Wednesday, 21st February 2024

ಕಬಡ್ಡಿ : ದೇವಿಪುರ ಶಾಲಾ ವಿದ್ಯಾರ್ಥಿನಿಯರು ತಾಲೂಕು ಮಟ್ಟಕ್ಕೆ ಆಯ್ಕೆ

ಮಾನ್ವಿ: ತಾಲ್ಲೂಕಿನ ಪೋತ್ನಾಳ ಗ್ರಾಮದ ಸರ್ಕಾರಿ ಫ್ರೌಡ ಶಾಲೆಯ ಆವರಣದಲ್ಲಿ ಗುರುವಾರ ಮತ್ತು ಶುಕ್ರವಾರ ನಡೆದ ಹೋಬಳಿ ಮಟ್ಟದ 2022 -23ನೇ ಸಾಲಿನ ಕ್ರೀಡಾ ಕೂಟದಲ್ಲಿ ದೇವಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಕಬ್ಬಡಿ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಗಳನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾದ.ಜಯಶ್ರೀ, ತಿರುಮಲ, ತಾಯಮ್ಮ, ಪಲ್ಲವಿ, ರಂಜಿತ್, ಪೂಜಾ, ಚೈತ್ರಾ, ಈ ಎಲ್ಲಾ ವಿದ್ಯಾರ್ಥಿನಿಯರನ್ನು ಶಾಲೆಯ ಮುಖ್ಯ ಶಿಕ್ಷಕರಾದ ಕೆ. ಗುಂಡಯ್ಯ ನಾಯಕ ಹಾಗೂ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ ನಾಯಕ ಮತ್ತು ಉಪಾಧ್ಯಕ್ಷ ನಾಗನಗೌಡ ಸೇರಿದಂತೆ ಸರ್ವ ಸದಸ್ಯರು ಹಾಗೂ ಶಾಲೆಯ ಶಿಕ್ಷಕಿರಾದ ಗೀತಾ, ಲತಾ, ಲಕ್ಷ್ಮೀ, ಮತ್ತು ಝಾನ್ಸಿ ರಾಣಿ ಮತ್ತು ಸುನೀತಾ. ಹಾಗೂ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಅಭಿನಂದಿಸಿದ್ದಾರೆ.

error: Content is protected !!