ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ ಸಮ್ಮುಖದಲ್ಲಿ ರೇವಗ್ಗಿ ರಟಕಲ್ ರೇವಂಸಿದ್ದೇಶ್ವರ ದೇವಸ್ಥಾನದ ಸಭೆ
ದೇವಸ್ಥಾನದ ಅಭಿವೃದ್ಧಿ ಪಡಿಸಿದ್ದು ಡಾ. ಉಮೇಶ ಜಾಧವ ಮತ್ತು ನನ್ನ ಅವಧಿಯಲ್ಲಿ ನಡೆದಿವೆ
ಚಿಂಚೋಳಿ : ರೇವಗ್ಗಿ ರಟಕಲ್ ರೇವಣಸಿದ್ದೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಸೇಡಂ ಸಹಾಯಕ ಆಯುಕ್ತ ರಾದ ಪ್ರಭುರೆಡ್ಡಿ ಅವರ ಸಮ್ಮುಖದಲ್ಲಿ ರಟಕಲ್ ರೇವಗ್ಗಿ ರೇವಣಸಿದ್ದೇಶ್ವರ ಅಭಿವೃದ್ಧಿಗೆ ಸಾರ್ವಜನಿಕರ ಆಹ್ವಾಲು ಸ್ವೀಕಾರದ ಸಭೆ ಶಾಸಕ ಡಾ. ಅವಿನಾಶ ಜಾಧವ ಅಧ್ಯಕ್ಷತೆಯಲ್ಲಿ ಜರುಗಿತು.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಡಾ. ಅವಿನಾಶ ಜಾಧವ, ದೇವಸ್ಥಾನದ ಅಭಿವೃದ್ಧಿಗಾಗಿ ಎಲ್ಲರೂ ಒಗಟ್ಟಿನಿಂದ ಸೇವಾ ಕಾರ್ಯಗಳು ಮಾಡೋಣ. ರೇವಣಸಿದ್ದೇಶ್ವರ ದೇವಸ್ಥಾನ ಈ ಭಾಗದ ಪ್ರತಿಯೊಬ್ಬರ ಆರಾಧ್ಯ ದೈವ. ಹೀಗಾಗಿ, ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು ಮತ್ತು ರಾಜಕೀಯಕ್ಕಾಗಿ ದೇವಸ್ಥಾನವನ್ನು ವೇದಿಕೆಯನ್ನಾಗಿ ಬಳಕೆ ಮಾಡಿಕೊಳ್ಳಬಾರದು.
ರೇವಣಸಿದ್ದೇಶ್ವರ ಎಲ್ಲ ಭಕ್ತರ ಪಾಲಿಗೆ ಆರಾಧ್ಯ ದೈವರಾಗಿದ್ದಾರೆ. ಇಲ್ಲಿಗೆ ಎಲ್ಲಾ ಜಾತಿ ಧರ್ಮದ ಭಕ್ತರ ದಂಡು ದರ್ಶನಕ್ಕಾಗಿ ಸಾಗಿ ಬರುತ್ತದೆ ಮತ್ತು ನೂರಾರು ವರ್ಷಗಳ ಇತಿಹಾಸ ಉಳ್ಳ ಈ ಪವಿತ್ರ ಸ್ಥಳಕ್ಕೆ ಪ್ರವಾಸಿಗಾರನ್ನು ಆಕರ್ಷಿಸುವಂತಹ ಅಭಿವೃದ್ಧಿ ಕಾಮಾಗಾರಿಗಳು ಮತ್ತು ಅತಿ ಎತ್ತರದ ಲಿಂಗ ಸಹಿತ ರೇವಣಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪನೆಯನ್ನು ಹಿಂದೆ ಶಾಸಕರಾಗಿದ್ದ ನಮ್ಮ ತಂದೆ ಡಾ. ಉಮೇಶ ಜಾಧವ ಮತ್ತು ನನ್ನ ಆಡಳಿತ ಅವಧಿ ಯಲ್ಲಿ ಮಾಡಲಾಗಿದೆ. ಇಲ್ಲಿ ಯಾವುದೇ ರಾಜಕೀಯ ಮಾಡದೆ ಎಲ್ಲರೂ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಸಾರ್ವಜನಿಕರ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಈ ಸಭೆ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರ ಮಾರ್ಗದರ್ಶನದಂತೆ ದೇವಸ್ಥಾನದ ಅಭಿವೃದ್ಧಿ ಪಡಿಸಲಾಗುವುದು. ಮುಂದಿನ ತಿಂಗಳು ನಡೆಯುವ ಸಭೆಯಲ್ಲಿ ಸಾರ್ವಜನಿಕವಾಗಿ ಲೆಕ್ಕಪತ್ರ ಇಡಲಾಗುವುದು ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯದರ್ಶಿಗಳು ಹಾಗೂ ಅರ್ಚಕರ ಮತ್ತು ಭಕ್ತಾದಿಗಳ ಮಧ್ಯ ಸಭೆ ನಡೆಯಿತು.
ಇದನ್ನೂ ಓದಿ: Kalaburagi News: ಚಿಮ್ಮಾಇದ್ಲಾಯಿ ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಬಿಜೆಪಿ ಮಡಿಲಿಗೆ