಿಭಟನಾಕಾರರು ದೂರಿದರು.
ಮೊಘಲರ ಆಡಳಿತ ಕೊನೆಗೊಂಡಿದೆ ಎಂದುಕೊAಡಿದ್ದೆವು, ಆದರೆ ಅವರ ಸಂತತಿಗಳು ಇನ್ನುಉಳಿದಿವೆ. ಇಂತಹ ವರಿಗೆ ನಡುಕ ಹುಟ್ಟುವಹಾಗೆ ಮಾಡಬೇಕು. ಭಾರತ ಭೂಮಿಯಲ್ಲಿದ್ದು ನಮ್ಮ ವಿರುದ್ದವೆ ತಿರುಗಿ ಬೀಳುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿನೋಡಿದರೆ, ಮುಂದೆ ನಮ್ಮ ಊರಿನಲ್ಲೂ ಇಂತದ್ದೆ ಪರಿಸ್ಥಿತಿ ಉಂಟಾಗ ಬಹುದಾಗಿದೆ. ಹಿಂದೂಗಳ ಸೇರಿದರೆ ಕೋಮುಗಲಭೆ ಆಗುತ್ತದಂತೆ, ಎಲ್ಲರಿಗೂ ಅಮಾಯಕ ಹಿಂದೂಗಳು ಮಾತ್ರ ಕಾಣಿಸ್ತಾರೆ, ಲವ್ ಜಿಹಾದ್ ಕಾಣುತ್ತಿಲ್ಲ, ಹಿಂದಿನ ಸರ್ಕಾರದಲ್ಲಿ ೧೭೨ ಪಿ.ಎಫ್.ಐ ಕೇಸುಗಳನ್ನು ವಾಪಾಸ್ಸು ತಗೊಂಡರು. ಇದರಿಂದ ನಿರಂತರ ಗೋ-ಹತ್ಯೆ, ಅತ್ಯಾಚಾರ ನಡೆಯುತ್ತಿದ್ದರು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂ ದ್ವೇಷ, ನಾಳೆ ಇಲ್ಲೂ ನಡೆಯುತ್ತದೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಒಂದಾಗಿತ್ತು, ಅಲ್ಲಿ ಅತ್ಯಾಚಾರಗಳು ನಡೆಯುತ್ತಿದ್ದವು, ಅಪಹರಣಗಳಾಗಿದ್ದವು, ಅಂತಹ ಸಂದರ್ಭದಲ್ಲಿ, ಪಾಕಿಸ್ತಾ ನದ ಸ್ನೇಹ ಬೇಡ ಎಂದಾಗ ಬಾಂಗ್ಲಾದೇಶವನ್ನು ಉಳಿಸಿದ್ದು ನಮ್ಮ ಭಾರತದೇಶ, ನಮ್ಮ ಸೈನಿಕರ ಬಲಿದಾನದ ಮೇಲೆ ಬಾಂಗ್ಲಾದೇಶ ನಿರ್ಮಾಣವಾಗಿದೆ. ಈಗ ನಮ್ಮ ಹಿಂದೂಗಳ ಮೇಲೆ ಅಟ್ಟಹಾಸ ಮೆರೆಯು ತ್ತಿದ್ದಾರೆ. ಯಾರು ಅನ್ನಹಾಕಿದರೋ ಅವರ ಕತ್ತು ಕೊಯುವ ಕೆಲಸ ಮಾಡುತ್ತಿದ್ದಾರೆ. ಅನ್ನ ಹಾಕಿ ಸಾಕಿದ ಇಸ್ಕಾನ್ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಇದೆ ರೀತಿ ಮುಂದುವರೆದರೆ ಅವರ ದೇಶದ ಒಳಗೆ ನುಗ್ಗಿ ಒಡೆಯಬೇಕಾಗುತ್ತದೆ. ಜಿಹಾದಿ ಮನಸ್ಥಿತಿ ಯಿಂದ ಎಲ್ಲರೂ ಹೊರಬರಬೇಕು, ಬಾಂಗ್ಲಾದೇಶದ ಯೂನಿಸ್ ಒಬ್ಬ ಮತಾಂದ ದೇಶವನ್ನು ನಾಶ ಮಾಡಲು ಹುಟ್ಟಿರುವ ಪಾಪಿ. ಎಂದು ಹೇಳಿದರು.
