Tuesday, 3rd December 2024

ಸ್ವಚ್ಛತಾ ಆಂದೋಲನಾ ಕಾರ್ಯಕ್ರಮ

ಶಿವಮೊಗ್ಗ: ಗುರುವಾರ “ಸ್ವಚ್ಛಭಾರತ-ಶ್ರೇಷ್ಠ ಭಾರತ” ಘೋಷವಾಕ್ಯದೊಂದಿಗೆ ಸಕ್ರೆಬೈಲು ಆನೆ ಬಿಡಾರದಿಂದ ಮಂಡಗದ್ದೆಯ ಮಾರ್ಗವಾಗಿ 6 ಕಿಲೋ ಮೀಟರ್ ದೂರ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆ ಯನ್ನು ಗೌರಿಗದ್ದೆಯ ಅವಧೂತ ಶ್ರೀ ವಿನಯ್ ಗುರೂಜಿಯವರು ನೆರವೇರಿಸಿದರು.

ಈ ಕಾರ್ಯಕ್ರಮವು ಗೌರಿಗದ್ದೆಯ ಮಹಾತ್ಮ ಗಾಂಧಿ ಟ್ರಸ್ಟ್, ಶಿವಮೊಗ್ಗದ ಸರ್ಜಿ ಫೌಂಡೇಷನ್, ಓಪನ್ ಮೈಂಡ್ಸ್ ಶಾಲೆ ಜಾವಳ್ಳಿ, ಜೆಸಿಐ ಶಿವಮೊಗ್ಗ, ಪರೋಪಕಾರಂ ಹಾಗೂ ರೌಂಡ್ ಟೇಬಲ್ ಇಂಡಿಯಾ 166 ಹಾಗೂ ಆಶ್ರಯ ಬಡಾವಣೆ ಹಿತಾರಕ್ಷಣಾ ವೇದಿಕೆ ಇವರ ಸಹಯೋಗದೊಂದಿಗೆ ನಡೆಸಲಾಯಿತು.