Saturday, 27th July 2024

20 ಸಾವಿರ ಮತ ಅಂತರದಿಂದ ಶ್ರೀರಾಮುಲುಗೆ ಸೋಲು

ಳ್ಳಾರಿ: ಬಿಜೆಪಿ ಲೆಕ್ಕಾಚಾರ ಉಲ್ಟಾ ಆಗಿದ್ದು, ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಶ್ರೀರಾಮುಲು ಸೋಲು ಕಂಡಿದ್ದಾರೆ.

ಶ್ರೀರಾಮುಲು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. 20 ಸಾವಿರ ಮತಗಳ ಅಂತರದಿಂದ ಶ್ರೀರಾಮುಲು ಸೋಲು ಕಂಡಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಹಾಲಿ ಶಾಸಕ ಬಿ.ನಾಗೇಂದ್ರ ಇದೀಗ ಶ್ರೀರಾಮುಲು ವಿರುದ್ಧ ಭರ್ಜರಿ ಗೆಲುವು ಸಾಧಿಸಿ ದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಕಾಂಗ್ರೆಸ್ ಗೆದ್ದಿದೆ.

ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಶೇ.76.09 ರಷ್ಟು ಮತದಾನವಾಗಿತ್ತು. ಕ್ಷೇತ್ರದಲ್ಲಿ 1,16,096 ಪುರುಷ ಮತದಾರರು & 1,22,181 ಮಹಿಳಾ ಮತದಾರರು ಇದ್ದು, ಒಟ್ಟು 2,38,326 ಮತದಾರರನ್ನ ಕ್ಷೇತ್ರ ಹೊಂದಿದೆ. ಕ್ಷೇತ್ರದ 242 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 1,81,354 ಜನ ಮತ ಚಲಾಯಿಸಿದ್ದರು. ಕ್ಷೇತ್ರದಲ್ಲಿ ವಾಲ್ಮೀಕಿ ಸಮು ದಾಯದ ಬಿ.ಶ್ರೀರಾಮುಲು ಅವರಿಗೆ ಗೆಲ್ಲುವ ವಿಶ್ವಾಸ ಇತ್ತು, ಆದರೆ ಬಿ.ನಾಗೇಂದ್ರ ಸ್ಟ್ರಾಟಜಿ ವರ್ಕೌಟ್ ಆಗಿದೆ.

2018ರ ಅಸೆಂಬ್ಲಿ ಚುನಾವಣೆಯಲ್ಲಿ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಆದರೆ ಬಾಗಲಕೋಟೆಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸೋತಿದ್ದರು. ಈಗ ತವರು ಕ್ಷೇತ್ರಕ್ಕೆ ಮರಳಿದ್ದು, ಪೈಪೋಟಿ ಏರ್ಪಟ್ಟಿದೆ. ಬಳ್ಳಾರಿ ಮೂಲದವರೇ ಆದ ನಾಗೇಂದ್ರ 2018ರಲ್ಲಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ನಾಗೇಂದ್ರ ಕೂಡ ವಾಲ್ಮೀಕಿ ಸಮುದಾಯದವೇ ಆಗಿರುವ ಕಾರಣ ಭಾರಿ ಅಂತರದಲ್ಲಿ ಶ್ರೀರಾಮುಲು ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.

 

error: Content is protected !!