ಗುಬ್ಬಿ: ಅಡಕೆ ತೆಂಗು ಕೊಬ್ಬರಿ ಹುಣಸೆಗೆ ಬೆಲೆ ಸ್ಥಿರತೆಯನ್ನು ಕಾಪಾಡಲು ನ್ಯಾಯಮೂರ್ತಿ ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೋಕು ಅಧ್ಯಕ್ಷ ಕೆ ಎನ್ ವೆಂಕಟೇ ಗೌಡ ತಿಳಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ ಹೆಚ್ಚು ವಹಿವಾಟು ಹೊಂದಿರುವ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು ಬೆಲೆಕುಸಿತದಿಂದ ರೈತರು ಮಾನಸಿಕವಾಗಿ ಕುಗ್ಗಿ ಹೋಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ರೈತರ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಸಿ ಶಂಕರಪ್ಪ ಮಾತನಾಡಿ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಸಮಕ್ಷಮ ರೈತ ಮುಖಂಡರು ಗಳೊಂದಿಗೆ ಚರ್ಚಿಸಲು ದಿನಾಂಕ ನಿಗದಿಪಡಿಸಬೇಕು ಭೂತಾನ್ ಸೇರಿದಂತೆ ಹೊರದೇಶಗಳಿಂದ ಸಾಗಾಣಿಕೆಯಾಗದಂತೆ ಕ್ರಮವಹಿಸಬೇಕು ಹುಣಸೆ ಬೆಳೆಯನ್ನು ವಿಮಾ ವ್ಯಾಪ್ತಿಗೆ ತಂದು ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಸಿ ಜಿ ಲೋಕೇಶ್ ಮಾತನಾಡಿ ಬಗರ್ ಹುಕುಂ ಸಮಿತಿಯಿಂದ ಸಾಗುವಳಿ ಪತ್ರ ನೀಡದಿರುವ ರೈತರಿಗೆ ಖಾತೆ ಪಾಣಿ ಮಾಡಿಕೊಡಲು ತಾಲೂಕ್ ಆಡಳಿತ ಮುಂದಾಗಬೇಕು ಆತ್ಮಹತ್ಯೆಗೆ ಶರಣಾಗಿರುವ ನೊಂದ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು ಸರ್ಕಾರ ಬೆಂಬಲ ಬೆಲೆ ಘೋಷಿಸದಿದ್ದಲ್ಲಿ ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ದಲಿತ ಮುಖಂಡ ಎನ್ ಎ ನಾಗರಾಜ್ ಮಾತನಾಡಿ ರೈತರು ಬ್ಯಾಂಕ್ ನಿಂದ ಸಾಲ ತೆಗೆದುಕೊಳ್ಳಲು ಫ್ರೂಟ್ ಐಡಿ ಕಾಲರ್ ದಾಖಲೆ ಒದಗಿಸಬೇಕು. ತಾಲೂಕ್ ಆಡಳಿತ ರೈತರಿಗೆ ದಾಖಲೆ ಒದಗಿಸಿಕೊಡದೆ ಬೇಜವಾಬ್ದಾರಿ ತೋರುತ್ತಿದೆ ಕಣ್ಣ ಮುಚ್ಚಾಲೆಯ ವಿದ್ಯುತ್ ಸಮಸ್ಯೆ ಮುಂದೆ ಹಗಲಿರಲು ಶ್ರಮವಹಿಸಿ ಬೆಳೆದ ಬೆಳೆಗಳಿಗೆ ಕನಿಷ್ಠ ಬೆಲೆಯು ಸಿಗದಿದ್ದರೆ ರೈತರು ಹೇಗೆ ಜೀವನ ನಡೆಸಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಿವಕುಮಾರ್, ಚನ್ನ ಬಸವಣ್ಣ, ಕಾಳೇಗೌಡ, ಅಸ್ಲಾಂ ಪಾಷಾ, ಜಗದೀಶ್, ದಲಿತ ಮುಖಂಡರಾದ ಎನ್ಎ ನಾಗರಾಜ್, ನಟರಾಜ್, ಕಿಟ್ಟದಕುಪ್ಪೆ ನಾಗರಾಜು, ಕೋಟೆ ಕಲ್ಲೇಶ್, ಬೆಟ್ಟಸ್ವಾಮಿ, ಮುಂತಾದವರಿದ್ದರು.
Read E-Paper click here