ವಿಜಯಪುರ : ಸತ್ಸಂಗ ಎನ್ನುವುದು ಆದರ್ಶ ಬದುಕಿಗೆ ಪ್ರೇರಕ ಶಕ್ತಿಯಾಗಿದೆ ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಸದಾ ನಾವು ಸಜ್ಜನರ ಸತ್ಪುರುಷರ ಸಾಂಗತ್ಯದಲ್ಲಿ ಇದ್ದರೆ ಸತ್ಸಂಗದ ಪ್ರಭಾವದಿಂದ ನಮ್ಮ ಮನೋವಿಕಾರಗಳು ಅಳಿದು ಪ್ರೀತಿ ಭಾತೃತ್ವ ಸಹೋದರತೆ ಸಂಸ್ಕಾರಯುತ ಜೀವನ ನಮ್ಮದಾಗಿ ನಾವು ನೆಮ್ಮದಿಯ ಜೀವನ ನಡೆಸಬಹುದು ಎಂದು ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಹೇಳಿದರು .
ನಗರದ ಐಶ್ವರ್ಯ ನಗರದಲ್ಲಿ ಶ್ರೀ ವರದಾಂಜನೇಯ ದೇವಸ್ಥಾನ ಆವರಣ ದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಹನುಮಂತ್ ಚಿಂಚಲಿ ಅವರು ನಿರ್ಮಿಸಿದ ವರದಾಂಜನೇಯ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಯಂ ಪ್ರೇರಣೆಯಿಂದ ಬಡಾವಣೆಯಲ್ಲಿ ನಡೆಯುತ್ತ ಬಂದಿರುವ ಸತ್ಸಂಗ ಕಾರ್ಯ ಕ್ರಮಕ್ಕೆ ನೆರವಾಗಲೆಂದು ಈ ವೇದಿಕೆಯ ಕಾಮಗಾರಿಯನ್ನು ತಮ್ಮ ಸ್ವಂತ ಖರ್ಚಿನಿಂದ ನಿರ್ವಹಿಸಿ ಭಕ್ತಾದಿಗಳಿಗೆ ಅನುವು ಮಾಡಿಕೊಟ್ಟ ಹನುಮಂತ ಚಿಂಚಲಿ ಅವರನ್ನು ಇದೇ ಸಂದರ್ಭದಲ್ಲಿ ಸಂಗಮೇಶ ಬಬಲೇಶ್ವರ ಹಾಗೂ ಬಡಾವಣೆಯ ಮುಖಂಡರು ಸತ್ಕರಿಸಿ ಅಭಿನಂದಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಪ್ರಥಮ ದರ್ಜೆ ಗುತ್ತಿಗೆದಾರ ರಾದ ಬಿ ಎಸ್ ಬಿರಾದಾರ ಸದಾಶಿವ ಚಿಕ್ಕರೆಡ್ಡಿ ಅರವಿಂದ್ ಗೊಬ್ಬೂರ ಗುರುರಾಜ್ ಕೌಲಗಿ.ಉದ್ಯಮಿಗಳಾದ ಗಂಗಾಧರ ಸಂಬಣ್ಣಿ ರಾಜುಗೌಡ ಪಾಟೀಲ ಕುದರಿ ಸಾಲೋಡಗಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷರಾದ ಬಿ ಎನ್ ಬಿರಾದಾರ ಕಾರ್ಯನಿರ್ವಾಹಕ ಅಭಿಯಂತರರಾದ ಸಿ ಬಿ ಚಿಕ್ಕಲಕಿ.ವೇದಮೂರ್ತಿ ಎಂ ಸಿ ಹಿರೇಮಠ ಶಂಕರ ಶಿಧರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.
ನಿವೃತ್ತ ಪ್ರಾಚಾರ್ಯರಾದ ಎಂ ಓ ಶಿರೂರ ಸ್ವಾಗತಿಸಿದರು. ಖ್ಯಾತ ಸಾಹಿತಿಗಳಾದ ಡಾ. ಮಲ್ಲಿಕಾರ್ಜುನ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸತ್ಕರಿಸಲಾಯಿತು. ಐಶ್ವರ್ಯ ನಗರ ಹಾಗೂ ಸುತ್ತಮುತ್ತಲಿನ ಬಡಾವಣೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.