Thursday, 28th November 2024

ಜಗತ್ತು ಹಿಂದುತ್ವದ ಕಡೆ ಆಕರ್ಷಣೆಯಾಗುತ್ತಿದೆ

ತಿಪಟೂರು: ಪ್ರಪಂಚದ ೩೯ ದೇಶಗಳಲ್ಲಿ ಹಿಂದೂ ಸಂಘಟನೆಗಳು ಸೇವೆಯನ್ನು ಮಾಡುತ್ತಾ ಭವ್ಯ ಭಾರತ ದೇಶವನ್ನು ವಿಶ್ವಗುರುವಿನತ್ತ ಸಾಗುವಂತೆ, ಜಗತ್ತು ಹಿಂದುತ್ವದ ಕಡೆ ಆಕರ್ಷಣೆಯಾಗುತ್ತಿದೆ ಎಂದು ಆರ್‌ಎಸ್‌ಎಸ್‌ನ ತುಮಕೂರು ವಿಭಾಗ ಪ್ರಚಾರಕ ಶಿವರಾಜ್ ತಿಳಿಸಿದರು.

ನಗರದ ಗಾಯಿತ್ರಿನಗರದ ರಾಮಮಂದಿರ ದೇವಾಸ್ಥಾನದಿಂದ ರಾಷ್ಟಿçÃಯ ಸ್ವಯಂ ಸಂಘದ ವಿಜಯದಶಮಿ ಪಥಸಂಚಲನ ಆರಂಭಗೊ೦ಡು ಹಳೆಪಾಳ್ಯ ಅಂಜನೇಯ ದೇವಸ್ಥಾನದಲ್ಲಿ ಅಂತ್ಯಗೊ೦ಡು ನೆಡೆದ ವೇಧಿಕೆಯ ಕರ‍್ಯಕ್ರಮದಲ್ಲಿ ತಿಳಿಸಿದರು.
ದೇಶ ರಕ್ಷಣೆಗೆ ಕೌಟುಂಬಿಕ ರಕ್ಷಣೆಗೆ ಯಾವಗಲೂ ಸಂಘವು ಸಿದ್ದವಿದೆ.

ಇಂದಿನ ವಿದ್ಯಾಮಾನಕ್ಕೆ ಸಂಘವು ಬದಲಾವಣೆ ಹೊಂದುತ್ತಾ ಪ್ರತಿ ಮನೆಗಳಲ್ಲಿ ಸಾಮೂಹಿಕ ಭಜನೆ, ಸಾಮೂಹಿಕ ಭೋಜನ, ಸಾಮೂಹಿಕ ಭ್ರಮಣ ಮಾಡುವುದು, ಗೋರಕ್ಷಣೆಗೆ ಗೋ ಉತ್ಪನ್ನಗಳ ಬಳಕೆ ಹೆಚ್ಚಿಸುವುದು, ಅತಿ ಕಡಿಮೆ ಪ್ಲಾಸ್ಟಿಕ್ ಬಳಕೆ ಮಾಡಿ, ಹಸಿರು ವಾತಾವರಣವನ್ನು ನಿರ್ಮಿಸುವಂತಹ ಕೆಲಸಗಳು, ಜಾತಿ-ಜಾತಿಗಳನ್ನು ಮೀರಿ ಸಾಮರಸ್ಯವನ್ನು ಹೊಂದುವ೦ತೆ ಮಾಡುವುದು, ಗ್ರಾಮಗಳಲ್ಲಿ ಗ್ರಾಮ ವಿಕಾಸದ ಬಗ್ಗೆ ಚಿಂತನೆಗಳನ್ನು ನಡೆಸುವಂತಹ ಕೆಲಸಗಳನ್ನು ಸಂಘವು ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಲಕ್ಷಣ್‌ರವರು ಅನ್ಯಾಯವನ್ನು ಮೆಟ್ಟಿ ನಿಂತು, ಮನುಷ್ಯನಲ್ಲಿ ಸಾಮಾ ಜಿಕ ಸಂಬ೦ಧಗಳನ್ನು ಬೆಸೆಯುತ್ತಾ, ಸಂಸ್ಕಾರ ಸಂಸ್ಕೃತಿಗಳನ್ನು ಬೆಳೆಸುವತ್ತಾ ಸನಾತನ ಧರ್ಮದ ಅಸ್ಮೀತೆಯನ್ನು ಉಳಿಸುವ ಕೆಲಸ ಮಾಡುತ್ತಾ ಬರುತ್ತಿದೆ ಮುಂದೆಯೂ ಸಹ ನಾವುಗಳು ಮಾಡಬೇಕಾಗಿದೆ ಎಂದರು.

ಯಾವ ಧರ್ಮಕ್ಕೆ ಹುಟ್ಟು ಗೊತ್ತಿಲ್ಲದೆ ಇರುವ ನಮ್ಮ ಸನಾತನ ಧರ್ಮವಾಗಿದೆ, ಆದರೆ ಯಾವ ಧರ್ಮಕ್ಕೆ ಹುಟ್ಟಿವಿನ ವಿಚಾರ ಇದೆಯೋ ಅಂತಹ ಧರ್ಮಕ್ಕೆ ಸಾವಿನ ಅಂಶವು ಸಹ ಕಾಣುತ್ತದೆ ಎಂದರು.

ಕರ‍್ಯಕ್ರಮದಲ್ಲಿ ವಿಬಾಗ ಸಂಘ ಚಾಲಕರಾದ ನಾಗೇಂದ್ರಪ್ರಸಾದ್ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ನಗರಸಭೆ ಅದ್ಯಕ್ಷ ರಾಮ್‌ ಮೋಹನ್, ಭಾರತಿ ಕಿಸಾನ್ ಸಂಘದ ಜಿಲ್ಲಾಕಾರ್ಯದರ್ಶಿ ಮನೋಹರ್ ರಂಗಾಪುರ, ಖ್ಯಾತ ವೈದ್ಯ ಡಾ ಶ್ರೀಧರ್, ಜಿಲ್ಲಾ ಕಾರ್ಯವಾಹ ರವೀಂದ್ರ ತಗ್ಗಿನಮನೆ, ನಗರ ಕಾರ್ಯವಾಹ ಉಮೇಶ್ ಗೊರಗೊಂಡನಹಳ್ಳಿ, ಹಿಂದೂ ಜಾಗರಣ ವೇದಿಕೆಯ ನಟರಾಜ್ ಬಾಳೆಕಾಯಿ, ಭಾಜಪ ಅದ್ಯಕ್ಷ ಸುರೇಶ್ ಬಳ್ಳೆಕಟ್ಟೆ, ನಗರ ಅದ್ಯಕ್ಷ ಗುಲಾಬಿಸುರೇಶ್, ಜಿಲ್ಲಾ ಶಾರೀರಿಕ ಪ್ರಮುಖ ನಟರಾಜುಹಾಲೇನಹಳ್ಳಿ ಸೇರಿದಂತೆ ಸಂಘದ ಗಣ ವೇಷಧರಿಸಿ ಪಥಸಂಚಲನದಲ್ಲಿ ಭಾಗವಹಿಸಿ ಸ್ವಯಂಸೇವಕರಾಗಿ ಮತ್ತಿತ್ತರು ಹಾಜರಿದ್ದರು.