Thursday, 12th December 2024

ಕರೋನಾ ನಿಯಂತ್ರಣದಲ್ಲಿ ನಿರೀಕ್ಷಣಾಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ: ಡಿಎಚ್ಒ

ತುಮಕೂರು:ಕರೋನಾ ನಿಯಂತ್ರಣದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ, ತುಮಕೂರು ಜಿಲ್ಲಾ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ 2023ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಆರೋಗ್ಯ ಇಲಾಖೆ ಸರಕಾರದ ಯಾವುದೇ ಕಾರ್ಯಕ್ರಮವನ್ನು ಸಮರ್ಥವಾಗಿ ನಿಭಾಯಿ ಸಿದೆ ಎಂದರೆ, ಆದರಲ್ಲಿ ಆರೋಗ್ಯ ನಿರೀಕ್ಷಕರ ಪಾತ್ರ ಬಹಳಷ್ಟಿದೆ ಎಂಬುದನ್ನು ನಾವೆ ಲ್ಲರೂ ಅರಿಯಬೇಕಿದೆ ಎಂದರು.
ಹೊಸ ವರ್ಷದ 2023ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹ ರಾಜು, ಜನಸಾಮಾನರೊಂದಿಗೆ ನೇರವಾಗಿ ಸಂರ್ಪಕ ಬೆಳೆಸಿ,ದೇಶದ ಕಟ್ಟಡ ಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ನೀಡುತ್ತಿರುವುದು ಆರೋಗ್ಯ ಇಲಾಖೆ ಎಂದರು.
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಕೆ.ಎಲ್.ಮಾತನಾಡಿ, ಆರೋಗ್ಯ ನಿರೀಕ್ಷಕರು ಶೇ50ಕ್ಕೂ ಹೆಚ್ಚು ಹುದ್ದೆಗಳ ಖಾಲಿ ಇದ್ದರೂ ಶೇ100ರಷ್ಟು ಸಮರ್ಪಕ ಸೇವೆಯನ್ನು ಒದಗಿಸುತ್ತಿದ್ದೇವೆ.ಆದರೂ ನಮಗೆ 2-3 ತಿಂಗಳಿಗೊಮ್ಮೆ ವೇತನ ದೊರೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಕೇಂದ್ರ ಸಂಘದ ಅಧ್ಯಕ್ಷ ಪರಶುರಾಮಪ್ಪ ಮಾತನಾಡಿ, ಆರೋಗ್ಯ ನಿರೀಕ್ಷ ಕರು ಕೋವಿಡ್ ಅಂತಹ ಸಂದರ್ಭದಲ್ಲಿ ಖಾಲಿ ಹುದ್ದೆಗಳ ನೆಪ ಹೇಳದೆ ಹಗಲಿರುಳು ತಮ್ಮ ಪ್ರಾಣ ಪಣಕ್ಕಿಟ್ಟು ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಿದ್ದಾರೆ.ಅವರ ಸೇವೆಯನ್ನು ಕಡೆಗಣಿಸಿ, ಪರಿಹಾರ ನೀಡದಿರುವುದು ದುರದೃಷ್ಟಕರ ಎಂದರು.
ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ತುಮಕೂರು ಜಿಲ್ಲಾಧ್ಯಕ್ಷ ನಾಗೇಶ್ ಮಾತನಾಡಿ,  ಒಂದು ಗ್ರಾಮದ ಪ್ರತಿ ಮನೆಯ ಮಾಹಿತಿಯನ್ನು ಕಲೆ ಹಾಕಿ,ಅವರಿಗೆ ಆರೋಗ್ಯ ಸೇವೆ ಒದಗಿಸುವ ಕೆಲಸವನ್ನು ಆರೋಗ್ಯ ನಿರೀಕ್ಷಕರು ಮಾಡು ತ್ತಿದ್ದಾರೆ. ಜಿಲ್ಲೆಗೆ 331 ಹುದ್ದೆಗಳು ಮಂಜೂರಾಗಿದ್ದು,140ಮಾತ್ರ ತುಂಬಲಾಗಿದೆ.
 ಶೇ.50ಕ್ಕಿಂತಲೂ ಹೆಚ್ಚು ಹುದ್ದೆ ಖಾಲಿ ಇವೆ.ಸರಕಾರ ಖಾಲಿ ಹುದ್ದೆಗಳನ್ನು ನೇರ ನೇಮಕ ಮತ್ತು ಬಡ್ತಿ ಮೂಲಕ ತುಂಬುವ ಕೆಲಸ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಟಿ.ಎನ್.ಪುರುಷೋತ್ತಮ್, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ರಜಿನಿ.ಎಂ., ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ.ಮೋಹನ್‌ದಾಸ್,ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿ ಡಾ.ಕೇಶವರಾಜ್,ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಶ್ರೀದೇವಿ ಚಂದ್ರಿಕಾ,ಆಡಳಿತಾಧಿಕಾರಿ ವಿಲ್ಸನ್ ಸ್ಯಾಮುವೆಲ್,ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ತುಮಕೂರು ಜಿಲ್ಲೆಯ ಅಧ್ಯಕ್ಷರಾದ ನಾಗೇಶ್.ಎಸ್.,ಗೌರವಾಧ್ಯಕ್ಷ ಬ್ರಹ್ಮಾನಂದಮ್, ಪದಾಧಿಕಾರಿಗಳಾದ ಪುಟ್ಟಯ್ಯ, ಎಂ.ಸಿ, ವಿಶ್ವೇಶ್ವರಯ್ಯ, ಬೋಜರಾಜು.ಬಿ.ಡಿ, ಬಸವರಾಜು ಪಿ.ಎಲ್.,ಟಿ.ಶ್ರೀನಿವಾಸಮೂರ್ತಿ, ಯೋಗೀಶ್ ಹೆಚ್.ಸಿ., ಮಂಜುನಾಥ್.ಎಂ.ಹೆಚ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.