Wednesday, 27th November 2024

ಪಪಂ ಪಿಠೋಪಕರಣ ಜಪ್ತಿಗೆ ನ್ಯಾಯಾಲಯ ಆದೇಶ

ರೈತರಿಗೆ 48ಲಕ್ಷ ಪರಿಹಾರ ಬಾಕಿ.. ಪಪಂಗೆ ಎಚ್ಚರಿಕೆ ರವಾನಿಸಿದ ನ್ಯಾಯಾಲಯ
ನ್ಯಾಯಾಲಯದ ಸಿಬ್ಬಂಧಿ ಉಪಸ್ಥಿತಿಯಲ್ಲಿ ಪಿಠೋಪಕರಣ ಜಪ್ತಿ
ಕೊರಟಗೆರೆ: ಹೇಮಾವತಿ ಕುಡಿಯುವ ನೀರಿನ ಶುದ್ದಿಕರಣ ಘಟಕ ನಿರ್ಮಾಣಕ್ಕಾಗಿ 2009-10ರಲ್ಲಿ ಜೆಟ್ಟಿಅಗ್ರಹಾರ ರೈತರಿಂದ ಭೂಸ್ವಾಧೀನ ಪಡಿಸಿಕೊಂಡ ಜಮೀನಿನ ಭೂಪರಿಹಾರವನ್ನು 2018ರಲ್ಲಿ ನ್ಯಾಯಾಲಯದ ಆದೇಶದ ನಂತರವು ನೀಡದಿರುವ ಪರಿಣಾಮ ಪಪಂಯ ಪಿಠೋಪಕರಣ ವಶ ಪಡಿಸಿಕೊಳ್ಳುವಂತೆ ಮಧುಗಿರಿ ಅಧಿಕ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಮಾಡಿರುವ ಘಟನೆ ಗುರುವಾರ ನಡೆದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಮದ ರೈತರಾದ ಬಸವರಾಜು ಮತ್ತು ನಂದೀಶ್ ಎಂಬ ರೈತರ ಜಮೀನನ್ನು 2009ರಲ್ಲೇ ಹೇಮಾವತಿ ಕುಡಿಯುವ ನೀರಿನ ಶುದ್ದಿಕರಣ ಘಟಕ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. 2018ರಲ್ಲೇ ಅಗ್ರಹಾರ ರೈತರಿಗೆ ತಕ್ಷಣ ಭೂಪರಿಹಾರ ನೀಡುವಂತೆ ಕೊರಟಗೆರೆ ಪಪಂಗೆ ಮಧುಗಿರಿ ಸಿವಿಲ್ ನ್ಯಾಯಾಲಯವು ಆದೇಶ ಮಾಡಿದೆ.
ಮಧುಗಿರಿಯ ಘನ ಸಿವಿಲ್ ನ್ಯಾಯಾಲಯವು 2018ರಲ್ಲೇ ಆದೇಶ ಮಾಡಿದೆ. ಕೊರಟಗೆರೆ ಪಪಂ ಮುಖ್ಯಾಧಿಕಾರಿಗೆ ಈ ಹಿಂದೆಯೇ ವಾರೆಂಟ್ ಜಾರಿಯಾಗಿದೆ. ನ್ಯಾಯಾಲಯದ ಆದೇಶವನ್ನು ನಿರ್ಲಕ್ಷ ಮಾಡಿರುವ ಪರಿಣಾಮ ಕೊರಟಗೆರೆ ಪಪಂಯ ಮುಖ್ಯಾ ಧಿಕಾರಿ, ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಕಚೇರಿಯ ಪಿಠೋಪಕರಣ ಜಪ್ತಿ ಮಾಡಿ ಮಧುಗಿರಿ ಸಿವಿಲ್ ನ್ಯಾಯಾಲಯವು ಆದೇಶ ಮಾಡಿದೆ.
