Thursday, 26th December 2024

Chikkaballapur News: ಸ್ವರ್ಣಗೌರಿ ಶಿಕ್ಷಕಿಗೆ ಬೀಳ್ಕೊಡುಗೆ ಸಮಾರಂಭ ಭಾಗಿಯಾದ ಮಾದಿಗ ದಂಡೋರ ಪದಾಧಿಕಾರಿಗಳು

ಚಿಂತಾಮಣಿ: ತಾಲ್ಲೂಕಿನ ಮೂಡಚಿಂತಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ವರ್ಷಗಳ ಕಾಲ ಕೆಲಸ ನಿರ್ವಹಿಸಿ ವಾಯೋ ನಿವೃತ್ತಿ ಪಡೆದ ಶಿಕ್ಷಕಿ ಸ್ವರ್ಣಗೌರಿ ರವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು.  

ಸಮಾರಂಭದಲ್ಲಿ ಮಾದಿಗ ದಂಡೋರ ಜನಜಾಗೃತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿ ಶಿಕ್ಷಕಿಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಮಾದಿಗ ದಂಡೋರ ಜನಜಾಗೃತಿ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ವಿ ರಾಮಪ್ಪ ರವರು ಮಾತನಾಡಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದ್ದಾರೆ.ತಮ್ಮ ಸೇವೆಯನ್ನು ನಿಷ್ಠೆಯಿಂದ ಸೇವೆ ಸಲ್ಲಿಸಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಹಲವು ಹಳ್ಳಿಗಳ ಶಾಲೆಗಳಲ್ಲಿ ಶಿಕ್ಷಕಿ ಉತ್ತಮ ಕೆಲಸ ನಿರ್ವಹಿಸಿದ್ದು ಅವರ ಸೇವೆ ಎಂದಿಗೂ ಮರೆಯಲಾಗುವುದಿಲ್ಲ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಪಿ ಎಂ ನರಸಿಂಹಯ್ಯ,ತಾಲೂಕು ಅಧ್ಯಕ್ಷರಾದ ಆನೂರು ಶ್ರೀನಿವಾಸ್, ಮಾಡಿಕೆರೆ ನಾರಾಯಣಸ್ವಾಮಿ, ಗ್ರಾಮದ ಮುಖಂಡರಾದ ಅಶ್ವತಪ್ಪ, ಕೃಷ್ಣಪ್ಪ, ಶ್ರೀನಿವಾಸ್, ವೆಂಕಟರವಣಪ್ಪ, ನಾಗೇಶ್, ಮಂಜುನಾಥ್, ಸೇರಿದಂತೆ ಶಾಲೆಯ ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.