Tuesday, 3rd December 2024

ಮ್ಯಾಟ್ರಿಮೋನಿ App ದುರ್ಬಳಕೆ: ಶಿಕ್ಷಕನಿಗೆ ವಂಚನೆ

ಬಳ್ಳಾರಿ: ಮ್ಯಾಟ್ರಿಮೋನಿ ಆಯಪ್ ದುರ್ಬಳಕೆ ಮಾಡಿ ಶಿಕ್ಷಕನಿಗೆ ವಂಚನೆ ಎಸಗ ಲಾಗಿದೆ. ಕೇರಳ ಮೂಲದ ಯುವತಿಯರ ಮಾತಿಗೆ ಮರುಳಾಗಿ ಶಿಕ್ಷಕ ಬರೋಬ್ಬರಿ 8.5 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ.

ಎಂಬಿಬಿಎಸ್ ವಿದ್ಯಾರ್ಥಿನಿಯೆಂದು ನಂಬಿಸಿ ಕೇರಳದ ಆ ಯುವತಿ ಮೋಸ ಮಾಡಿ ದ್ದಾಳೆ. ಒಂದು ವಂಚಕ ತಂಡವೇ ಇದರಲ್ಲಿ ಭಾಗಿಯಾಗಿದೆ. ಹಲವು ದಿನಗಳಿಂದ ನಿರಂತರವಾಗಿ ವಾಟ್ಸಾಪ್ ಚಾಟ್, ಫೋನ್ ಕಾಲ್ ಮಾಡಿ ಯುವತಿಯರು ವಂಚಿಸಿ ದ್ದಾರೆ.

ಸಂಡೂರು ತಾಲೂಕಿನ ಖಾಸಗಿ ಶಾಲೆಯ ಶಿಕ್ಷಕ ದೇವೇಂದ್ರಪ್ಪ ಎಂಬುವವರೇ ಮೋಸ ಕ್ಕೀಡಾದ ವ್ಯಕ್ತಿ. ಹರ್ಷಿತಾ ಎಂಬ ಹೆಸರಿ ನಲ್ಲಿ ಯುವತಿ ವಂಚನೆ ಎಸಗಿದ್ದಾಳೆ. ಆದರೆ ಹರ್ಷಿತಾ ಸ್ನೇಹಿತನ ಹೆಸರಿನಲ್ಲಿ ಹಣ ಪಡೆದಿದ್ದಾಳೆ. ಶಿಕ್ಷಕ ಯುವತಿಯ ಮಾತು ನಂಬಿ ಹೈದ್ರಾಬಾದ್ ವರೆಗೂ ಹೋಗಿಬಂದಿದ್ದಾರೆ. ಈಗ ಶಿಕ್ಷಕ ದೇವೇಂದ್ರಪ್ಪನನ್ನು ಸಂಡೂರಿನ ಖಾಸಗಿ ಶಾಲೆ ಕೆಲಸದಿಂದ ವಜಾಗೊಳಿಸಿದೆ.

ಹಣ ಕಳೆದುಕೊಂಡು ಕಂಗಾಲಾದ ನಂತರ ಶಿಕ್ಷಕ ದೇವೇಂದ್ರಪ್ಪ ಅನ್ಯ ಮಾರ್ಗ ಕಾಣದೆ ಠಾಣೆಯ ಮೇಟ್ಟಿಲೇರಿದ್ದಾರೆ. ಈ ಸಂಬಂಧ ಇದೀಗ ಬಳ್ಳಾರಿಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.