Saturday, 27th July 2024

ಕಾಂಚೀ ಕಾಮಾಕ್ಷಿ ದೇಗುಲದ ಪ್ರತಿಷ್ಠಾಪನೆ

ಧಾರ್ಮಿಕ ವಿಧಿವಿಧಾನಗಳು ಆರಂಭ..ಏ. 6 ರಂದು ಶ್ರೀಕಾಂಚೀ ಶ್ರೀಗಳಿಂದ ಪ್ರತಿಷ್ಟಾಪನೆ ಕಾರ್ಯ

ಹೊಸಪೇಟೆ: ಸ್ಥಳೀಯ ಗಾಂಧಿಕಾಲೋನಿಯ ಪ್ರದೇಶದಲ್ಲಿನ ಶ್ರೀಕಾಂಚಿ ಕಾಮಾಕ್ಷಿ ದೇವಸ್ಥಾನದ ಪ್ರತಿಷ್ಠಾಪನೆ ನಿಮಿತ್ತ ಸೋಮವಾರ ಧಾರ್ಮಿಕ
ವಿಧಿವಿಧಾನಕ್ಕೆ ಚಾಲನೆ ನೀಡಲಾಯಿತು.

ಕಾಂಚಿ ಕಾಮಾಕ್ಷಿ ದೇವಸ್ಥಾನದ ಆವರಣದಲ್ಲಿ ಎಚ್.ಜಿ. ರಂಗನಗೌಡ ಕುಟುಂಬ ವರ್ಗದವರಿಂದ ಪೂಜೆ ಸಲ್ಲಿಸಲಾಯಿತು. ದೇವಿಯ ಜಲಾಧಿವಾಸ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಆರ್. ಗವಿಯಪ್ಪ, ಕಾಂಚೀ ಮಠದ ಪುರೋಹಿತರು ಸೇರಿದಂತೆ ಸ್ಥಳೀಯ ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು ಇದ್ದರು.

 

error: Content is protected !!