Wednesday, 27th November 2024

ಸಿದ್ಧಾರ್ಥ ಇಂಜಿನಿಯರ್‌ ಕಾಲೇಜಿನ ಮಹಿಳಾ ಸಿಬ್ಬಂದಿಗೆ ಆರೋಗ್ಯ ಅರಿವು, ವೈದ್ಯಕೀಯ ತಪಸಣಾ ಶಿಬಿರ

ತುಮಕೂರು: ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಐಕ್ಯೂಎಸಿ ಘಟಕದ ಮಹಿಳಾ ಸಬಲೀಕರಣ ಸಮಿತಿ ಹಾಗೂ ಅಶ್ವಿನಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇ0ದ್ರದ  ವತಿಯಿಂದ ಡಾ.ಎಚ್.ಎ0.ಗ0ಗಾಧಯ್ಯ ಸರಣಿ ಉಪನ್ಯಾಸ ಮಾಲಿಕೆಯಲ್ಲಿ 2 ದಿನಗಳ ಸಿದ್ಧಾರ್ಥ ಇಂಜಿನಿಯರ್‌ಕಾಲೇಜಿನ ಮಹಿಳಾ ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿನಿಯರಿಗೆ “ಮಹಿಳೆಯರ ಆರೋಗ್ಯ ಅರಿವು” ಹಾಗೂ“ವೈದ್ಯಕೀಯತಪಸಣಾ”ಶಿಬಿರವನ್ನು ಹಮ್ಮಿಕೊಂಡಿತ್ತು.

“ಮಹಿಳೆಯರ ಆರೋಗ್ಯಅರಿವು” ಸರಣಿ ಮಾಲಿಕೆ ಉದ್ಘಾಟಿಸಿದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲ ರಾದ ಡಾ.ಎಂ.ಎಸ್.ರವಿಪ್ರಕಾಶ ಅವರು ಮಾತ ನಾಡಿ, ಕಾಲೇಜಿನ ಮಹಿಳಾ ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿನಿ ಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ಮನೆಯಲ್ಲಿ ಮಹಿಳೆಯೊಬ್ಬಳು ಆರೋಗ್ಯವಾಗಿದ್ದರೆ ಕುಟುಂಬವು ಆರೋಗ್ಯವಾಗಿರಲು ಸಾಧ್ಯ. ಹಾಗಾಗಿ ಈ ಎರಡು ದಿನದ ಅರಿವು ಮತ್ತು ತಪಸಣಾ ಶಿಬಿರದಲ್ಲಿ ಭಾಗವಹಿಸಿ ಮಹಿಳೆಯರಿಗೆ ಸಂಬ0ಧಿಸಿದ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಂಡು ತಪಾಸಣೆ ಮಾಡಿಸಿಕೊಳ್ಳಬಹುದು ಎಂದರು.

ಅಶ್ವಿನಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇ0ದ್ರದ ವೈದ್ಯರಾದ ಡಾ.ಅಶ್ವಿನಿ ಮಾತನಾಡಿ, ಮುಟ್ಟಿನ ಸಮಯದಲ್ಲಿ ಆಗುವ ಆರೋಗ್ಯದ ಏರುಪೇರು ಆ ಸಮಸ್ಯೆಗಳನ್ನು ಹೇಗೆ ನಿವಾರಿಸಬೇಕು, ಮುಟ್ಟಿನ ಸಂದರ್ಭದಲ್ಲಿ ಬಳಸುವ ಕಪ್ಗಳು ಮತ್ತು ಪ್ಯಾಡ್‌ಗಳ ಸುರಕ್ಷತೆ ಬಗ್ಗೆ ಹಾಗೂ ಮುಟ್ಟಿನ ಸಮಯದಲ್ಲಿ ಆರೋಗ್ಯದ ನೈರ್ಮಲ್ಯ, ಆಹಾರ ಪದ್ಧತಿಯ ಬಗ್ಗೆ ಎಳೆಎಳೆಯಾಗಿ ಮಹಿಳಾ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರಿಗೆ ಮಹಿಳೆಯರ ಆರೋಗ್ಯದ ಅರಿವು ಉಪನ್ಯಾಸ ನೀಡುವ ಮೂಲಕ ತಿಳಿಸಿದರು.

ಇದೇ ಸಂದರ್ಭದಲ್ಲಿಅಶ್ವಿನಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇ0ದ್ರದ ವೈದ್ಯರಾದ ಡಾ.ಮೀನಾಕ್ಷಿ ಮಾತನಾಡಿ, ಒತ್ತಡ ಹೇಗೆ ಬರುತ್ತದೆ ಮತ್ತು ಯಾವುದು ಒತ್ತಡಕ್ಕೆ ಕಾರಣ ವಾಗುತ್ತದೆ. ಆಯುರ್ವೇದ ವೈದ್ಯಕೀಯದಲ್ಲಿ ಒತ್ತಡ ವನ್ನು ಹೇಗೆ ನಿವಾರಿಸಬೇಕು, ಚಿಕಿತ್ಸೆ, ಆಹಾರ ಪದ್ಧತಿಮತ್ತು ಪ್ರಕೃತಿಯಲ್ಲಿಯೇ ಸಿಗುವ ವೈದ್ಯ ಮೂಲಗಳನ್ನು ವಿವರಿಸಿ ದರು.

ಎರಡು ದಿನದ ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಇಂಜಿನಿಯರ್‌ ಕಾಲೇಜಿನ ಮಹಿಳಾ ಬೋಧಕ, ಬೋಧಕೇತರ ಹಾಗೂ ಮಹಿಳಾ ವಿದ್ಯಾರ್ಥಿನಿಯರಿಗೆ “ವೈದ್ಯಕೀಯ ತಪಸಣಾ” ಶಿಬಿರ ಆಯೋಜಿಸಿತ್ತು. ನೂರಾರು ಮಹಿಳಾ ಸಿಬ್ಬಂದಿ ಮತ್ತು ವಿದ್ಯಾರ್ಥಿನಿ ಯರು ತಪಸಣಾ ಪಡೆದುಕೊಂಡರು.

ಕಾರ್ಯಕ್ರಮ ಮತ್ತು ಶಿಬಿರದಲ್ಲಿ ಸಾಹೇ ವಿಶ್ವವಿದ್ಯಾಲಯದ ಸಾಹೇ ರಿಜಿಸ್ಟಾçರ್‌ ಡಾ.ಎಂ.ಝೆಡ್‌.ಕುರಿಯನ್, ಐಕ್ಯೂಎಸಿ ಘಟಕದ ಮಹಿಳಾ ಸಬಲೀಕರಣ ಸಮಿತಿಯ ಸಂಯೋಜಕರಾದ ಡಾ.ಆರ್.ಪ್ರಕಾಶ, ಡಾ.ಸುಪ್ರಿಯಾ, ಡಾ.ಸುಷ್ಮಾ ಮತ್ತುಅಶ್ವಿನಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇ0ದ್ರದ ವೈದ್ಯರ ತಂಡ ªಹಾಘೂ ಸಿಬ್ಬಂದಿ ಭಾಗವಹಿಸಿದ್ದರು.