ಇವರ ದೇಶದ ವಿರೋಧಿ ಚಟುವಟಿಕೆಗಳಿಗೆ ಇಲ್ಲಿರುವ ನಪುಂಸಕರು ಹಮಾಸ್ಗೆ ಬೆಂಬಲ ವ್ಯಕ್ತಪಡಿಸುತ್ತಾರೆ, ಆದರೆ ನಮ್ಮ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಯಾರುಸಹ ಧ್ವನಿಎತ್ತುತ್ತಿಲ್ಲ. ಇಡೀ ದೇಶದ ಹಿಂದೂಗಳು ಈಗ ಒಂದಾಗುತ್ತಿದ್ದಾರೆ. ಬಿಜೆಪಿ ಸರ್ಕಾರ ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಮಾಡುತ್ತಿದೆ, ಆದರೆ ಹಿಂದುಗಳಿಗೆ ಅರ್ಥವಾಗುತ್ತಿಲ್ಲ, ಈಗ ಎಲ್ಲರ ಕಣ್ಣು ತೆರೆಯುತ್ತಿದೆ, ಆದರೆ ಮಹಾರಾಷ್ಟçದಲ್ಲಿ ಬಿಜೆಪಿಗೆ ಕೊಟ್ಟಿರುವ ಜಯ, ಆನೆ ಬಲ ಕೊಟ್ಟಂತಾಗಿದೆ ಎಂದು ಹೇಳೀದರು.
ನಾವು ಭರತಮಾತೆಯ ಮಕ್ಕಳು ಹಿಂದುಗಳು ಪ್ರಪಂಚದ ಯಾವಮೂಲೆಯಲ್ಲಿದ್ದರೂ ಒಂದೇ, ಭಾರತದ ಧ್ವನಿಗೆ ಪ್ರಪಂಚವೆ ಧ್ವನಿ ಗೂಡಿಸುತ್ತಿದೆ ಭಾರತವು ವಿಶ್ವ ಗುರುವಾಗುತ್ತಿದೆ. ಇದೆ ಸನಾತನ ಧರ್ಮ. ಸಿದ್ದರಾಮಯ್ಯನವರ ಸರ್ಕಾರವೇ ಇತಿಹಾಸದಲ್ಲಿ ಕರ್ನಾಟಕದ ಕೊನೆಯ ಸರ್ಕಾರ. ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆ ನಮ್ಮ ಕರ್ತವ್ಯ. ಬಾಂಗ್ಲಾ ಜಿಹಾದಿ ಮನಸ್ಥಿತಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು.
ಬಾಂಗ್ಲಾದೇಶದಲ್ಲಿ ನಡೆದಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಮ್ಮ ದೇಶದ ಹಲವಾರು ದೇಶದ್ರೋಹಿ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊAಡು ಖುಷಿ ಪಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಹಿಂದೂಗಳ ಹಾಗೂ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದಾಳಿಗಳನ್ನು ತಡೆಯಲು ಭಾರತ ಸರ್ಕಾರವು ಮಧ್ಯ ಸ್ಥಿಕೆ ವಹಿಸಬೇಕು. ಇದು ಹಿಗೇಯೇ ಮುಂದುವರಿದರೆ ದೇಶದಲ್ಲಿರುವ ಹಿಂದೂಗಳು ಒಂದಾಗಿ ಬಾಂಗ್ಲಾದೇಶದ ಹಿಂದೂಗಳ ಪರವಾಗಿ ಉಗ್ರವಾದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಗರದ ಶ್ರೀ ಶನಿಮಹಾತ್ಮಸ್ವಾಮಿ ದೇವಸ್ಥಾನದಿಂದ ಮುಖ್ಯರಸ್ತೆ ಮಾರ್ಗವಾಗಿ ಮಹಾತ್ಮಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಹಿಂದೂಪರ ಹೋರಾಟದಲ್ಲಿ ವಿವಿಧ ಸಮುದಾಯಗಳ ಮುಖಂಡರು ಭಾಗಿಯಾಗಿದ್ದರಲ್ಲದೆ ಯುವಕರು ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮಾಡಿದರು.
ಇದೇ ವೇಳೆ, ಹಿಂದೂ ಹಿತರಕ್ಷಣಾ ಸಮಿತಿ ಮತ್ತು ಎಲ್ಲಾ ಸಮುದಾಯಗಳ ಸಮಕ್ಷಮದಲ್ಲಿ ಮಾನ್ಯ ತಹಶೀಲ್ದಾರ್ ಮಹೆಶ್.ಎಸ್.ಪತ್ರಿರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.