ಕೊಡೇಕಲ್: ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ

ಪಟ್ಟಣದ ಯುಕೆಪಿ ಕ್ಯಾಂಪ್ ಹಿಂಭಾಗದಲ್ಲಿರುವ ಆರ್.ಟಿ.ಜೆ ಕ್ರೀಡಾಂಗಣದಲ್ಲಿ ಕೊಡೇಕಲ್ ಪಟ್ಟಣದ ಶ್ರೀದೇವಿ ಮಹಿಳಾ ಗ್ರಾಮೀಣಾಭಿವೃದ್ದಿ ಶಿಕ್ಷಣ ಸಂಸ್ಥೆಯಡಿಯಲ್ಲಿ ಪ್ಯಾರಾ ಮೆಡಿಕಲ್ ಕಾಲೇಜ್ ಕೊಡೇಕಲ್, ಹುಣಸಗಿ ಹಾಗೂ ಮುದಗಲ್ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಯುವಕರಲ್ಲಿನ ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸುವ ಕ್ರೀಡಾ ಪ್ರವೃತ್ತಿಗೆ ಇಂದಿನ ದಿನಗಳಲ್ಲಿ ಕ್ರೀಡಾ ವೇದಿಕೆ ಅಗತ್ಯವಾಗಿದೆ. ಯಾವುದೇ ಮಾದರಿ ಕ್ರೀಡೆಯಾಗಿರಲಿ ಮಕ್ಕಳು ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿ.ಎಸ್.ಹಾವೇರಿ, ಮೋಹನ ಪಾಟೀಲ್, ದಾವಲಸಾಬ ಕಮತಗಿ, ವಸಂತಗೌಡ ಮಾಲಿಪಾಟೀಲ್, ಚಂದ್ರ ಶೇಖರ ಹೊಕ್ರಾಣಿ , ಷಣ್ಮುಖಪ್ಪ ರಾಯನಪಾಳ್ಯ, ಭೀಮನಗೌಡ ಬಿರಾದಾರ ಸೇರಿ ಇತರರು ಇದ್ದರು.
ಪ್ರಶಾಂತ ಪತ್ತಾರ ಸ್ವಾಗತಿಸಿದರು. ಶಿಕ್ಷಕ ಕೆ.ಬಿ.ಗಡ್ಡದ ನಿರೂಪಿಸಿದರು. ಪ್ಯಾರಾ ಮೆಡಿಕಲ್ ಕಾಲೇಜಿನ ಮುಖ್ಯಸ್ಥ ಮಲ್ಲಿಕಾರ್ಜುನ ಮಡಿವಾಳರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಅಮರೇಶ ವಂದಿಸಿದರು.