ಕೋಲಾರ: ತಾಲ್ಲೂಕಿನ ಹಳ್ಳದಗೆಣ್ಣೂರ ಗ್ರಾಮದಲ್ಲಿ ಹಿರೇಮಠ ಪರಿವಾರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವೀರಶೈವ ಸಮಾಜದ ೧೩ ವಟುಗಳ ಅಯ್ಯಾಚಾರ ಮತ್ತು ಲಿಂಗ ದೀಕ್ಷೆ ಕಾರ್ಯಕ್ರಮ ಜರುಗಿತು.
ಭ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆಗಳೊಂದಿಗೆ ಒಟುಗಳಿಗೆ ಅಯ್ಯಾಚಾರ ಮಾಡುವ ಮೂಲಕ ಲಿಂಗದೀಕ್ಷೆ ನೀಡಲಾಯಿತು.
ಸಾನಿಧ್ಯ ವಹಿಸಿದ್ದ ಗಿರಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾ ಚಾರ್ಯ ಮಹಾಸ್ವಾಮಿಗಳು ಆಶಿರ್ವಚನ ನೀಡುತ್ತಾ ವೀರಶೈವ ಸಂಪ್ರದಾ ಯದಲ್ಲಿ ದೀಕ್ಷೆ ಪಡೆಯುವಿಕೆಗೆ ತುಂಬಾ ಒಳಾರ್ಥವಿದೆ “ದೀ ಯತೆ ಶಿವಜ್ಞಾನಂ ಕ್ಷೀ ಯತೆ ಪಾಶ ಬಂಧನಂ” ಎಂಬ ಅರ್ಥವನ್ನು ಹೊಂದುವ ಮೂಲಕ ದೀಕ್ಷೆಗೆ ಪರಮ ಪಾವನವಾದ ಸ್ಥಾನ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಕೊಣ್ಣೂರ ಮತ್ತು ಮುಳವಾಡ, ಸಿದ್ಧರೇಣುಕಾ ಶಿವಾಚಾರ್ಯ ಮಹಾ ಸ್ವಾಮಿಗಳು ಹಿರೇಮಠ ಚಿಮ್ಮಲಗಿ, ವೀರಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕಡಬ ಗಾಂವ, ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಬೇಲೂರು, ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮನಗೂಳಿ ಶಿವಲಿಂಗಯ್ಯ ಮಠಪತಿ, ವಿರಭದ್ರಯ್ಯ ಹಿರೇಮಠ, ಈಶ್ವರಪ್ಪ ಕೊರ್ತಿ, ಗುರುಪ್ಪ ಹೂಗಾರ, ರಮೇಶ ಸಂಗಳದ, ಸಂಗಣ್ಣಪ್ಪ ದೇಸಾಯಿ ಇತರರು ಇದ್ದರು.