Sunday, 16th June 2024

ಅಂಬೇಡ್ಕರ್ ಮಾರ್ಗದಲ್ಲಿ ಯುವಕರು ನಡೆಯಿರಿ:  ಪ್ರಿಯಾಂಕ್ ಖರ್ಗೆ

ಸೇಡಂ: ಅಂಬೇಡ್ಕರ್ ಅವರ ಪುಸ್ತಕ ಓದಲು ಹೇಚ್ಚಿನ ಸಂಖ್ಯೆಯಲ್ಲಿ ಯುವಕರು ಮುಂದಾಗಬೇಕು. ಸಮಾಜಿಕ ಜಾಲತಾಣಗಳಲ್ಲಿ ಹೇಚ್ಚು ಸಮಯ ನೀಡದೇ ಪುಸ್ತಕ ಓದುವ ಮೂಲಕ ಹೇಚ್ಚಿನ ಜ್ಞಾನ ಪಡೆಯ ಬಹುದು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಯುವಕರಿಗೆ ಕಿವಿಮಾತು ಹೇಳಿದರು.

ಪಟಣ್ಣದ ಕರ್ನಾಟಕ ಸುವರ್ಣ ಭವನದಲ್ಲಿ ಆಯೋಜಿಸಿದ್ದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ 131ನೇ ಜಯಂತಿಯಲ್ಲಿ ಮಾತನಾಡಿ,

ಬುದ್ದ ಬಸವ ಅಂಬೇಡ್ಕರ್ ಅವರ ಮಾರ್ಗವೇ ಸಂವಿಧಾನವಾಗಿದೆ. ಪ್ರಬುದ್ಧ ಭಾರತ ನಿರ್ಮಾಣ ಮಾಡಲು ನೀವೆಲ್ಲರೂ ಶಿಕ್ಷಣದ ಕಡೆ ಹೇಚ್ಚಿನ ಗಮನ ಹರಿಸಬೇಕು. ಆಗ ಮಾತ್ರ ನಮ್ಮ ಜೀವನ ಉದ್ದಾರ ಆಗುತ್ತದೆ ಎಂದು ಹೇಳಿದರು.

ಜಯಂತಿಯಲ್ಲಿ ಡಿಜೆ ಕುಣಿತದಿಂದ ಯುವಕರು ಹಾಳಾಗಬೇಡಿ. ಡಿಜೆ ಸಂಪೂರ್ಣ ಬಂದ್ ಮಾಡಿದ್ದಾಗ ಮಾತ್ರ ಯುವಕರು ಉದ್ದಾರಗಲು ಸಾಧ್ಯ. ಸರ್ವ ಜನಾಂಗದವರಿಗೆ ಮಾತನಾಡಲು ನಾಲಿಗೆ ನೀಡಿದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ಎಂದು ನಾವೇಲ್ಲೂರು ಅರಿತು ಕೊಳ್ಳಬೇಕು. ತಮ್ಮ ನಾಲ್ಕು ಮಕ್ಕಳನ್ನು ಕರೆದುಕೊಂಡು ಸರ್ವ ಜನಾಂಗದವರಿಗೆ ಸಮಾನತೆ ಹಕ್ಕು ಸಂವಿ ಧಾನದ ಮೂಲಕ ಅಂಬೇಡ್ಕರ್ ನೀಡಿದ್ದಾರೆ ಎಂದರು.

ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಈ ದೇಶದ ಶೋಷಿತ ಜನಾಂಗದ ದ್ವನಿಯಾಗಿದ್ದವರು. ಅವರ ಮಾರ್ಗದಲ್ಲಿ ನಡೆಯಬೇಕು. ಹಳ್ಳಿ ಹಳ್ಳಿಗಳಲ್ಲಿ ಯುವಕರು ಅಂಬೇಡ್ಕರ್ ಅವರ ಪುಸ್ತಕ ದಿನಕೋಮ್ಮೆ ಓದಿದ್ದರೆ ಅಂದಾಗ ಮಾತ್ರ ನಾವು ಅಭಿವೃದ್ದಿ ಆಗಲು ಸಾಧ್ಯವಾಗುತ್ತದೆ ಎಂದು ಉರಿಲಿಂಗ ಪೆದ್ದಿಶ್ವರ ಮಠದ ಪರಮ ಪೂಜ್ಯ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಮಾಜಿ ಸಚಿವ ಮತ್ತು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ್ ಉಡಗಿ, ಜೆಡಿಎಸ್ ಮುಖಂಡ ಬಾಲರಾಜ ಗುತ್ತೆದಾರ, ಬಿಜೆಪಿ ಎಸ್ಸಿ ಮೋರ್ಚ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ, ಶ್ರೀ ಕೋತ್ತಲ ಬಸವೇಶ್ವರ ದೇವಾಲಯದ ಸಂಸ್ಥಾ ಪಕರು ಪರಮ ಪೂಜ್ಯ ಶ್ರೀ ಸದಾಶಿವ ಮಹಾ ಸ್ವಾಮಿಜಿ ಕೋಡ್ಲಾ ಮಠದ ಉರಿಲಿಂಗಪೆದ್ದಿಶ್ವರ ಮಠದ ನಂಜುಂಡಸ್ವಾಮಿ, ಹತ್ಯಾಳ ಬೌದ್ದವಿಹಾರ ಆಯುಷ್ಮನ ಭಂತೆ ಧಮ್ಮನಾಗ, ಹಂಪಿ ಮಾತಂಗ ಮಹಾಸ್ಥನ ಮಠದ ಪೂರ್ಣನಂದ ವಿಧ್ಯಬಾರತಿ, ಮಾಜಿ ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಸೇರಿದಂತೆ ಅನೇಕರು ಇದ್ದರು.

error: Content is protected !!