Thursday, 3rd October 2024

Kittur News: ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಣೆ ಮಾಡಬೇಕು: ಶಾಸಕ ಬಾಬಾಸಾಹೇಬ ಪಾಟೀಲ

Kittur News

ಚನ್ನಮ್ಮನ ಕಿತ್ತೂರು: ಎಲ್ಲ ಜನರು ಸೇರಿ ಒಗ್ಗೂಡಿ ಸೌಹಾರ್ದತೆಯಿಂದ ಎಲ್ಲ ಹಬ್ಬಗಳನ್ನು ಆಚರಣೆ ಮಾಡಬೇಕು ಎಂದು ಶಾಸಕ ಬಾಬಾ ಸಾಹೇಬ್ ಪಾಟೀಲ ಹೇಳಿದರು. (Kittur News) ಪಟ್ಟಣದ ಗಣೇಶ ಮೂರ್ತಿ ವಿಸರ್ಜನೆ ನಿಮಿತ್ತ ಪೊಲೀಸ್ ಇಲಾಖೆ, ಪಟ್ಟಣ ಪಂಚಾಯಿತಿ ಹಾಗೂ ಗಣೇಶೋತ್ಸವದ ಮಂಡಳಿಗಳ ಸಹಯೋಗದಲ್ಲಿ ಮಂಗಳವಾರ ಅರಳಿಕಟ್ಟಿ ವೃತ್ತದಲ್ಲಿ ರಸಮಂಜರಿ ಕಾರ್ಯಕ್ರಮ, ಸನ್ಮಾನ ಸಮಾರಂಭ ಹಾಗೂ ಮಹಾ ಅನ್ನಪ್ರಸಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈಗಾಗಲೇ ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಿದ್ದಾರೆ. ಈ ಬಾರಿ 200ನೇ ಕಿತ್ತೂರು ಉತ್ಸವ ಇರುವುದರಿಂದ ಪಟ್ಟಣದ ಸಾರ್ವಜನಿಕರೆಲ್ಲರೂ ಸೇರಿ ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸಹಕಾರ ನೀಡಬೇಕು. ಈ ವರ್ಷ ಉತ್ಸವಕ್ಕೆ ನಿರೀಕ್ಷೆ ಮೀರಿ ಜನ ಸೇರುವ ಸಾಧ್ಯತೆ ಇದೆ. ಐತಿಹಾಸಿಕ ಕಿತ್ತೂರು ಉತ್ಸವವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಒಯ್ಯಲು ಶ್ರಮಿಸೋಣ ಎಂದರು.

ಈ ಸುದ್ದಿಯನ್ನೂ ಓದಿ | JioPhone Prima 2: ಜಿಯೊದಿಂದ ಹಳೇ ಮಾಡೆಲ್‌ನಲ್ಲೇ ಸ್ಮಾರ್ಟ್‌ ಫೋನ್‌! ದರ ಕೇವಲ 2799 ರೂ!

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ರವಿ ನಾಯ್ಕ, ಡಾ. ಬಸವರಾಜ ಪರವನ್ನವರ, ಬಾವುದ್ದಿನ್ ಮಕಾಂದಾರ ಮಾತನಾಡಿದರು.

ಪಿಕೆ ಮೆಲೋಡಿಸ್ ತಂಡದಿಂದ ವಿವಿಧ ರಸಮಂಜರಿ ಕಾರ್ಯಕ್ರಮಗಳು ಜರುಗಿದವು. ಪಟ್ಟಣದ ಯುವಕರು ಹಾಗೂ ಸಾರ್ವಜನಿಕರು ಗಣೇಶ ಮೂರ್ತಿಯನ್ನು ಮೆರವಣಿಗೆ ಮಾಡುವ ಮೂಲಕ ರಾಷ್ಟೀಯ ಹೆದ್ದಾರಿ ಪಕ್ಕದಲ್ಲಿರುವ ತುಂಬುಗೆರೆಯಲ್ಲಿ ವಿಸರ್ಜನೆ ಮಾಡಿದರು. ಕಿತ್ತೂರು ಪೊಲೀಸರು ಬಂದೋಬಸ್ತ್ ವಹಿಸಿದ್ದರು.

ಈ ಸುದ್ದಿಯನ್ನೂ ಓದಿ | HD Kumaraswamy: ಹೆಚ್ಚಿನ ಆಮದು ಸುಂಕ ಹೇರುವ ಮೂಲಕ ಚೀನಾ ಉಕ್ಕಿಗೆ ಕಡಿವಾಣ

ಈ ವೇಳೆ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಪಂಚಾಕ್ಷರಿ ಸ್ವಾಮೀಜಿ, ಮುಖಂಡರಾದ ಅಶ್ಫಾಕ್ ಹವಾಲ್ದಾರ, ಬಸವರಾಜ ಸಂಗೊಳ್ಳಿ, ಸಿದ್ದರಾಮ ಮಾರಿಹಾಳ, ಪ್ರವೀಣಗೌಡ ಜಕ್ಕನಗೌಡರ, ಕಿರಣ ವಾಳದ, ಸುರೇಶ ಕಿತ್ತೂರು, ಸಂಜೀವ ಲೋಕಾಪುರ, ಶಂಕರಗೌಡ ಪಾಟೀಲ, ಸಂತೋಷ ಕೋಟಬಾಗಿ ಉಪಸ್ಥಿತರಿದ್ದರು.