Tuesday, 3rd December 2024

ದತ್ತಿ ಉಪನ್ಯಾಸ ಕಾರ್ಯಕ್ರಮ

ದೇವದುರ್ಗ: ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡುವ ವ್ಯಕ್ತಿಗಳಿಂದ ಯುವ ಕವಿಗಳು, ಲೇಖಕರು ಮತ್ತು ಸಾಹಿತ್ಯವೂ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಮರಿಲಿಂಗಪ್ಪ ಕೋಳೂರ ಹೇಳಿದರು.

ಪಟ್ಟಣದ ವಿದ್ಯಾಗಿರಿಯ ಪರಿಶಿಷ್ಟ ಪಂಗಡ ಮೆಟ್ರಿಕ್ ನಂತರ ವಸತಿ ನಿಲಯ ದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ, ಅಮರಮ್ಮ ಶೆಟ್ಟಿ, ಪಾರ್ವತಮ್ಮ ವೀರಣ್ಣ ಬಳೆ, ಎಚ್ ಶಾಂತಪ್ಪ ಮತ್ತು ಶರಣಪ್ಪ ಗುಡದಿನ್ನಿ ಸ್ಮಾರಕ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ದತ್ತಿಯಿಂದ ಪೂರ್ವಜರ ಹೆಸರನಲ್ಲಿ ಕನ್ನಡ ಕಟ್ಟುವ ಕೆಲಸವಾಗುತ್ತಿದೆ.

ದೇಶದ ಬಹುತೇಕ ಪ್ರಾದೇಶಿಕ ಭಾಷೆಗಳು ಸಂವಿಧಾನಾತ್ಮಕ ಮಾನ್ಯತೆ ಪಡೆದರು ಸಹ ಅಳಿವಿನಂಚಿನಲ್ಲಿವೆ. ಇಂತಹ ಕಾರ್ಯ ಕ್ರಮಗಳಿಂದ ಸಾಹಿತ್ಯ, ಭಾಷೆ ಮತ್ತು ಮುಂದಿನ ಯುವ ಪೀಳಿಗೆ ಸಹಕರಿಯಾಗಲಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯದಲ್ಲಿ ವೀರಶೈವ ಸಾಹಿತ್ಯ ಕುರಿತು ಮಾತನಾಡಿದ ಕಸಾಪ ಮಾಜಿ ಅಧ್ಯಕ್ಷ ಬಸವರಾಜ ಬ್ಯಾಗವಾಟ ಪ್ರಸ್ತುತ ವೈಚಾರಿಕ ಸಾಹಿತ್ಯವು ಜನರ ನಂಬಿಕೆಯ ಮೇಲೆ ನಿಂತಿದೆ. ವಚನ ಸಾಹಿತ್ಯ ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಚನಗಳಲ್ಲಿ ಸಮಾನತೆ, ಅಸ್ಪೃಶ್ಯತೆ ನಿವಾರಣೆ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಆಶಯಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಮಡಿವಾಳ ಮಾಚಿದೇವ ಹಾಗೂ ಶರಣ ಸಾಹಿತ್ಯ ಕುರಿತು ಮಾತನಾಡಿದ ಸಾಬಣ್ಣ ನಾಯಕ 12ನೇ ಶತಮಾನದಲ್ಲಿ ವಚನ ಸಾಹಿತ್ಯ ಧಾರ್ಮಿಕ, ಸಾಮಾಜಿಕ ಸಮಾನತೆಯ ಕ್ರಾಂತಿಗೆ ನಾಂದಿಯಾಯಿತು. ಅಂದಿನ ಶರಣರೆಲ್ಲರೂ ಯಾವುದೇ ತತ್ವಶಾಸ್ತ್ರ ಪ್ರತಿ ಗಳನ್ನು ಓದಿರಲಿಲ್ಲ ಜನಸಾಮಾನ್ಯರೊಡನೆ ಬೆರೆತು ತಮಗಾದ ಅನುಭವದಿಂದ ವಚನ ಗಳನ್ನು ರಚಿಸುವ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿ ದ್ದರು. ಆದರೆ ಅಂದು ಸಮಾಜ ಒಪ್ಪಲಿಲ್ಲ. ಹಿಂದಿನವರು ಅಳವಡಿಸಿ ಕೊಳ್ಳುತ್ತಿಲ್ಲ.

ಅನುಭವ ಮಂಟಪದಲ್ಲಿದ್ದ ಎಲ್ಲಾ ಶರಣರು ದಲಿತ-ಹಿಂದುಳಿದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರಿಂದ ಜನ ಅವರನ್ನು ಒಪ್ಪಲಿಲ್ಲ ಎಂದು ಅಲ್ಲಮಪ್ರಭು ಅವರು ಸೇರಿದಂತೆ ಅನೇಕ 12ನೇ ಶತಮಾನದ ಶರಣರು ತಮ್ಮ ವಚನಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಿದರು.

ನಿಲಯ ಮೇಲ್ವಿಚಾರಕಿ ವಿಜಯಲಕ್ಷ್ಮಿ, ದತ್ತಿ ದಾನಿಗಳಾದ ನಾಗರತ್ನ ಎಲ್ ಇಂಡೆ, ಭೋಜರಾಜ ಮಿಣಜಗಿ, ಯುವ ಸಾಹಿತಿ ರಾಜಶೇಖರ್ ಗೂಗಲ್, ಯಮನೇಶ ಗೌಡಗೇರಾ, ಸಾಹಿತಿ ಚಲನಚಿತ್ರ ನಿರ್ದೇಶಕ ನಮ್ಮ ಋಷಿ ಮತ್ತು ವಸತಿ ನಿಲಯ ವಿದ್ಯಾರ್ಥಿ ನಿಯರು ಭಾಗವಹಿಸಿದ್ದರು.