Thursday, 30th November 2023

ಹಳೆಯ ದ್ವೇಷಕ್ಕೆ ಅಡಿಕೆ ಗಿಡಗಳು ನಾಶ…!

ದಾವಣಗೆರೆ: ಇಬ್ಬರು ವ್ಯಕ್ತಿಗಳ ನಡುವೆ ಇದ್ದ ಹಳೆಯ ದ್ವೇಷಕ್ಕೆ ತೋಟದಲ್ಲಿ ಬೆಳೆದಿದ್ದ ಅಡಿಕೆ ಗಿಡಗಳು ನಾಶ ವಾಗಿವೆ.

ದಾವಣಗೆರೆ ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಹಳೆಯ ದ್ವೇಷವನ್ನೇ ಗುರಿಯಾಗಿಸಿಕೊಂಡ ಕಿಡಿಗೇಡಿಗಳು ಈ ದುಷ್ಕೃತ್ಯ ಎಸಗಿ ದ್ದಾರೆ. ನಾಶಗೊಂಡ ಅಡಿಕೆ ತೋಟವು ರೈತ ಹಾಲೇಶಪ್ಪ ಎಂಬವರಿಗೆ ಸೇರಿದ್ದಾಗಿದ್ದು, ಸುಮಾರು 200 ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾರೆ.

ಎರಡು ಎಕರೆ ಅಡಿಕೆ ತೋಟ ಮಾಡಿದ್ದ ಹಾಲೇಶಪ್ಪ ಬೆಳೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಮೂರು ವರ್ಷದ ಅಡಿಕೆ ಗಿಡಗಳು ದ್ವೇಷಕ್ಕೆ ಬಲಿಯಾಗಿರುವುದು ಹಾಲೇಶಪ್ಪ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೃತ್ಯದಿಂದ ಮನ ನೊಂದಿರುವ ರೈತ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ರೈತ ಹಾಲೇಶಪ್ಪ ತಮ್ಮ ಜಮೀನಿನಲ್ಲಿ ಎರಡು ವರ್ಷಗಳ ಹಿಂದೆ ಅಡಿಕೆ ಗಿಡಗಳನ್ನು ಹಾಕಿದ್ದರು. ಈಗಾಗಲೇ ಗಿಡಗಳು ಎದೆಯೆತ್ತರಕ್ಕೆ ಬೆಳೆದಿದ್ದವು. ಕೆಲ ಕಿಡಿಗೇಡಿಗಳು ಹಳೆಯ ದ್ವೇಷಕ್ಕೆ ಉತ್ತಮ ಫಸಲು ನೀಡಲು ತಯಾರಾ ಗಿದ್ದ ಅಡಿಕೆ ಗಿಡಗಳನ್ನೇ ರಾತ್ರೋ ರಾತ್ರಿ ಕಡಿದು ಹಾಕಿದ್ದಾರೆ.

ಬೆಳಗ್ಗೆ ಹಾಲೇಶಪ್ಪನವರು ಜಮೀನಿಗೆ ಆಗಮಿಸಿದ್ದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ.

error: Content is protected !!