Wednesday, 27th November 2024

ಪಾಲಿಕೆ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೆ ಅವಿರೋಧ ಆಯ್ಕೆ

ತುಮಕೂರು: ಮಹಾನಗರ ಪಾಲಿಕೆಯ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ; ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ; ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಹಾಗೂ ಲೆಕ್ಕಪತ್ರಗಳ ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೆ ಪ್ರತಿ ಸ್ಥಾಯಿ ಸಮಿತಿಗಳಿಗೆ 7 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.

ಮಹಾನಗರಪಾಲಿಕೆ(ಚುನಾವಣೆ) ಅಧ್ಯಕ್ಷಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಅಧ್ಯಕ್ಷತೆ ಯಲ್ಲಿ ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.

ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ

ಈ ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಜೆ. ಕುಮಾರ್, ಮಹೇಶ್, ಫರೀದಾ ಬೇಗಂ, ನೂರು ನ್ನೀಸಾ ಬಾನು, ಶಿವರಾಮ್, ಮುಜೀದಾ ಖಾನಂ, ಲಲಿತಾ ರವೀಶ್, ಮಂಜುಳಾ ಕೆ.ಎಸ್., ಹೆಚ್.ಎಸ್. ನಿರ್ಮಲ ಶಿವಕುಮಾರ್, ಹೆಚ್. ಮಲ್ಲಿಕಾರ್ಜುನಯ್ಯ ನಾಮಪತ್ರ ಸಲ್ಲಿಸಿದ್ದರು.

ನಾಮಪತ್ರ ಹಿಂಪಡೆಯಲು 5 ನಿಮಿಷ ಕಾಲಾವಕಾಶ ನೀಡಲಾಯಿತು. ಶಿವರಾಮ್, ಲಲಿತಾ ರವೀಶ್ ಹಾಗೂ ಮುಜೀದಾ ಖಾನಂ ಅವರು ತಮ್ಮ ನಾಮ ಪತ್ರಗಳನ್ನು ಹಿಂಪಡೆದಿದ್ದರಿ0ದ ಉಳಿದ 7 ಮಂದಿ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಆಯ್ಕೆಯಾದರು.

ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ : ಈ ಸಮಿತಿಯು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ತಲಾ ಒಬ್ಬರು ಸದಸ್ಯರನ್ನೊಳಗೊಂಡ 7 ಸದಸ್ಯರನ್ನು ಹೊಂದಿರಬೇಕು. ಶ್ರೀನಿವಾಸ ಮೂರ್ತಿ(ಸೀನಣ್ಣ), ಬಿ.ಜಿ. ಕೃಷ್ಣಪ್ಪ(ಪರಿಶಿಷ್ಟ ಪಂಗಡ), ಎಂ.ಕೆ.ಮನು, ವೀಣಾ ಬಿ.ಜಿ, ಸೈಯದ್ ನಯಾಜ್, ಶಿವರಾಮು(ಪರಿಶಿಷ್ಟ ಜಾತಿ), ಸಿ.ಎನ್. ರಮೇಶ್ ಅವರು ಸಲ್ಲಿಸಿದ ನಾಮಪತ್ರಗಳು ಸಿಂಧುವಾಗಿದ್ದರಿAದ ಸಮಿತಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಎಲ್ಲ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ

ಈ ಸಮಿತಿಯ ಸದಸ್ಯರ ಸ್ಥಾನಕ್ಕೆ 8 ನಾಮಪತ್ರಗಳು ಸಲ್ಲಿಕೆಯಾಗಿದ್ದು, ನಾಮಪತ್ರ ಸಲ್ಲಿಸಿದ ಧರಣೇಂದ್ರ ಕುಮಾರ್ ಅವರು, ತಮ್ಮ ನಾಮಪತ್ರವನ್ನು ಹಿಂಪಡೆದಿದ್ದರಿ0ದ ಉಳಿದ ನಾಸಿರಾ ಬಾನು, ಲಕ್ಷಿö್ಮÃನರಸಿಂಹರಾಜು, ನಾಜಿಮಾಬಿ, ಶಕೀಲ್ ಅಹಮ್ಮದ್ ಷರೀಫ್, ಬಿ.ಎಸ್. ಮಂಜುನಾಥ್, ಗಿರಿಜಾ ವಿ.ಎಸ್, ನವೀನಾ ಅರುಣ್ ಅವರು ಅವಿರೋಧವಾಗಿ ಆಯ್ಕೆಯಾದರು.

ಲೆಕ್ಕಪತ್ರಗಳ ಸ್ಥಾಯಿ ಸಮಿತಿ :  ಲೆಕ್ಕ ಪತ್ರ ಸ್ಥಾಯಿ ಸಮಿತಿಗೆ 7 ಸದಸ್ಯರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಎಲ್ಲವೂ ಸಿಂಧು ವಾಗಿದ್ದರಿAದ ಎ. ಶ್ರೀನಿವಾಸ್, ಶಶಿಕಲಾ ಗಂಗಹನುಮ0ತಯ್ಯ, ನಳಿನಾ ಇಂದ್ರಕುಮಾರ್, ಧರಣೇಂದ್ರ ಕುಮಾರ್, ಇನಾಯಿ ತುಲ್ಲಾ ಖಾನ್, ಎಸ್. ಮಂಜುನಾಥ್, ಮುಜೀದಾ ಖಾನಂ ಅವರು ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಮೇಯರ್ ಪ್ರಭಾವತಿ, ಉಪಮೇಯರ್ ಟಿ.ಕೆ. ನರಸಿಂಹ ಮೂರ್ತಿ, ಪಾಲಿಕೆ ಸದಸ್ಯರು, ಅಪರ ಪ್ರಾದೇಶಿಕ ಆಯುಕ್ತ ಡಾ.ಬಿ.ಎಸ್. ಶ್ರೀಪಾದ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಅಪರ ಜಿಲ್ಲಾಧಿಕಾರಿ ಕೆ.ಚನ್ನ ಬಸಪ್ಪ, ಉಪ ವಿಭಾಗಾಧಿಕಾರಿ ವಿ. ಅಜಯ್, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.