ಕೊರಟಗೆರೆ ಸಿವಿಲ್ ನ್ಯಾಯಾಲಯದ ಅಮೀನರಾದ ಮಂಜುನಾಥ ಮತ್ತು ಪರಮೇಶ್ವರಯ್ಯ ನೇತೃತ್ವದಲ್ಲಿ ಪಪಂ ಕಚೇರಿಯ ಪಿಠೋಪಕರಣವನ್ನು ವಶಕ್ಕೆ ಪಡೆಯಲಾಗಿದೆ. ಇದೇ ಸಂದರ್ಭದಲ್ಲಿ ಪಪಂಯ ಮುಖ್ಯಾಧಿಕಾರಿ ಭಾಗ್ಯ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂಧಿವರ್ಗ ಉಪಸ್ಥಿತರಿದ್ದರು.
*
ಜೆಟ್ಟಿಅಗ್ರಹಾರದ ಇಬ್ಬರು ರೈತರಿಗೆ 48ಲಕ್ಷಕ್ಕೂ ಅಧಿಕ ಪರಿಹಾರ ನೀಡಲು ನ್ಯಾಯಾಲಯ ಆದೇಶ ಮಾಡಿದೆ. ರೈತರಿಗೆ ಜಮೀನು ಸ್ವಾಧೀನದ ಪರಿಹಾರ ನೀಡುವಲ್ಲಿ ಪಪಂ ವಿಫಲವಾಗಿದೆ. ಆದೇಶವಾಗಿದೆ. ಮಧುಗಿರಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಕೊರಟಗೆರೆ ಪಪಂಯ ಪಿಠೋಪಕರಣವನ್ನು ಜಪ್ತಿ ಮಾಡಲಾಗಿದೆ.
ಮಂಜುನಾಥ. ಅಮೀನ್. ನ್ಯಾಯಾಲಯ. ಕೊರಟಗೆರೆ
ಹೇಮಾವತಿ ನೀರಿನ ಘಟಕ ನಿರ್ಮಾಣಕ್ಕಾಗಿ 2009ರಲ್ಲಿ ನನ್ನ ಜಮೀನು ಸ್ವಾಧೀನ ಮಾಡಿದ್ದಾರೆ. 2018ರಲ್ಲಿ ಪರಿಹಾರ ನೀಡು ವಂತೆ ನ್ಯಾಯಾಲಯ ಆದೇಶ ಮಾಡಿದೆ. ನಮಗೇ ಇನ್ನೂ 48ಲಕ್ಷಕ್ಕೂ ಅಧಿಕ ಪರಿಹಾರ ಬರಬೇಕಿದೆ. ನ್ಯಾಯಾಲಯದ ಆದೇಶ ಪಾಲನೆ ಮಾಡದಿರುವ ಹಿನ್ನಲೆ ಇಂದು ಪಿಠೋಪಕರಣ ಜಪ್ತಿ ಮಾಡಲಾಗಿದೆ.
ನಂದೀಶ್. ರೈತ. ಜೆಟ್ಟಿಅಗ್ರಹಾರ
ನ್ಯಾಯಾಲಯದ ಆದೇಶವನ್ನು ಕಾರ್ಯಗತ ಮಾಡುವುದು ಪಪಂ ಅಧಿಕಾರಿಗಳ ಪ್ರಮುಖ ಜವಾಬ್ದಾರಿ. ಪಪಂಯಿಂದ ಆದೇಶ ನಿರ್ಲಕ್ಷ ಮಾಡಿರುವ ಪರಿಣಾಮ ಈಗ ಸಮಸ್ಯೆ ಆಗಿದೆ. ನ್ಯಾಯಾಲಯ ಪಿಠೋಪಕರಣ ವಶಕ್ಕೆ ಪಡೆದಿರುವ ಬಗ್ಗೆ ನನಗೇ ಮಾಹಿತಿ ಇಲ್ಲ. ಸರಕಾರದ ಅನುಧಾನ ಮತ್ತು ಪಪಂಯಿಂದ ತಕ್ಷಣ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುತ್ತೇನೆ.
ಡಾ.ಜಿ.ಪರಮೇಶ್ವರ್. ಶಾಸಕ. ಕೊರಟಗೆರೆ