ಗುಬ್ಬಿ: ತಾಲೂಕಿನ ಅಡಗೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀರಾಮ ದೇವರ ದೇವಸ್ಥಾ ನದ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪೂಜ್ಯ ವೀರೇಂದ್ರ ಹೆಗ್ಗಡೆ ಯವರು ಮಂಜೂರು ಮಾಡಿದ 200000/- ಮೊತ್ತದ ಡಿಡಿಯನ್ನು ತಾಲ್ಲೂಕು ಯೋಜನಾಧಿಕಾರಿ ರಾಜೇಶ್ ದೇವಸ್ಥಾನ ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭ ಪಿಡಿಒ ಶಿವಾನಂದ, ಮುಖಂಡ ಚನ್ನಬಸವೇಗೌಡ, ಗ್ರಾ ಪಂ ಸದಸ್ಯರಾದ ಲೀಲಾವತಿ ಮಂಜುನಾಥ, ಮಂಗಳಮ್ಮ ಕರೆ ತಿಮ್ಮಯ್ಯ
ಜಗದೀಶ್, ದೇವಸ್ಥಾನದ ಸಮಿತಿಯ ಅಧ್ಯಕ್ಷ ವಿಜಯ್ ಕುಮಾರ್, ಉಪಾಧ್ಯಕ್ಷ ರಾಮಣ್ಣ, ಕಾರ್ಯದರ್ಶಿ ಮಂಜಣ್ಣ, ಮೇಲ್ವಿಚಾರಕಿ ದೀಪಿಕಾ,ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಆರೋಗ್ಯ ಸಹಾಯಕಿ ಆಶಾ ಕಾರ್ಯಕರ್ತರು, ಸೇವಾ ಪ್ರತಿನಿಧಿ ಸೇರಿದಂತೆ ಇನ್ನಿತರರು ಹಾಜರಿದ್ದರು.