Wednesday, 29th November 2023

ಐವರ ಭೀಕರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಅಕ್ಕನೇ ಕೊಲೆಗಾರ್ತಿ !

ಮಂಡ್ಯ: ಒಂದೇ ಕುಟುಂಬದ ಐವರ ಭೀಕರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ತಂಗಿ ಗಂಡನ ಮೇಲಿನ ಮೋಹದಿಂದ ಆಕೆಯನ್ನು ಮತ್ತು ಆಕೆಯ ನಾಲ್ವರು ಮಕ್ಕಳನ್ನು ಅಕ್ಕನೇ ಕೊಲ್ಲಿಸಿದ್ದು ಎಂಬುದು ತನಿಖೆ ವೇಳೆ ಬಹಿರಂಗಗೊಂಡಿದೆ.

ಫೆ.6ರಂದು ಕೆಆರ್ ಎಸ್ ಬಳಿ ತಾಯಿ ಲಕ್ಷ್ಮೀ (26) ಹಾಗೂ ಮಕ್ಕಳಾದ ರಾಜ್ (13), ಕೋಮಲ್ (7), ಕುನಾಲ್ (4), ಗೋವಿಂದ (8) ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಲಕ್ಷ್ಮೀ ಪತಿ ಗಂಗಾರಾಮ್ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಅಕ್ಕ 5 ಮಂದಿಯ ಹತ್ಯೆ ಮಾಡಿದ ಕಿರಾತಕಿ.

ನನ್ನನ್ನು ಮದುವೆ ಆಗು ಎಂದು ಗಂಗಾರಾಮ್ ನನ್ನು ತಂಗಿ ಪೀಡಿಸುತ್ತಿದ್ದಳು. ಗಂಗಾರಾಮ್ ಸಮಯ ಮುಂದೂಡುತ್ತಾ ಬಂದಿದ್ದರಿಂದ ಆತನು ಇಲ್ಲದ ಸಮಯದಲ್ಲಿ ಮನೆಯಲ್ಲಿ ಊಟಕ್ಕೆ ಬಂದಿದ್ದ ಲಕ್ಷ್ಮೀ, ಎಲ್ಲರೂ ಮಲಗಿದ ನಂತರ ಸುತ್ತಿಗೆಯಿಂದ ಎಲ್ಲರ ತಲೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾಳೆ. ಸುತ್ತಿಗೆ ಯಿಂದ ಹಲ್ಲೆ ಮಾಡಿದ ಬಳಿಕವೂ ಲಕ್ಷ್ಮೀ ಕುತ್ತಿಗೆ ಹಿಸುಕಿ ಸಾಯಿಸಿದ್ದಾಳೆ.

ತಂಗಿ ಲಕ್ಷ್ಮೀ ಆಂಧ್ರಪ್ರದೇಶದಲ್ಲಿ ವಾಸವಿದ್ದು, ಕಳೆದ 2 ತಿಂಗಳಿನಿಂದ ಮೈಸೂರಿನಲ್ಲಿ ವಾಸ ಮಾಡುತ್ತಿದ್ದಳು. ಅಂದು ಐವರನ್ನು ಕೊಲೆ ಮಾಡಿ ಅಮಾಯಕಿಯಂತೆ ಜನರ ಮಧ್ಯ ಅಳುತ್ತಾ ಕುಳಿತಿದ್ದಳು. ಬೆಳಗಿನ ಜಾವ 4 ಗಂಟೆ ಸಮಯದಲ್ಲಿ KRS ನಿಂದ ಬಸ್ ಮೂಲಕ ಮೈಸೂರಿಗೆ ಪ್ರಯಾಣ ಬೆಳೆಸಿದ್ದಾಳೆ. ಬೆಳಿಗ್ಗೆ 10 ಗಂಟೆ ವೇಳೆಗೆ ತನಗೆ ಏನು ಗೊತ್ತಿಲ್ಲ ಎಂಬಂತೆ ಮತ್ತೆ ಕೆಆರ್​​ಎಸ್​​ಗೆ ಬಂದಿದ್ದಾಳೆ.

error: Content is protected !!