Tuesday, 3rd December 2024

ಕಾಂಗ್ರೆಸ್ ಯುವ ನಾಯಕಿ ನವ್ಯಶ್ರಿ ವಿರುದ್ದ ಎಫ್ಐಆರ್ ದಾಖಲು

ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ಎಂದು ಗುರುತಿಸಿಕೊಂಡಿರುವ ನವ್ಯಶ್ರಿ ರಾಮ ಚಂದ್ರರಾವ್ ವಿರುದ್ಧ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ಎಂಬವರು ಚೆನ್ನಪಟ್ಟಣ ಮೂಲದ ಕೈ ನಾಯಕಿ ನವ್ಯಶ್ರೀ ವಿರುದ್ಧ ದೂರು ದಾಖಲಿಸಿದ್ದು, ವಂಚನೆ, ಬ್ಲ್ಯಾಕ್ ಮೇಲ್ ಪ್ರಕರಣ ದಾಖಲಿಸಿದ್ದಾರೆ.

ಶಾಸಕ ಶ್ರೀಮಂತ ಪಾಟೀಲ್ ಅವರು ಸಚಿವರಾಗಿದ್ದ ಸಂದರ್ಭ ಬೆಳಗಾವಿಗೆ ಆಗಮಿಸಿದ್ದ ನವ್ಯಶ್ರೀ, ಸಚಿವರ ಪಿಎಸ್ ಆಗಿದ್ದ ರಾಜಕುಮಾರ್ ಅವರ ಪರಿಚಯ ಮಾಡಿಕೊಂಡಿ ದ್ದರು. ಪರಿಚಯದಿಂದ ಸ್ನೇಹ ಇತ್ತು. ಕೆಲ ದಿನಗಳಲ್ಲೇ ಇಬ್ಬರ ನಡುವೆ ಮನಸ್ತಾಪ ಆರಂಭವಾಗಿ, ನವ್ಯಶ್ರೀ ರಾಜಕುಮಾರ್ ವಿರುದ್ಧ ಬೆಳಗಾವಿ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದರು.

ಇದೀಗ ರಾಜಕುಮಾರ್ ಟಾಕಳೆ ನವ್ಯಶ್ರೀ ವಿರುದ್ಧ ಬ್ಲ್ಯಾಕ್ ಮೇಲ್ ಹಾಗೂ 2 ಲಕ್ಷ ರೂಪಾಯಿ ಹಣ ಪಡೆದಿರುವ ಬಗ್ಗೆ ದೂರು ದಾಖಲಿಸಿದ್ದು, ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ನವ್ಯಶ್ರೀ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.