Tuesday, 3rd December 2024

ಮರಳಿ ಕಾಂಗ್ರೆಸ್ಗೆ ಮಾಜಿ ಶಾಸಕ ಎಚ್.ಆರ್. ಗವಿಯಪ್ಪ

ಹೊಸಪೇಟೆ: ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ಅವರು ಬಿಜೆಪಿ ತೊರೆಯುವುದು ಖಚಿತವಾಗಿದ್ದು, ಶುಕ್ರವಾರ ಬೆಂಗಳೂರಿ ನಲ್ಲಿ ಕೆ.ಪಿ.ಸಿ.ಸಿ. ಧ್ಯಕ್ಷ ಡಿ.ಕೆ. ಶಿವಕುಮಾರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರುವರು. ಇದರೊಂದಿಗೆ ಅವರು ಮರಳಿ ಮಾತೃಪಕ್ಷದ ಗೂಡು ಸೇರಲಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ನಡೆಯಲಿರುವ ಕಾರ್ಯಕ್ರಮಕ್ಕೆ ಅವರ ನೂರಾರು ಬೆಂಬಲಿ ಗರು ನಗರದಿಂದ ಬೆಂಗಳೂರಿಗೆ ಹೊರಡಲು ಸಿದ್ಧತೆ ನಡೆಸಿದ್ದಾರೆ. 200ಕ್ಕೂ ಹೆಚ್ಚು ವಾಹನಗಳಿಗೆ ವ್ಯವಸ್ಥೆ ಮಾಡಲಾಗಿದೆ.

2018ರಲ್ಲಿ ಅನಂದ್ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಗವಿಯಪ್ಪ ಅವರಿಗೆ ವಿಜಯನಗರ ಕ್ಷೇತ್ರದಿಂದ ಸ್ಪರ್ಧೆಗೆ ಟಿಕೆಟ್ ನಿರಾಕರಿಸಲಾಗಿತ್ತು. ಅವರು ಬಿಜೆಪಿ ಸೇರ್ಪಡೆ ಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಪೈಪೋಟಿ ನೀಡಿ ಆನಂದ್ ಸಿಂಗ್ ವಿರುದ್ಧ ಸೋಲು ಕಂಡಿದ್ದರು.

ಒಂದು ವರ್ಷದ ಅಂತರದಲ್ಲಿ ಆನಂದ್ ಸಿಂಗ್ ಪುನಾ ಪಕ್ಷಾಂತರ ಮಾಡಿ ಬಿಜೆಪಿ ಸೇರಿದ್ದರು. 2019ರ ಉಪಚುನಾವಣೆಯಲ್ಲಿ ಬಿಜೆಪಿ ಗವಿಯಪ್ಪ ಬದಲು ಆನಂದ್ ಸಿಂಗ್ ಅವರಿಗೆ ಮಣೆ ಹಾಕಿತ್ತು. ಆ ಚುನಾವಣೆ ಯಲ್ಲಿ ಮುನಿಸಿಕೊಂಡು ಗವಿಯಪ್ಪ ಸ್ಪರ್ಧಿಸಲಿಲ್ಲ. ನಂತರ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು. ಈಗ ಚುನಾವಣೆಗೆ ಕೆಲವೇ ತಿಂಗಳಿರುವಾಗ ಕಾಂಗ್ರೆಸ್ ಸೇರುತ್ತಿದ್ದಾರೆ. ನಾಯಕತ್ವ ಇಲ್ಲದೆ ಸೊರಗಿದ್ದ ಕಾಂಗ್ರೆಸ್ ಪಕ್ಷಕ್ಕೆ ವಿಜಯನಗರದಲ್ಲಿ ಸಾರಥಿ ಸಿಕ್ಕಂತಾಗಿದೆ.