Friday, 2nd June 2023

ಮುರುಘಾಮಠಕ್ಕೆ ತಾತ್ಕಾಲಿಕ ಉಸ್ತುವಾರಿಯಾಗಿ ಮಹಾಂತರುದ್ರ ಸ್ವಾಮೀಜಿ ನೇಮಕ

ಚಿತ್ರದುರ್ಗ: ಮುರುಘಾಮಠದ ಡಾ.ಶಿವಮೂರ್ತಿ ಶರಣರ ಬಂಧನದ ಬೆನ್ನಲ್ಲೇ ಮುರುಘಾಮಠಕ್ಕೆ ತಾತ್ಕಾಲಿಕವಾಗಿ ಉಸ್ತುವಾರಿಯನ್ನಾಗಿ ದಾವಣಗೆರೆಯ ಹೆಬ್ಬಾಳು ಶಾಖಾ ಮಠದ ಮಹಾಂತರುದ್ರ ಸ್ವಾಮೀಜಿಗಳನ್ನು ನೇಮಕ ಮಾಡಲಾಗಿದೆ.

ದಾವಣಗೆರೆ ಜಿಲ್ಲೆಯ ಹೆಬ್ಬಾಳದ ಮುರುಘಾಮಠದ ಶಾಖಾ ಮಠದ ಹಿರಿಯ ಸ್ವಾಮೀಜಿಗಳಾಗಿರುವ ಮಹಾಂತ ರುದ್ರ ಸ್ವಾಮೀಜಿ ಅವರಿಗೆ ಚಿತ್ರದುರ್ಗ ಮಠದ ಆಗುಹೋಗುಗಳ ಎಲ್ಲಾ ಜವಾಬ್ದಾರಿ ಗಳನ್ನು ಸದ್ಯಕ್ಕೆ ವಹಿಸಲಾಗಿದೆ.

ಚಿತ್ರದುರ್ಗದ ಮುರಘಾಮಠದ ಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣದ ಶಿವಮೂರ್ತಿ ಶ್ರೀಗಳನ್ನು ಬಂಧಿಸಲಾಗಿದೆ. ಸದ್ಯ ಅವರನನ್ನು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದ್ದು, ಚಿತ್ರದುರ್ಗದ ಜಿಲ್ಲಾ ಕಾರಾಗೃಹ ಕರೆದೊಯ್ಯಲಾಗಿದೆ.

ಹೀಗಾಗಿ ಸ್ವಾಮೀಜಿ ಇಲ್ಲದೆ ಮಠದ ಆವರಣದಲ್ಲಿ ಬಿಕೋ ಎನ್ನುತ್ತಿದೆ.

ಮುರುಘಾಮಠದಲ್ಲಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರು ಬರದಂತೆ ಮಠದ ಸುತ್ತಮುತ್ತ ಪೊಲೀಸರು ಬಿಗಿ ಬಂದೊಬಸ್ತ್ ಮಾಡಿದ್ದಾರೆ. ಬ್ಯಾಕ್ ಗೇಟ್, ಫ್ರಂಟ್ ಗೇಟ್ ಕೂಡ ಬಂದ್ ಮಾಡಲಾಗಿದೆ.

 

error: Content is protected !!