ಚಿಕ್ಕಮಗಳೂರು: ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಶೃಂಗೇರಿ ಶ್ರೀಗಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿತನಿಗೆ ಶೃಂಗೇರಿ ಜೆ.ಎಂ.ಎಫ್.ಸಿ. ನ್ಯಾಯಾ ಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳ ಬಗ್ಗೆ ಫೇಸ್ಬುಕ್ ನನಲ್ಲಿ ಧಾರವಾಡದ ಮುನ್ನ ಹಜಾರ್(28) ಎಂಬ ವ್ಯಕ್ತಿ 2015ರ ನವೆಂಬರ್ 19 ರಂದು ಅವಹೇಳನಕಾರಿ ಬರಹ ಪೋಸ್ಟ್ ಮಾಡಿದ್ದ.
ಹಿಂದೂ ಧರ್ಮ, ದ್ವೇಷ ಭಾವನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಅವಮಾನ ಮಾಡಿರುವ ಬಗ್ಗೆ ಕೇಸ್ ದಾಖಲಿಸಿ 16 ಸಾಕ್ಷಿದಾರರ ವಿಚಾರಣೆ ನಡೆಸಲಾಗಿತ್ತು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶೃಂಗೇರಿ ನ್ಯಾಯಾಲಯದ ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್ ಅವರು ಆರೋಪಿಗೆ ಮೂರು ವರ್ಷ ಮೂರು ತಿಂಗಳು ಸಜೆ, 3000 ದಂಡ ವಿಧಿಸಿದ್ದಾರೆ.
ಸರ್ಕಾರಿ ಅಭಿಯೋಜಕರಾದ ಹರಿಣಾಕ್ಷಿ ವಾದ ಮಂಡಿಸಿದ್ದರು.