ತುಮಕೂರು:ತುಮಕೂರು ಸಂಘಟನಾತ್ಮಕ ಜಿಲ್ಲೆಯ ವಿವಿಧ ಪ್ರಕೋಷ್ಠಗಳ ಸಂಯೋಜಕರಾಗಿ ಹಿರಿಯ ಬಿಜೆಪಿ ಮುಖಂಡ ಹೇರೂರು ಹೆಚ್.ಎಂ.ರವೀಶಯ್ಯ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ನೇಮಕ ಮಾಡಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿ ಕಮಲ ಕೃಪಾದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೇರೂರು ಹೆಚ್.ಎಂ.ರವೀಶಯ್ಯ ಅವರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು,ಹೆಚ್.ಎಂ.ಟಿ ನೌಕರರ ಸಂಘದಲ್ಲಿ ಕಾರ್ಯನಿರ್ವಹಿಸಿ,ಕಳೆದ 10 ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ, ತುಮಕೂರು ನಗರ ಮಂಡಲದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಹೆಚ್.ಎಂ.ರವೀಶ್ ಅವರಿಗೆ ಹೆಚ್ಚಿನ ಜವಾಬ್ದಾರಿ ವಹಿಸುವ ನಿಟ್ಟಿನಲ್ಲಿ ಪ್ರಕೋಷ್ಠಗಳ ಸಂಯೋಜಕರಾಗಿ ನೇಮಕ ಮಾಡ ಲಾಗಿದೆ.ಇದು ಚುನಾವಣಾ ಸಮಯ.ಹಾಗಾಗಿ ಮತ್ತಷ್ಟು ಸಕ್ರಿಯರಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.
ತುಮಕೂರು ಸಂಘಟನಾತ್ಮಕ ಜಿಲ್ಲೆಯ ಪ್ರಕೋಷ್ಠಗಳ ಸಂಯೋಜಕರಾಗಿ ನೇಮಕಗೊಂಡಿರುವ ಹೆಚ್.ಎಂ.ರವೀಶಯ್ಯ ಮಾತನಾಡಿ,ವಿಧಾನಪರಿಷತ್ ಸದಸ್ಯರು ಹಾಗೂ ತುಮಕೂರು ಮತ್ತು ದಾವಣಗೆರೆ ಜಿಲ್ಲಾ ಪ್ರಭಾರಿಗಳು ಆದ ನವೀನ್ ರವರು ಮತ್ತು ಜಿಲ್ಲಾಧ್ಯಕ್ಷರಾದ ಹೆಚ್.ಎಸ್.ರವಿಶಂಕರ್ ಅವರುಗಳು ಹಾಗೂ ಇನ್ನಿತರ ನಾಯಕರುಗಳು ಈ ಜವಾಬ್ದಾರಿ ನೀಡಿದ್ದಾರೆ.
ನಮ್ಮ ಸಂಘಟನಾತ್ಮಕ ಜಿಲ್ಲೆಗೆ 7 ವಿಧಾನಸಭಾ ಕ್ಷೇತ್ರಗಳು ಬರಲಿದ್ದು,ಇದರಲ್ಲಿನ 9 ಮಂಡಲಗಳ 25- 30 ಪ್ರಕೋಷ್ಠಗಳ ಬರಲಿದ್ದು,ಕಾರ್ಮಿಕ,ವೈದ್ಯ, ವಕೀಲರು,ಕೈಗಾರಿಕಾ ಮಾಲೀಕರು, ಅಡಿಕೆ ತೆಂಗು ಬೆಳೆಗಾರರು ಮತ್ತು ಹೊಟೇಲ್ ಉದ್ದಿಮೆದಾರರ ಪ್ರಕೋಷ್ಠಗಳು ಸೇರಿದಂತೆ ಹಲವು ಪ್ರಮುಖ ಪ್ರಕೋಷ್ಠಗಳಿವೆ. ಅವರೆಲ್ಲರನ್ನು ಒಗ್ಗೂಡಿಸಿ, ಮುಂದಿನ 2023ರ ಚುನಾವಣೆಯಲ್ಲಿ ಪಕ್ಷದ ಪರವಾಗಿ ಹೆಚ್ಚು ಮತಗಳು ಬರುವಂತೆ ಪ್ರಯತ್ನಿಸಲಾಗುವುದು. ಈ ಹಿಂದೆಯೂ ನಗರ ಮಂಡಲ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದು,ಮುಂದಿನ ದಿನಗಳಲ್ಲಿ ಮತ್ತಷ್ಟು ಸಕ್ರಿಯನಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಈ ವೇಳೆ ಪಕ್ಷದ ಮುಖಂಡರಾದ ಹನುಮಂತರಾಜು, ಟೂಡಾ ಸದಸ್ಯ ಸತ್ಯಮಂಗಲ ಜಗದೀಶ್, ಗಣೇಶ್ ಪ್ರಸಾದ್ ಓಬಿಸಿ ಮೋರ್ಚಾ ಕಾರ್ಯದರ್ಶಿ ರುದ್ರೇಶ್, ನಗರ ಕಾರ್ಯದರ್ಶಿ ಕೆ.ಎಸ್.ಕುಮಾರ್,ಗುರುಪ್ರಸಾದ್, ಜಗದೀಶ್ ಹೆಚ್.ಎಂ.ಟಿ, ರಾಜಶೇಖರ್, ಗಿರೀಶ್, ರಾಜ್ಯ ಕಾರ್ಯದರ್ಶಿ ರುದ್ರೇಶ್, ಎ.ಎನ್.ಶಶಿಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.