Monday, 25th November 2024

ಜ.೧೫ರ ನಂತರ ಕಟ್ಟಡದ ಶಂಕುಸ್ಥಾಪನೆ: ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ: ಕಲ್ಯಾಣ ಮಂಟಪ ನಿರ್ಮಾಣಕ್ಕೆ ಮೂರು ಕೋಟಿ ಹಣ ಬಿಡುಗಡೆ ಮಾಡಲಾಗಿದ್ದು ಜ.೧೫ರ ನಂತರ ಅವಕಾಶ ನೋಡಿಕೊಂಡು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ದೇವಾಲಯದ ಭಕ್ತರು ಹಾಗು ಕಂದಾಯ, ಪುರಸಭೆ, ಮತ್ತು ಲೋಕೋಪಯೋಗಿ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ನೀಡಿದರು.

ಹಳೆಯೂರು ಆಂಜನೇಯಸ್ವಾಮಿ ಹೆಸರಿನಲ್ಲಿ ನೀರುಬಾಗಿಲು ಶಾಲೆಯ ಸಮೀಪ ಕಲ್ಯಾಣ ಮಂಟಪ ನಿರ್ಮಿಸಲಾಗುವುದು. ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ೧.೫ ಕೋಟಿ ಹಣ ಬಿಡುಗಡೆಯಾಗಿದೆ. ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘಟನೆಗಳ ಸದಸ್ಯರನ್ನೊಳ ಗೊಂಡ ಪ್ರತ್ಯೇಕ ಉಪ ಸಮಿತಿ ರಚಿಸಿ, ಸಮಿತಿಯನ್ನು ಅಂತಿಮಗೊಳಿಸುವ ಮುನ್ನ ನಮ್ಮೊಂದಿಗೆ ಚರ್ಚಿಸು ವಂತೆ ತಾಲ್ಲೂಕು ಆಡಳಿತಕ್ಕೆ ಸೂಚಿಸಿದರು.

ಬ್ರಾಹ್ಮಣ ಸಮುದಾಯದ ಮುಖಂಡ ರವಿ ಮಾತನಾಡಿ ದೇವಾಲಯಗಳಲ್ಲಿ ಧಾರ್ಮಿಕತೆ ಜತೆಗೆ ಸಮಾಜದ ಇತರೆ ಕಾರ್ಯ ಗಳನ್ನು ನೆರವೇರಿಸಲು ಅಭಿವೃದ್ದಿ ಕಾರ್ಯಗಳ ಅವಶ್ಯಕ ವಿದೆ. ಈ ನಿಟ್ಟಿನಲ್ಲಿ ಸಚಿವ ಮಾಧುಸ್ವಾಮಿರವರು ೩ ಕೋಟಿ ಅನುದಾನ ಒದಗಿಸಿರುವುದು ಶ್ಲಾಘನೀಯ ಕ್ರಮ ಎಂದರು.

ಅರ್ಚಕರಿಗೆ ವಸತಿ ಗೃಹ ನಿರ್ಮಿಸಿ
ಪ್ರಸನ್ನರಾಮೇಶ್ವರ, ಆಂಜನೇಯ ಸ್ವಾಮಿ ದೇವಾಲಯದ ಅರ್ಚಕರಿಗೆ ವಸತಿ ಕಟ್ಟಡವನ್ನು ನಿರ್ಮಾಣ ಮಾಡಬೇಕು. ಅವರು ಬಾಡಿಗೆ ಕಟ್ಟಡಗಳಲ್ಲಿದ್ದು ವೈಶ್ಯ, ಬ್ರಾಹ್ಮಣರ ಬೀದಿಗಳಲ್ಲೇ ವಾಸ ಮಾಡಬೇಕಿದೆ. ಇದರಿಂದ ಅವರ ಕುಟುಂಬಗಳಿಗೆ ನೆಲೆ ಇಲ್ಲದಂತಾಗಿದ್ದು ಮನೆ ಮಂದಿ ಆತಂಕಗೊ0ಡಿದ್ದಾರೆ. ಅರ್ಚಕರ ಕುಟುಂಬಗಳಿಗೆ ವಸತಿ ಗೃಹವನ್ನು ನಿರ್ಮಿಸಿ ನ್ಯಾಯ ಕಲ್ಪಿಸ ಬೇಕೆಂದು ರಘುಪತಿ ಒತ್ತಾಯಿಸಿದರು.

ಸಭೆಯಲ್ಲಿ ತಹಸೀಲ್ದಾರ್ ತೇಜಸ್ವಿನಿ, ಎಇಇ ಸೋಮಶೇಖರ್, ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್, ಮುಖಂಡ ಇಟ್ಟಿಗೆ ರಂಗಸ್ವಾಮಯ್ಯ, ಪುರಸಭಾ ಸದಸ್ಯ ರಾಜಶೇಖರ್, ಮಿಲಿಟರಿ ಶಿವಣ್ಣ, ಮಲ್ಲಿಕಾರ್ಜುನಸ್ವಾಮಿ, ಶ್ರೀನಿವಾಸ್, ಹಳೆಯೂರು ಆಂಜನೇಯ ಸ್ವಾಮಿ ದೇವಾಲಯದ ಅರ್ಚಕ ಲಕ್ಷಿö್ಮÃಶ, ಹಾಗು ಭಕ್ತರು ಉಪಸ್ಥಿತರಿದ್ದರು.