Thursday, 24th October 2024

Gauri Ganesh Celebration: ವಿಘ್ನ ವಿನಾಯಕನಿಗೆ ವಿಶೇಷ ಪೂಜೆ

ತುಮಕೂರು: ಗೌರಿ ಗಣೇಶ ಹಬ್ಬಕ್ಕೆ ಸಡಗರದ ಸಿದ್ದತೆ ಜರುಗಿದ್ದು, ನಗರ‌ ಸೇರಿದಂತೆ ಜಿಲ್ಲೆಯಲ್ಲಿ ಗೌರಿ ಗಣೇಶ ಮಣ್ಣಿನ ಮೂರ್ತಿಗಳು ರಾರಾಜಿಸುತ್ತಿವೆ.

ವಿವಿಧ ಎತ್ತರದ ತರಹೇವಾರಿ ಮಣ್ಣಿನ ಗೌರಿ ಗಣಪತಿ ಮೂರ್ತಿಗಳು ರಾರಾಜಿಸುತ್ತಿದ್ದು, ಕನಿಷ್ಠ 300 ರುಪಾಯಿ ಗಳಿಂದ,15000 ರುಪಾಯಿಗಳವರೆಗೆ ಮಾರಾಟವಾಗುತ್ತಿತ್ತು. ಅಶೋಕ ರಸ್ತೆಯಲ್ಲಿ ಮಾರಾಟಕ್ಕಿಟ್ಟಿರುವ ಗಣಪತಿ ಮೂರ್ತಿ ಗಳಲ್ಲಿ ಅಯೋಧ್ಯೆ ರಾಮಲಲ್ಲಾ ಮಾದರಿ ಗಣಪತಿ ಮೂರ್ತಿ ಗಮನ ಸೆಳೆಯಿತು.

ಬಣ್ಣ ರಹಿತ ಗಣಪತಿ ಮೂರ್ತಿ ಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಮಹಿಳೆಯರು ಗೌರಿ ಪೂಜೆಗಾಗಿ ಮಣ್ಣಿನ ಮೂರ್ತಿಗಳನ್ನು, ಬಾಗಿನ, ಮಂಗಳ ದ್ರವ್ಯ ಗಳನ್ನು ಕೊಂಡೊಯ್ಯುತ್ತಿದ್ದ ದೃಶ್ಯ ಕಂಡು ಬಂದಿತು.