ಚಿಕ್ಕಬಳ್ಳಾಪುರ : ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ಜನವರಿ ೫,೨೦೨೫ ರಿಂದ ಜನವರಿ ೬, ೨೦೨೫ರವರೆಗೆ ನಡೆಯಲಿರುವ ೫೯ನೇ ರಾಜ್ಯಮಟ್ಟದ ಗುಡ್ಡಗಾಡು (ಕ್ರಾಸ್‌ಕಂಟ್ರಿ) ಓಟದ ಸ್ಪರ್ಧೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ವತಿಯಿಂದ ೧೬ ವರ್ಷದ ಬಾಲಕ-ಬಾಲಕಿಯರಿಗೆ ೨ ಕಿ.ಮೀ. ಓಟ, ೧೮ ವರ್ಷದ ಬಾಲಕರಿಗೆ ೬ ಕಿ.ಮೀ., ಬಾಲಕಿಯರಿಗೆ ೪ ಕಿ.ಮೀ. ಓಟ, ೨೦ ವರ್ಷದ ಬಾಲಕರಿಗೆ ೮ ಕಿ.ಮೀ., ಬಾಲಕಿಯರಿಗೆ ೬ ಕಿ.ಮೀ. ಪುರುಷ-ಮಹಿಳೆಯರಿಗೆ ೧೦ ಕಿ.ಮೀ., ಸ್ಪರ್ಧೆಗೆ ದಿನಾಂಕ ೨೮-೧೨-೨೦೨೪ನೇ ಶನಿವಾರ ಬೆಳಿಗ್ಗೆ ೧೧ ಗಂಟೆಗೆ ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಸರ್ ಎಂ.ವಿ.ಕ್ರೀಡಾಂಗಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ತಂಡದ ಆಯ್ಕೆ ಪ್ರಕ್ರಿಯನ್ನು ಹಮ್ಮಿಕೊಂಡಿದ್ದು, ಭಾಗವಹಿಸಲಿಚ್ಚಿಸುವ ಕ್ರೀಡಾಪಟುಗಳು ಯುಐಡಿ ಮತ್ತು ಜನನ ಪ್ರಮಾಣ ದೃಢೀಕರಣ ಪತ್ರ ಹಾಗೂ ಪ್ರವೇಶ ಶುಲ್ಕ ರೂ. ೧೦೦-ಗಳೊಂದಿಗೆ ಆಗಮಿಸಲು ಕೋರಿದೆ.
ಹೆಚ್ಚಿನ ವಿವರಗಳಿಗೆ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಮಂಚನಬಲೆ ಶ್ರೀನಿವಾಸ್ ಮೊ : ೯೭೪೦೬೧೫೫೩೪, ಜಂಟಿ ಕಾರ್ಯದರ್ಶಿ ಚಿಂತಾಮಣಿ ಮಂಜುನಾಥ್, ಮೊ: ೯೦೩೬೫೯೦೧೭೧ ಅವರನ್ನು ಸಂಪರ್ಕಿಸಲು ಕೋರಿದೆ.
ಇದನ್ನೂ ಓದಿ: sportsnews