ಗೌರಿಬಿದನೂರು: ತಾಲೂಕಿನ ಬಳಗೆರೆ ಗ್ರಾಮದ ಕೆರೆಯ ಅಂಗಳವನ್ನೇ ಅಕ್ರಮವಾಗಿ ಖಾತೆ ಮಾಡಿಸಿಕೊಂಡು, ಇದೀಗ ಸದರಿ ಕೆರೆಯ ಅಂಗಳದ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟಕ್ಕೆ ಮುಂದಾಗಿದ್ದು, ಸದರಿ ಜಮೀನಿನ ಖಾತೆಯನ್ನು ರದ್ದುಗೊಳಿ ಕೆರೆಯನ್ನು ಉಳಿಸಬೇಕೆಂದು ಆಗ್ರಹಿಸಿ ಬಳಗೆರೆ ಗ್ರಾಮದ ನೂರಾರು ಮಂದಿ ರೈತರು ನಗರದ ತಾಲೂಕು ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಬಳಗೆರೆ ಗ್ರಾಮದ ಮುಖಂಡ ನಾಗೇಶ್ ಮಾತನಾಡುತ್ತಾ ಬಳಗೆರೆ ಗ್ರಾಮದ ಕೆರೆಯ ಅಂಗಳವನ್ನು ಇದೀಗ ಕೆಲ ಭೂ ಕಬಳಿಕೆದಾರರು ಅಕ್ರಮವಾಗಿ ಕೆರೆಯ ಅಂಗಳದ ಜಮೀನನ್ನು ಖಾತೆ ಮಾಡಿಸಿಕೊಂಡು,ಇದೀಗ ಸದರಿ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ.ನೂರಾರು ವರ್ಷಗಳಿಂದ ಸದರಿ ಜಮೀನು ಕೆರೆಯ ಅಂಗಳಕ್ಕೆ ಸೇರಿದ್ದು,ಇದೇ ಜಮೀನಿನಲ್ಲಿ ಸರ್ಕಾರದ ವತಿಯಿಂದ ಗ್ರಾಮಗಳಿಗೆ ಕುಡಿಯುವ ನೀರು ಸರಭರಾಜು ಮಾಡಲು ಕೊಳವೆ ಬಾವಿಗಳನ್ನು ಹಾಕಲಾಗಿದೆ.
ಜೊತೆಗೆ ಗ್ರಾಮ ಪಂಚಾಯತಿ ವತಿಯಿಂದ ಸದರಿ ಜಾಗದಲ್ಲಿ ಕೇಂದ್ರ ಸರ್ಕಾರದ ನರೇಗಾ ಯೋಜನೆಯಲ್ಲಿ ಕೆರೆಯ ಹೂಳನ್ನು ಎತ್ತುವ ಕೆಲಸ ಮಾಡಲಾಗಿದೆ,ಸದರಿ ಜಮೀನು ಖಾಸಗಿ ವ್ಯಕ್ತಿಗಳ ಜಮೀನಾಗಿದ್ದರೆ ಸರ್ಕಾರದ ಯೋಜನೆ ಗಳನ್ನು ಅದೇ ಜಾಗದಲ್ಲಿ ಅದೇಗೆ ಅನುಷ್ಟಾನ ಮಡಲಾಯಿತು ಎಂದು ಪ್ರಶ್ನಿಸಿದ ಅವರು ತಹಶಿಲ್ದಾರ್ ಈ ಕೂಡಲೆ ಸದರಿ ಜಮೀನಿನ ಖಾತೆಯನ್ನು ರದ್ದು ಪಡಿಸಿ ಕೆರೆಯ ಅಂಗಳವನ್ನು ಕೆರೆಯನ್ನು ಉಳಿಸಿಕೊಡಬೇಕೆಂದು ತಹಶಿಲ್ದಾರ್ ಅವರನ್ನು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಶಿಲ್ದಾರ್ ಮಹೇಶ್ ಪತ್ರಿಯವರು ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಪತ್ರವನ್ನು ಸ್ವೀಕರಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಾ ಬಳಗೆರೆಯ ಸದರಿ ಜಮೀನು ೧೯೩೦ ರರಿಂದಲೂ ಹಿಡುವಳಿ ಜಮೀನು ಎಂದು ದಾಖಲೆ ಇವೆ,ಈ ಕಾರಣದಿಂದಾಗಿ ಹಿಡುವಳಿದಾರರಿಗೆ ಖಾತೆಯಾಗಿದೆ,೧೯೩೦ ರ ಇನ್ನೂ ಹಿಂದಿನ ಸದರಿ ಜಮೀನಿನ ಕಂದಾಯ ದಾಖಲೆಗಳನ್ನು ಪರಿಶೀಲನೆ ನಡೆಸುವುದಾಗಿ ತಿಳಿಸಿದ ಅವರು,ಸದರಿ ಸಮೀನು ಸರ್ಕಾರದಿಂದ ಮಂಜೂರಾಗಿದ್ದರೆ, ಖಾತೆಯನ್ನು ರದ್ದು ಪಡಿಸಿ ಕೆರೆಗೆ ಉಳಿಸಿಕೊಡುವುದಾಗಿ ಅವರು ಪ್ರತಿಭಟನಾಕಾರರಿಗೆ ಭರವಸೆಯನ್ನು ನೀಡಿದರು.
ನಂತರ ಪ್ರತಿಭಟನಾಕಾರರು ತಹಶಿಲ್ದಾರ್ ಅವರ ಮಾತಿಗೆ ಸಮ್ಮತಿಸಿ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡರು.
ಇದನ್ನೂ ಓದಿ: #DentistProtest