ವಿಜಯಪುರ : ಉದಯಪುರದಲ್ಲಿ ನಡೆದ ಕನ್ಹಯ್ಯಾಲಾಲ್ ಹತ್ಯೆ ಖಂಡಿಸಿ ನಗರದಲ್ಲಿ ಹಿಂದೂಪರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರು. ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಗಾಂಧಿಚೌಕ್ ವರೆಗೆ ನಡೆಯಿತು.
ನಂತರ ಗಾಂಧಿಚೌಕ್ ನಲ್ಲಿ ಕೊಲೆಮಾಡಿದ ಆರೋಪಿಗಳ ಪ್ರತಿಕೃತಿ ದಹನ ಮಾಡಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ್ , ಉಮೇಶ್ ಕಾರಜೋಳ, ರಾಘು ಅಣ್ಣಿಗೇರಿ, ಶ್ರೀಮಂತ ದುದ್ದಗಿ ಸೇರಿದಂತೆ ಅನೇಕ ಹಿಂದೂ ಹಾಗೂ ಬಿಜೆಪಿ ಮುಖಂಡರು ಹಾಜರಿದ್ದರು.