Saturday, 14th December 2024

ವಿಶೇಷ ಗ್ರಾಮ ಸಭೆ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ: ತಾಲೂಕಿನ ತೀರ್ಥಪುರ ಗ್ರಾಮ ಪಂಚಾಯಿತಿಯ ಬರಸಿಡ್ಲಹಳ್ಳಿ ಗ್ರಾಮದಲ್ಲಿ ಜಲ ಜೀವನ್‌ ಮಿಷನ್ ಯೋಜನೆಯ ಕುರಿತು ವಿಶೇಷ ಗ್ರಾಮ ಸಭೆ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.
 ಜಲ ಜೀವನ್‌ ಮಿಷನ್ ಯೋಜನೆಯ ಗುರಿ ಉದ್ದೇಶಗಳು, ಗ್ರಾಮೀಣ ಪ್ರದೇಶದ ಜನರಿಗೆ ಶುದ್ದ ಮತ್ತು ಸುರಕ್ಷಿತ ನೀರಿನ ಅವಶ್ಯಕತೆ, ಮೀಟರ್ ಅಳವಡಿಕೆ ಮಹತ್ವ, ಸಮುದಾಯ ವಂತಿಕೆ, ಗ್ರಾಮ‌ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರ ಜವಾಬ್ದಾರಿಗಳ ಬಗ್ಗೆ  ಶೌಚಾಲಯ ಬಳಕೆ ನಿರ್ವಹಣೆ ಬಗ್ಗೆ ತಿಳಿಸಲಾಯಿತು ಮತ್ತು ಹಸಿಕಸ ಒಣ ಕಸ ಕಸವಿಲೇವಾರಿ ಘಟಕ ಬೂದು ನೀರು ಮಳೆ ನೀರು ಮಳೆ ಕೊಯ್ಲುಬಗ್ಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ  ರೇಣುಕಮ್ಮ, ಉಪಾಧ್ಯಕ್ಷರಾದ  ನಿರಂಜನ ಮೂರ್ತಿ ರವರು ಸದಸ್ಯರುಗಳಾದ ಕಲ್ಪನ, ಲಕ್ಷ್ಮೀದೇವಮ್ಮ, ಬಸವರಾಜು, ರಮೇಶ್ ನರಸಿಂಹ ಮೂರ್ತಿ ರವರು ಪಂಚಾಯತಿ ಅಭಿವೃದ್ಧಿ  ಅಧಿಕಾರಿಗಳಾದ  ಮಂಜುನಾಥ ರವರು ಬಿಲ್ ಕಲೆಕ್ಟರ್ ನರಸಿಂಹಮೂರ್ತಿ, ಡಿಇಒ ಮಂಜುನಾಥ, ಧರ್ಮಪ್ರಕಾಶ್ ನೀರು ವಿತರಕರು,  ಎನ್ ಬಿಕೆ ಸಂಘದ ಸದಸ್ಯರು, /ಆಶಾ ಕಾರ್ಯಕರ್ತೆ ಯರು ಗ್ರಾಮಸ್ಥರು ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆಯ ಸಿಬ್ಬಂದಿ   ಶಿವಪ್ರಸಾದ್, ದೇವರಾಜು  ಕೃಷ್ಣಮೂರ್ತಿ ಹಾಜರಿದ್ದರು.