Tuesday, 3rd December 2024

Kalaburagi Breaking: ಅ. 29 ರಂದು ತಾಲೂಕ ರೈತ ಹಿತರಕ್ಷಣೆ ಸಮಿತಿ ಕೈಗೊಂಡಿರುವ ಪ್ರತಿಭಟನೆ ಮುಂದೂಡಿಕೆ

ಜಿಲ್ಲಾ ಕಾಂಗ್ರೆಸ್ ಮುಖಂಡರ ಮಧ್ಯಸ್ಥಿಕೆಯ ಭರವಸೆಯ ಮನವಿಗೆ ಪ್ರತಿಭಟನೆ ತಾತ್ಕಾಲಿಕ ಮುಂದೂಡಿಕೆ

ಚಿಂಚೋಳಿ : ಕಾಂಗ್ರೆಸ್ ಪಕ್ಷ ಮತ್ತು ಸರಕಾರ ಕಬ್ಬು ಬೆಳೆಗಾರರ ರೈತರ ಬೆನ್ನಿಗೆ ಇದೆ. ಹೀಗಾಗಿ ಅ. 29 ರಂದು ತಾಲೂಕ ರೈತ ಹಿತರಕ್ಷಣೆ ಸಮಿತಿ ಕೈಗೊಂಡಿರುವ ಪ್ರತಿಭಟನೆ ನಡೆಸುವುದನ್ನು ಕೈ ಬಿಡಬೇಕೆಂದು ಸಮಿತಿಗೆ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾವ ಟಿ ಟಿ ಅವರು ಮನವಿ ಮಾಡಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಚಿಂಚೋಳಿ ಸಿದ್ದಸಿರಿ ಎಥಿನಾಲ ಕೈಗಾರಿಕೆ ಕಾರ್ಖಾನೆ ಬಂದ್ ಮಾಡಿರುವುದರಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸರಕಾರದ ಯಾವುದೇ ಕೈವಾಡ ಇಲ್ಲ. ಕೆಲವರು ಪಕ್ಷದ ಮತ್ತು ಸರಕಾರ ಹಾಗೂ ಸಚಿವರುಗಳ ಮೇಲೆ ಪತ್ರಿಕೆಗಳ ಮೂಲಕ ಆರೋಪಗಳು ಕೇಳಿ ಬರುತ್ತಿವೆ. ಕೆಲವು ಕಾನೂನು ತೊಡಕುಗಳಿಂದ ಕಾರ್ಖಾನೆಗೆ ಬಂದ್ ಆಗಿದೆ. ಕಾಂಗ್ರೆಸ್ ಪಕ್ಷ ಮತ್ತು ಸರಕಾರ ಮಾಡಿದಲ್ಲ. ಬಸವನಗೌಡ ಪಾಟೀಲ್ ಯತ್ನಾಳ ಅವರು ಕಾರ್ಖಾನೆ ಸ್ಥಾಪಿಸಿರುವುದು ಚಿಂಚೋಳಿ ಅಭಿವೃದ್ಧಿಗೆ ಮೆರಗು ತಂದುಕೊಡುವ ಪುಣ್ಯದ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಚಿಂಚೋಳಿ ಜನರ ಮತ್ತು ರೈತರ ಹಿತದ ಅಭಿವೃದ್ಧಿಗೆ ಬೆನ್ನೆಲುಬು ಯಾಗಿ ಸದಾ ನಿಲ್ಲುತ್ತದೆ. ಈ ಹಿನ್ನಲೆಯಲ್ಲಿ ಇದೇ ಅ. 28 ರಂದು ತಾಲೂಕ ರೈತ ಹಿತರಕ್ಷಣೆ ಸಮಿತಿಯೊಂದಿಗೆ ಜಿಲ್ಲಾಧಿಕಾರಿಗಳಿಗೆ ಭೇಟಿ ನೀಡಿ, ಸೂಕ್ತ ಬೆಂಬಲದೊಂದಿಗೆ ಕಂಪನಿಗೆ ನಂಬಿ ಬೆಳೆದ ರೈತರ ಕಬ್ಬು ಸೂಕ್ತ ಬೆಂಬಲದೊಂದಿಗೆ ಖರೀದಿಗೆ ಮನವಿ ಮಾಡಲಾಗುತ್ತದೆ. ಹೀಗಾಗಿ ಅ. 29 ರಂದು ಕೈಗೊಂಡಿರುವ ಪ್ರತಿಭಟನೆಯನ್ನು ಸಮಿತಿ ಕೈ ಬಿಡಬೇಕೆಂದು ಮನವಿ ಮಾಡಿಕೊಂಡರು.

ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಿ, ಜಿಲ್ಲಾ ಮುಖಂಡ ಬಸಯ್ಯ ಗುತ್ತೇದಾರ, ಅಬ್ದುಲ್ ಬಾಶೀದ್, ಲಕ್ಷ್ಮಣ ಆವಂಟಿ, ನಾಗೇಶ ಗುಣಾಜಿ, ಶಬ್ಬೀರ, ಮಲ್ಲಿಕಾರ್ಜುನ್ ಭೂಶೆಟ್ಟಿ, ಗಣಪತರಾವ, ಫರಿದ್ ಅವರು ಉಪಸ್ಥಿತರಿದ್ದರು.

ಅ. 29 ರಂದು ನಡೆಯುವ ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ : ಸಿದ್ದಸಿರಿ ಎಥಿನಾಲ ಕಾರ್ಖಾನೆಗೆ ನಂಬಿಕೊಂಡು ಚಿಂಚೋಳಿ, ಕಾಳಗಿ, ಸೇಡಂ ಭಾಗದ ಜನರು ಬೆಳೆದ ಕಬ್ಬು ಬೆಳಗಾರರು ಸಂಕಷ್ಟಕ್ಕೆ ಒಳಗಾದ ಹಿನ್ನಲೆಯಲ್ಲಿ ಸರಕಾರ ಕಬ್ಬು ಕಟ್ಟಾವು ಮಾಡಿಸಿ, ಖರೀದಿಸಿ ಸೂಕ್ತ ಬೆಂಬಲ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಲು ಪಕ್ಷಾತೀತವಾಗಿ ಅ. 29 ರಂದು ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಮುಖಂಡರ ಮಾರ್ಗದರ್ಶನದಂತೆ ಇದೇ ಅ. 28 ರಂದು ಮುಖಂಡರೊಂದಿಗೆ ಸಮಿತಿ ಜಿಲ್ಲಾಧಿಕಾರಿಗಳಿಗೆ ಭೇಟಿ ನಮ್ಮ ಮನವಿ ಸಲ್ಲಿಸಲಾಗುತ್ತದೆ. ಹೀಗಾಗಿ ತಾತ್ಕಾಲಿಕವಾಗಿ ಅ. 29 ರ ಪ್ರತಿಭಟನೆಯನ್ನು ಮುಂದೂಡಲಾಗುತ್ತದೆ. ನಮ್ಮ ಬೇಡಿಕೆಯಂತೆ ಸ್ಪಂದನೆ ದೊರಕದ ಸಂದರ್ಭದಲ್ಲಿ ಪ್ರತಿಭಟನೆ ಕೈಗೊಳುವ ದಿನಾಂಕ ತಿಳಿಸಲಾಗುತ್ತದೆ ಎಂದು ತಾಲೂಕ ರೈತ ಹಿತರಕ್ಷಣೆ ಸಮಿತಿ ಅಧ್ಯಕ್ಷ ಅಬ್ದುಲ್ ಬಾಶೀದ್ ತಿಳಿಸಿದ್ದಾರೆ.

ಇದನ್ನೂ ಓದಿ: Kalaburagi News: ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಆಚರಣೆ